ಕಳೆದ ಮೂರೂವರೆ ತಿಂಗಳಿನಿಂದ ಕಾಣೆಯಾದ ವ್ಯಕ್ತಿಯನ್ನ ತುಮಕೂರಿನಲ್ಲಿ ಪತ್ತೆ ಮಾಡಿದ ಭಟ್ಕಳದ ಪೊಲೀಸರು

Share

ಭಟ್ಕಳ : ಭಟ್ಕಳ ಶಹರ ಪೊಲೀಸ್ ಠಾಣೆಗೆ ದಿನಾಂಕ 18 -10 -2025 ರಂದು ಒಂದು ಗಂಟೆಗೆ ಶ್ರೀ ಗಪೂರ್ ಬೇಗ್ ವಯಸ್ಸು 41 ಕುಮಟಾ ತಾಲೂಕಿನ ಮಧ್ಗುಣಿ ಹಳ್ಕಾರ ಚಿತ್ರಗಿ ನಿವಾಸಿ ಆದ ಇವರು ದೂರು ನೀಡಿದ್ದು ಅದರಲ್ಲಿ ತನ್ನ ತಮ್ಮ ಜಾಕೀರ್ ಬೇಗ್ ವಯಸ್ಸು 32 ಈತನು ತನ್ನ ಮದುವೆ ಕುರಿತು ಚಿನ್ನ ಖರೀದಿ ಮಾಡಲು ಪಿರ್ಯಾದಿಯ ಹೆಂಡತಿ ಸಾಹೀನ್ ಮತ್ತು ಪಿರ್ಯಾದಿಯ ಮಗಳು ಮಹೇಕ್ ಇವರೊಂದಿಗೆ ಕುಮಟಾದಿಂದ ಭಟ್ಕಳಕ್ಕೆ ಬಂದಿದ್ದರು. ನೂರ್ ಮಸೀದಿಗೆ ಹೋಗಿ ನಮಾಜ್ ಮಾಡಿಕೊಂಡು ಬರುತ್ತೇನೆ ಅಂತ ಹೇಳಿ ಹೋದವನು ನಮಾಜ್ ಮುಗಿಸಿ ಮಧ್ಯಾಹ್ನ 1:15ಒಂದು ಗಂಟೆಗೆ ಹೊರಗಡೆ ಬಂದವನು ಗುಳ್ಮೀಯ ತನ್ನ ಮಾವನ ಮನೆಗೆ ಹೋಗದೆ ಯಾರಿಗೂ ಹೇಳದೆ ಭಟ್ಕಳ ನೂರ್ ಮಸೀದಿಯ ಹೊರಗೆ ಹೋಗಿ ಕಾಣೆಯಾಗಿರುತ್ತಾನೆ.ಕಾಣೆಯಾದ ತನ್ನ ತಮ್ಮನನ್ನು ಪತ್ತೆ ಮಾಡಿಕೊಡುವಂತೆ ನೀಡಿದ ದೂರನಂತೆ ಭಟ್ಕಳ ಶಹರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಈ ಕಾಣೆಯಾದ ಪ್ರಕರಣದ ಕುರಿತ ಕಾರ್ಯಾಚರಣೆಯನ್ನು ಕೈಗೊಂಡಿದ್ದು ಈ ಪ್ರಕರಣದಲ್ಲಿ ಕಾಣೆಯಾದ ಜಾಕಿರ್ ಬೇಗ್ ಈತನು ಉಪಯೋಗಿಸುತ್ತಿದ್ದ ಮೊಬೈಲನ್ನ ಮಾರಾಟ ಮಾಡಿ ತುಮಕೂರಿನ ಫ್ಯಾಕ್ಟರಿಯಲ್ಲಿ ಕೆಲಸಕ್ಕೆ ಸೇರಿಕೊಂಡಿದ್ದು ಇರುತ್ತದೆ. ಇವರ ಪತ್ತೆಯ ಕುರಿತು ಭಟ್ಕಳ ಶಹರ ಪೊಲೀಸ್ ಠಾಣೆಯ ಸಿಪಿಐ ದಿವಾಕರ್ ಪಿಎಂ ರವರು ಪಿಎಸ್ಐ ನವೀನ್ ನಾಯಕ್ ಮತ್ತು ಸಿಬ್ಬಂದಿಯವರಾದ ರವಿ ಪಟಗಾರ್ ಮತ್ತು ಕಾಶಿನಾಥ್ ಕೊಟಗುಣಶಿ ಇವರನ್ನು ಒಳಗೊಂಡ ತಂಡವನ್ನು ರಚಿಸಿ , ಬೆಂಗಳೂರು ಮತ್ತು ತುಮಕೂರು ಕಡೆಗೆ ಕಳಿಸಿದ್ದು ಸದರಿಯವರು ಕಾರ್ಯಾಚರಣೆ ನಡೆಸಿ ತಾಂತ್ರಿಕ ಕರೆಗಳ ಆಧಾರದ ಮೇಲೆ ಕಾಣೆಯಾದ ವ್ಯಕ್ತಿಯನ್ನು ತುಮಕೂರಿನಲ್ಲಿ ಪತ್ತೆ ಮಾಡಿರುತ್ತಾರೆ. ಭಟ್ಕಳ ಟೌನ್ ಪೋಲಿಸರ ಈ ಕಾರ್ಯಕ್ಕೆ ಸಾರ್ವಜನಿಕರಿಂದ ಹಾಗೂ ಹಿರಿಯ ಅಧಿಕಾರಿಗಳಿಂದ ಪ್ರಶಂಸೆ ವ್ಯಕ್ತವಾಗುತ್ತಿದೆ.

Leave a Reply

Your email address will not be published. Required fields are marked *

error: Content is protected !!