ಆರ್ ಎನ್ ಶೆಟ್ಟಿ ಪದವಿ ಪೂರ್ವ ಕಾಲೇಜು ಮುರುಡೇಶ್ವರದಲ್ಲಿ ಪ್ರಥಮ ಪಿಯುಸಿ ವಿದ್ಯಾರ್ಥಿಗಳ ಸ್ವಾಗತ ಕಾರ್ಯಕ್ರಮ ಮತ್ತು ವಿದ್ಯಾರ್ಥಿ ಪ್ರತಿನಿಧಿಗಳ ಪದಗ್ರಹಣ ಸಮಾರಂಭವನ್ನು ಯಶಸ್ವಿಯಾಗಿ ನೆರವೇರಿಸಲಾಯಿತು.
ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದ ಸರ್ಕಾರಿ ಪ್ರೌಢಶಾಲೆ ಬಣಸಾಲೆಯ ಮುಖ್ಯೋಪಾಧ್ಯಾಯ ಶ್ರೀ ಸದಾಶಿವ ಎಂ ಹೆಗಡೆ ನಗರ ಪ್ರದೇಶಗಳಲ್ಲಿ ಸಿಗುವಂತ ವೃತ್ತಿಪರ ಕೋರ್ಸ್ಗಳ ತರಬೇತಿಗಳು ಸ್ಥಳೀಯವಾಗಿ ಸಿಗುತ್ತಿರುವುದಕ್ಕೆ ಸಂತೋಷ ವ್ಯಕ್ತಪಡಿಸಿದರು.

ವಿದ್ಯಾರ್ಥಿ ಪ್ರತಿನಿಧಿಗಳ ಮುಖ್ಯಸ್ಥರಾಗಿ ಕು.ಗಗನ್ ನಾಯ್ಕ, ಕು.ಪ್ರತಿಕ್ಷಾ ಭಟ್. ಉಪಮುಖ್ಯಸ್ಥರಾಗಿ ಕು.ಕೌಶಿಕ್ ರಾಥೋಡ್, ಕು.ಪ್ರಿಯಾಂಕಾ ನಾಯ್ಕ. ಸಾಂಸ್ಕೃತಿಕ ನಾಯಕರಾಗಿ ಕು.ಮದನ್ ನಾಯ್ಕ, ಕು.ತನುಶ್ರೀ ನಾಯ್ಕ. ಕ್ರೀಡಾ ನಾಯಕರಾಗಿ ಕು.ಹೇಮಂತ್ ನಾಯ್ಕ ಹಾಗೂ ಕು.ಕವನಾ ಭಟ್ ಆಯ್ಕೆಯಾಗಿದ್ದು ಇವರಿಗೆ ಪದಗ್ರಹಣ ಮಾಡಲಾಯಿತು.

ಶ್ರೀಮತಿ ಅಶ್ವಿನಿ ಶೇಟ್ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ವಾರ್ಷಿಕ ಸಂಯೋಜಕರಾದ ಶ್ರೀ ಕೃಷ್ಣಪ್ರಸಾದ್ ಪಿ ಹಾಗೂ ಸಾಂಸ್ಕೃತಿಕ ಸಂಚಾಲಕರಾದ ಶ್ರೀಮತಿ ವೀಣಾ ಖಾರ್ವಿ ವೇದಿಕೆ ಮೇಲೆ ಉಪಸ್ಥಿತರಿದ್ದರು. ನಂತರ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ತಮ್ಮ ಕೌಶಲ್ಯವನ್ನು ಪ್ರದರ್ಶಿಸಿದರು. ಕಾರ್ಯಕ್ರಮದಲ್ಲಿ ಎಲ್ಲಾ ಉಪನ್ಯಾಸಕರು, ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ದ್ವಿತೀಯ ಪಿಯುಸಿ ವಿದ್ಯಾರ್ಥಿಗಳು ಕಾರ್ಯಕ್ರಮವನ್ನು ಆಯೋಜಿಸಿದ್ದರು.
ಕು.ದೀಕ್ಷಾ ನಾಯ್ಕ ಅತಿಥಿಗಳನ್ನು ಸ್ವಾಗತಿಸಿದರೆ ಕು.ಶ್ರೀದೇವಿ ನಾಯ್ಕ ಎಲ್ಲರನ್ನು ವಂದಿಸಿದರು. ಕು
ಪ್ರಜ್ಞಾ ನಾಯ್ಕ, ಕು. ಪ್ರಿಯಾಂಕ ನಾಯ್ಕ ಕಾರ್ಯಕ್ರಮವನ್ನು ನಿರೂಪಿಸಿದರು.
