1500 ವರ್ಷ ಇತಿಹಾಸವಿರುವ ಭಟ್ಕಳದ ಶ್ರೀ ಪಶುಪತಿ ದೇವಸ್ಥಾನದ ನೂತನ ಶಿಲಾಮಯ ಕಟ್ಟಡದ ಶಿಲಾನ್ಯಾಸ

Share

ಭಟ್ಕಳ: ತಾಲೂಕಿನ ಬೋಯಿರಕೇರಿಯಲ್ಲಿರುವ ಸುಮಾರು 1500 ಇತಿಹಾಸ ಇರುವ ಪುರಾತನ ಈ ದೇವಾಲಯದ ನೂತನ ಶಿಲಾಮಯ ಕಟ್ಟಡದ ಶಿಲನ್ಯಾಸವನ್ನ ಉತ್ತರ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀಮಂಕಾಳು ವೈದ್ಯರವರು ನೆರವೇರಿಸಿದರು. ನಂತರ ಮಾತನಾಡಿದ ಅವರು ದೇವಸ್ಥಾನಗಳ ನಿರ್ಮಾಣ ಬಡಜನರ ಸೇವೆ ಇದು ಪುಣ್ಯದ ಕೆಲಸ ಇಂತಹ ಸೇವೆ ಮಾಡುವುದು ನನಗೆ ಒದಗಿ ಬಂದಿರುವುದು ಮಹಾಪುಣ್ಯ ಪಶುಪತಿ ದೇವಸ್ಥಾನವು ಸುಮಾರು 1500 ವರ್ಷಗಳ ಇತಿಹಾಸವಿರುವ ಪುರಾತನ ಕ್ಷೇತ್ರಗಳಲ್ಲಿ ಒಂದು ಹಲವಾರು ವರ್ಷಗಳಿಂದ ಜೀರ್ಣೋದ್ಧಾರವಾಗದೆ ಹಾಗೆಯೇ ಉಳಿದಿತ್ತು.

ಇಂದು ಈ ಪುಣ್ಯದ ಕೆಲಸ ಮಾಡುವ ಸಮಯ ನಮ್ಮೆಲ್ಲರಿಗೂ ಬಂದು ಒದಗಿದೆ ಎಂದು ಹೇಳಿದರು. ಆ ದೇವರು ಮೊದಲೇ ನಿಶ್ಚಯ ಮಾಡಿದಂತೆ ಯಾವ ಸಂದರ್ಭದಲ್ಲಿ ಯಾರಿಂದ ಕೆಲಸ ಆಗಬೇಕು ಆ ಕೆಲಸ ಅವರಿಂದಲೇ ಮಾಡಿಸುತ್ತಾನೆ. ಊರಿನ ಹಿರಿಯರು ಗ್ರಾಮಸ್ಥರೊಂದಿಗೆ ಕೂಡಿಕೊಂಡು ಈ ಕ್ಷೇತ್ರವನ್ನು ಜೀರ್ಣೋದ್ಧಾರವನ್ನ ಖಂಡಿತ ಮಾಡೋಣ ನಿಮ್ಮ ಕಾರ್ಯಕ್ಕೆ ನಾನು ಸದಾ ಬೆಂಬಲ ನೀಡುತ್ತೇನೆ . ಸರ್ಕಾರದಿಂದ ಈ ದೇವಸ್ಥಾನಕ್ಕೆ ಅನುದಾನವನ್ನ ನೀಡಿಸುತ್ತೇನೆ ಎಂದು ಹೇಳಿದರು.

ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದ ಮಾಜಿ ಸಚಿವ ಶಿವಾನಂದ ನಾಯ್ಕ್ ಮಾತನಾಡಿ ಊರಿನ ಯುವಕರು ಹಿರಿಯರ ಮಾರ್ಗದರ್ಶನದಲ್ಲಿ ಶ್ರೀ ಪಶುಪತಿ ದೇವಸ್ಥಾನ ವನ್ನು ಜೀರ್ಣೋದ್ಧಾರ ಮಾಡುವ ಮಹಾತರ ಕಾರ್ಯ ಕೈಗೊಂಡಿದ್ದಾರೆ. ನೂತನ ದೇವಾಲಯವು ಶೀಘ್ರದಲ್ಲಿ ಪೂರ್ಣಗೊಳ್ಳುವ ವಿಶ್ವಾಸ ನನಗಿದೆ ಇದಕ್ಕೆ ಬೇಕಾದ ಎಲ್ಲಾ ರೀತಿಯ ಸಹಕಾರ ನಾನು ನೀಡುತ್ತೇನೆ ಎಂದು ಹೇಳಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನ ಪಶುಪತಿ ದೇವಸ್ಥಾನದ ಆಡಳಿತ ಮಂಡಳಿಯ ಅಧ್ಯಕ್ಷ ಗೋವಿಂದನಾಯ್ಕ್ ವಹಿಸಿದ್ದರುಕಾರ್ಯಕ್ರಮದಲ್ಲಿ ಮಾಜಿ ಶಾಸಕ ಸುನಿಲ್ ನಾಯಕ್ ನಾಮಧಾರಿ ಸಮಾಜದ ಅಧ್ಯಕ್ಷ ಅರುಣ್ ನಾಯಕ್ ಉದ್ಯಮಿ ಪದ್ಮನಾಭ ಪ್ರಭು ಹಾಗೂ ಊರಿನ ಹಿರಿಯ ಮುಖಂಡರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!