ಬೀನಾ ವೈದ್ಯ ಪಿಯು ಹಾಗೂ ಪದವಿ ಕಾಲೇಜಿನಲ್ಲಿ ಎನ್.ಸಿ.ಸಿ ರ‍್ಯಾಂಕಿ0ಗ್ ಹಾಗೂ ಬ್ಯಾಡ್ಜ್ ಪ್ರದಾನ ಸಮಾರಂಭ

Share

ಮುರ್ಡೇಶ್ವರ, ಜುಲೈ ೨೦: ಬೀನಾ ವೈದ್ಯ ಪಿಯು ಹಾಗೂ ಪದವಿ ಕಾಲೇಜು, ಮುರ್ಡೇಶ್ವರದಲ್ಲಿ ಎನ್.ಸಿ.ಸಿ ರ‍್ಯಾಂಕಿ0ಗ್ ಮತ್ತು ಬ್ಯಾಡ್ಜ್ ಪ್ರದಾನ ಸಮಾರಂಭವು ವಿಜೃಂಭಣೆಯಿ0ದ ನಡೆಯಿತು.

ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಭಾರತೀಯ ಸೇನೆಯ ನಿವೃತ್ತ ಪ್ಯಾರಾಟ್ರೂಪರ್ (ಕಮಾಂಡೋ) ಶ್ರೀ ಹರೀಶ್ ಮಂಜುನಾಥ ನಾಯ್ಕ್ ಭಾಗವಹಿಸಿ, ಎನ್.ಸಿ.ಸಿ ಕೆಡೆಟ್‌ಗಳಿಗೆ ದೇಶಸೇವೆ, ಶಿಸ್ತು, ನಾಯಕತ್ವ ಮತ್ತು ವ್ಯಕ್ತಿತ್ವ ವಿಕಾಸದ ಮಹತ್ವವನ್ನು ತಿಳಿಸಿದರು. ಇದೇ ಸಂದರ್ಭದಲ್ಲಿ ಭಾರತೀಯ ಸೇನೆಯಲ್ಲಿ ಸಲ್ಲಿಸಿದ ಅವರ ಅಮೋಘ ಸೇವೆಯನ್ನು ಗೌರವಿಸಿ, ಬೀನಾ ವೈದ್ಯ ಶಿಕ್ಷಣ ಸಂಸ್ಥೆಯ ವತಿಯಿಂದ ಅವರನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಬೀನಾ ವೈದ್ಯ ಎಜುಕೇಶನಲ್ ಟ್ರಸ್ಟ್ ನ ಟ್ರಸ್ಟಿ, ವ್ಯವಸ್ಥಾಪಕ ನಿರ್ದೇಶಕರಾದ ಡಾ. ಪುಷ್ಪಲತಾ ಮಂಕಾಳ್ ವೈದ್ಯ, ಕಾಲೇಜಿನ ಪ್ರಾಂಶುಪಾಲರಾದ ಶ್ರೀನಯೇಮ್ ಗೋರಿ, ನಿವೃತ್ತ ಕ್ಷೇತ್ರ ಶಿಕ್ಷಣಾಧಿಕಾರಿ ಹಾಗೂ ಬೀನಾ ವೈದ್ಯ ಶಿಕ್ಷಣ ಸಂಸ್ಥೆಯ ಶೈಕ್ಷಣಿಕ ಸಲಹೆಗಾರರಾದ ಶ್ರೀ ವಿ. ಡಿ. ಮೋಗೇರ ಉಪಸ್ಥಿತರಿದ್ದು ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.

ಸಮಾರಂಭದಲ್ಲಿ ಅರ್ಹತೆ ಮತ್ತು ಸಾಧನೆಯ ಆಧಾರದ ಮೇಲೆ ಆಯ್ಕೆಯಾದ ಎನ್.ಸಿ.ಸಿ ಕೆಡೆಟ್‌ಗಳಿಗೆ ವಿವಿಧ ರ‍್ಯಾಂಕಿ0ಗಳು ಹಾಗೂ ಬ್ಯಾಡ್ಜ್ಗಳನ್ನು ಪ್ರದಾನ ಮಾಡಲಾಯಿತು. ತಮ್ಮ ಶಿಸ್ತು, ನಾಯಕತ್ವ, ಸೇವಾ ಮನೋಭಾವ ಹಾಗೂ ಎನ್.ಸಿ.ಸಿಯಲ್ಲಿ ತೋರಿದ ಅತ್ಯುತ್ತಮ ಸಾಧನೆಗಾಗಿ ಕೆಡೆಟ್‌ಗಳನ್ನು ಅಭಿನಂದಿಸಲಾಯಿತು.

ಇದೇ ಸಂದರ್ಭದಲ್ಲಿ ಎನ್.ಸಿ.ಸಿಯ ಹಿರಿಯ ಕೆಡೆಟ್‌ಗಳ ಸೇವೆ, ಸಮರ್ಪಣೆ ಹಾಗೂ ಸಾಧನೆಯನ್ನು ಗೌರವಿಸುವ ಉದ್ದೇಶದಿಂದ ವಿದಾಯ ಸಮಾರಂಭವನ್ನು ಕೂಡ ಆಯೋಜಿಸಲಾಯಿತು. ತಮ್ಮ ಎನ್.ಸಿ.ಸಿ ಪಯಣವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ ಹಿರಿಯ ಕೆಡೆಟ್‌ಗಳಿಗೆ ಅಭಿನಂದನೆ ಸಲ್ಲಿಸಿ, ಅವರ ಮುಂದಿನ ಜೀವನಕ್ಕೆ ಶುಭ ಹಾರೈಸಲಾಯಿತು.

ಕಾರ್ಯಕ್ರಮದಲ್ಲಿ ಕಾಲೇಜಿನ ಉಪನ್ಯಾಸಕರು, ಸಿಬ್ಬಂದಿ, ಎನ್.ಸಿ.ಸಿ ಅಧಿಕಾರಿಗಳು, ಕೆಡೆಟ್‌ಗಳು ಹಾಗೂ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.

Leave a Reply

Your email address will not be published. Required fields are marked *

error: Content is protected !!