ಮುರ್ಡೇಶ್ವರ ಲಯನ್ಸ್ ಕ್ಲಬ್ ಅಧ್ಯಕ್ಷರಾದ ಕಿರಣ ಕಾಯ್ಕಿಣಿಯವರ
ನೇತೃತ್ವದಲ್ಲಿ 2025-26ನೇ ಲಯನ್ ವರ್ಷದ ಸಮಾಜಸೇವೆಗಾಗಿ ಒಟ್ಟೂ 9
ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡಿತು.

ಗೋವಾದಲ್ಲಿ ಲಯನ್ ಜಿಲ್ಲಾ ಗವರ್ನರ್ ಜೈ
ಅಮೋಲ್ ನಾಯ್ಕ ನೇತೃತ್ವದಲ್ಲಿ ನಡೆದ ಪ್ರಶಸ್ತಿ ವಿತರಣಾ ಸಮಾರಂಭದಲ್ಲಿ ಗೋವಾ
ಹಾಗೂ ಕರ್ನಾಟಕ ರಾಜ್ಯವನ್ನೊಳಗೊಂಡ 115 ಕ್ಲಬ್‌ಗಳಲ್ಲಿ ಮುರ್ಡೇಶ್ವರ
ಲಯನ್ಸ್ ಕ್ಲಬ್ “ಬೆಸ್ಟ್ ಲಯನ್ಸ್ ಕ್ಲಬ್” ಬೆಸ್ಟ್ ಯುನಿಕ್ ಎಕ್ಟಿವಿಟಿ ಕ್ಲಬ್”
“ಬೆಸ್ಟ್ ಸ್ಕ್ರ್ಯಾಪ್ ಬುಕ್ ಅವಾರ್ಡ್” “ಗೋಲ್ಡನ್ ಕ್ಲಬ್ ಅವಾರ್ಡ್”ಗಳನ್ನು
ಪಡೆದುಕೊಂಡಿತು.

ವೈಯಕ್ತಿಕ ವಿಭಾಗದಲ್ಲಿ ಅಧ್ಯಕ್ಷರಾದ ಕಿರಣ ಕಾಯ್ಕಿಣಿಯವರು.

“ಬೆಸ್ಟ್ ಪ್ರೆಸಿಡೆಂಟ್ ಅವಾರ್ಡ್” ಕಾರ್ಯದರ್ಶಿಯಾದ ನಾಗೇಶ ಮಡಿವಾಳರವರು
“ಬೆಸ್ಟ್ ಸೆಕ್ರೆಟರಿ ಅವಾರ್ಡ್” ಕೋಶಾಧ್ಯಕ್ಷರಾದ ಎಮ್.ವಿ ಹೆಗಡೆಯವರು “ಡಿಸ್ಟ್ರಿಕ್ಟ್
ಗವರ್ನರ್ ಅಪ್ರಿಸಿಯೇಶನ್ ಅವಾರ್ಡ್” ಹಾಗೂ ಡಯಾಬೆಟಿಸ್ ಜಿಲ್ಲಾ ಚೇರ್
ಪರ್ಸನ್‌ರಾದ ಡಾ.ಸುನೀಲ್ ಜತ್ತನ್‌ರವರು “ಬೆಸ್ಟ್ ಜಿಲ್ಲಾ ಚೇರ್‌ಪರ್ಸನ್
ಅವಾರ್ಡ್” ಹಾಗೂ “ಇಂಟರ್‌ನ್ಯಾಶನಲ್ ಪ್ರೆಸಿಡೆಂಟ್ ಅಪ್ರಿಸಿಯೇಶನ್ ಅವಾರ್ಡ್”
ಪಡೆದುಕೊಂಡರು.
