ಮೀನುಗಾರಿಕೆ ಬಳಸುವ ಬಲೆಗೆ ಸಿಲುಕಿಕೊಂಡಿದ್ದ ಅಪರೂಪದ ಆಮೆಯ ರಕ್ಷಣೆ

Share

ಭಟ್ಕಳ: ಜಸ್ಟ್ ಡೈವ್ ಸ್ಕೂಬಾ ಡೈವಿಂಗ್ ತಂಡ(Just Dive)ನೇತ್ರಾಣಿ ದ್ವೀಪದಲ್ಲಿ ಸ್ಕೂಬಾ ಡೈವಿಂಗ್ ಮುಗಿಸಿ ಮರಳಿ ಬರುವ ವೇಳೆ ಮೀನುಗಾರಿಕೆ ಬಳಸುವ ಬಲೆಗೆ ಸಿಲುಕಿಕೊಂಡಿದ್ದ ಅಪರೂಪದ ಆಮೆಯನ್ನು ರಕ್ಷಣೆ ಮಾಡಿ ಪುನಃ ಸಮುದ್ರ ಬಿಟ್ಟು ತಮ್ಮ ಮಾನವೀಯತೆ ಮೆರೆದಿದ್ದಾರೆ.

ಮುರುಡೇಶ್ವರದ ಜಸ್ಟ್ ಡೈವ್ ಸ್ಕೂಬಾ ಡೈವಿಂಗ್ ತಂಡ ಮುರುಡೇಶ್ವರಕ್ಕೆ ಬಂದ ಪ್ರವಾಸಿಗರನ್ನು ನೇತ್ರಾಣಿ ದ್ವೀಪಕ್ಕೆ ಸ್ಕೂಬಾ ಡೈವಿಂಗ್ ಗೆ ಕರೆದುಕೊಂಡು ಹೋಗಿ ಪುನಃ ಮರಳಿ ಮುರುಡೇಶ್ವರಕ್ಕೆ ಬರುವ ವೇಳೆ ಸಮುದ್ರದ ಮದ್ಯದಲ್ಲಿ ಅಪರೂಪದ ಆಮೆಯೊಂದು ಮೀನುಗಾರಿಗೆ ಬಳಸುವ ಬಲೆಗೆ ಸಿಲುಕಿ ಒದ್ದಾಡುತ್ತಿರುವುದನ್ನು ಗಮನಿಸಿದ ತಂಡ ತಕ್ಷಣ ಬೋಟ್ ನಿಲ್ಲಿಸಿ ಅಮೆಯನ್ನು ಹಿಡಿದು ಅದಕ್ಕೆ ಸಿಲುಕಿಕೊಂಡಿದ್ದ ಬಲೆಯನ್ನು ತೆಗದು ಪುನಃ ಸಮುದ್ರಕ್ಕೆ ಬಿಟ್ಟಿದ್ದಾರೆ. ಇವರ ಈ ಕಾರ್ಯಯಕ್ಕೆ ಸ್ಕೂಬಾ ಡೈವಿಂಗ್ ಬಂದ ಪ್ರವಾಸಿಗರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!