
ಆರ್.ಎನ್.ಶೆಟ್ಟಿ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ಅಂತರ್ ಶಾಲಾ ಮಟ್ಟದ ಸಾಂಸ್ಕೃತಿಕ ಮತ್ತು ಕ್ರೀಡಾ ಸ್ಪರ್ಧೆಯು ಯಶಸ್ವಿಯಾಗಿ ನೆರವೇರಿತು. ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಝೂಲಾಜಿಕಲ್ ಸರ್ವೆ ಆಫ್ ಇಂಡಿಯಾ, ಪಶ್ಚಿಮ ಘಟ್ಟ ಪ್ರಾದೇಶಿಕ ಕೇಂದ್ರ ಕೇರಳ ಇಲ್ಲಿನ ವಿಜ್ಞಾನಿ ಡಾ.ವಿಶ್ವನಾಥ್ ಡಿ ಹೆಗಡೆ ಆಗಮಿಸಿದ್ದರು. ಬಹಳ ಮುಖ್ಯವಾಗಿ ಆರ್.ಎನ್.ಶೆಟ್ಟಿ ಪದವಿಪೂರ್ವ ಕಾಲೇಜಿನ ಪದವಿ ಪೂರ್ವ ಕಾಲೇಜಿನ ಪ್ರಾರಂಭಿಕ ವರ್ಷಗಳಲ್ಲಿ ಉಪಪ್ರಾಂಶುಪಾಲರಾಗಿಯು ಕರ್ತವ್ಯವನ್ನು ನಿರ್ವಹಿಸಿದ್ದರು. ಇವರು ತಮ್ಮ ಸಂಶೋಧನೆಯ ಕುತೂಹಲಕಾರಿ ಘಟನೆಗಳು, ಕಾಲೇಜಿನ ಅನುಭವಗಳು, ಆರ್.ಎನ್.ಶೆಟ್ಟಿ ಅವರೊಂದಿಗೆ ಒಡನಾಟ ಹಾಗೂ ಅವರ ಸಾಧನೆಗಳನ್ನು ವಿದ್ಯಾರ್ಥಿಗಳಿಗೆ ತಿಳಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಶ್ರೀಮತಿ ಅಶ್ವಿನಿ ಶೇಟ್ ವಹಿಸಿದ್ದರು.

ಸ್ಪರ್ಧೆಗೆ ವಿವಿಧ ಶಾಲೆಯ ಸುಮಾರು 150ಕ್ಕೂ ಹೆಚ್ಚು ವಿದ್ಯಾರ್ಥಿಗಳು ಉತ್ಸಾಹದಿಂದ ಪಾಲ್ಗೊಂಡಿದ್ದರು. ಸ್ಪರ್ಧೆಯಲ್ಲಿ ವಿಜೇತರಿಗೆ ಬಹುಮಾನ ವಿತರಿಸಿ ಗೌರವಿಸಲಾಯಿತು.

