ಮಂಕಿ ಪಟ್ಟಣ ಪಂಚಾಯಿತಿಯನ್ನು ಕೈವಶ ಮಾಡಿಕೊಂಡ ಮಾಜಿ ಸಚಿವ ಶಿವಾನಂದ ನಾಯ್ಕ್

Share

ಹೊನ್ನಾವರ: ಮಾಜಿ ಸಚಿವ ಶಿವಾನಂದ್ ನಾಯ್ಕ್ ರವರ ಆರೋಗ್ಯ ಸಮಸ್ಯೆಯಿಂದ 10 ವರ್ಷಗಳ ಕಾಲ ರಾಜಕೀಯದಿಂದ ದೂರ ಸರಿದಿದ್ದರು. ಈಗ ಆರೋಗ್ಯ ಸುಧಾರಿಸಿಕೊಂಡು ಮತ್ತೆ ರಾಜಕೀಯಕ್ಕೆ ಮರು ಪ್ರವೇಶ ಮಾಡಿದ್ದರಿಂದ ಬಿಜೆಪಿಯ ಕಾರ್ಯಕರ್ತರಲ್ಲಿ ಹುಮ್ಮಸ್ಸು ಇಮ್ಮಡಿಯಾಗಿ ಮಂಕಿ ಪಟ್ಟಣ ಪಂಚಾಯಿತಿಯ ಫಲಿತಾಂಶದ ಮೂಲಕ ಹೊರಹೊಮ್ಮಿದೆ. ಇದರ ಪರಿಣಾಮ ಮಂಕಿ ಪಟ್ಟಣ ಪಂಚಾಯತ್ ಚುನಾವಣೆಯಲ್ಲಿ 20 ಸದಸ್ಯರ ಬಲ ಹೊಂದಿರುವ ಪಟ್ಟಣ ಪಂಚಾಯಿತ್ 12 ಸ್ಥಾನ ಗಳ ಗೆಲುವು ಸಾಧಿಸುವ ಮೂಲಕ ಬಿಜೆಪಿ ಸ್ಪಷ್ಟ ಬಹುಮತದೊಂದಿಗೆ ಮೇಲುಗೈ ಸಾಧಿಸಿದೆ.

ಮಾಜಿ ಸಚಿವರಾದ ಶಿವಾನಂದ್ ನಾಯ್ಕ್ ತನ್ನ ಹುಟ್ಟುವರಾದ ಮಂಕಿ ಪಟ್ಟಣ ಪಂಚಾಯಿತಿ ಗೆಲುವುದರ ಮೂಲಕ ರಾಜಕೀಯದಲ್ಲಿ ತನ್ನ ಹಿಡಿತವನ್ನು ತೋರಿಸಿದ್ದಾರೆ. ಮುಂದಿನ ದಿನಗಳಲ್ಲಿ ಭಟ್ಕಳ ವಿಧಾನಸಭಾ ಕ್ಷೇತ್ರದ ಎಲ್ಲಾ ಗ್ರಾಮ ಪಂಚಾಯತ್, ಪಟ್ಟಣ ಪಂಚಾಯತ್ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಬಿಜೆಪಿ ಗೆಲುವು ಸಾಧಿಸಲಿದೆ ಎಂದು ಬಿಜೆಪಿ ಕಾರ್ಯಕರ್ತರಲ್ಲಿ ಹೇಳುವ ಮೂಲಕ ಕಾರ್ಯಕರ್ತರನ್ನ ಹುರಿದುಂಬಿಸಿದ್ದಾರೆ. ಮಾಜಿ ಶಾಸಕ ಸುನಿಲ್ ನಾಯ್ಕ್ ಮತ್ತು ಮಾಜಿ ಸಚಿವರಾದ ಶಿವಾನಂದ್ ನಾಯ್ಕ್ ಇವರು ಬಣ ರಾಜಕೀಯ ಮಾಡದೆ ಒಗ್ಗಟ್ಟು ಪ್ರದರ್ಶನದಿಂದ ಈ ಫಲಿತಾಂಶ ಬಂದಿದೆ.ಮಂಕಿ ಪಟ್ಟಣ ಪಂಚಾಯಿತಿ ಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಜಯಗಳಿಸಿದ್ದರಿಂದ ಕಾರ್ಯಕರ್ತರು ಹೊನ್ನಾವರ ಶರಾವತಿ ಸರ್ಕಲ್ ನಲ್ಲಿ ಸಂಭ್ರಮಾಚರಣೆಯನ್ನ ಪಟಾಕಿ ಸಿಡಿಸುವ ಮೂಲಕ ಸಿಹಿ ತಿನಿಸುವ ಮೂಲಕ ಸಂತಸವನ್ನು ವ್ಯಕ್ತಪಡಿಸಿದರು.

Leave a Reply

Your email address will not be published. Required fields are marked *

error: Content is protected !!