ಬೆಳಗಾವಿಯ ಸುವರ್ಣಾ ಸೌಧದ ಮುಂಭಾಗದಲ್ಲಿ ನಡೆದ ಪತ್ರಕರ್ತರ ವಿವಿಧ ಬೇಡಿಕೆಗಳ ಈಡೇರಿಕೆಗೆ ಸರ್ಕಾರ ಬದ್ಧ-ಸಚಿವ ಮುನಿಯಪ್ಪ ಭರವಸೆ

Share

ಕಾನಿಪ ಧ್ವನಿ ರಾಜ್ಯಾಧ್ಯಕ್ಷರಾದ ಬಂಗ್ಲೆ ಯವರಿಂದ ಕಾನೂನು ಚಾಟಿಯ ಎಚ್ಚರಿಕೆ


ಬೆಳಗಾವಿ(ಸುವರ್ಣ ವಿಧಾನಸೌಧ ): ಕಾರ್ಯನಿರತ ಪತ್ರಕರ್ತರ ಸಂಘಟನೆಯವರು ಮುಂದಿರಿಸಿರುವ ಬೇಡಿಕೆಗಳನ್ನು ಸಿಎಂ ಗಮನಕ್ಕೆ ತಂದು ಈಡೇರಿಸಲು ಕ್ರಮ ಜರುಗಿಸುವುದಾಗಿ ಆಹಾರ ಇಲಾಖೆ ಸಚಿವ ಕೆ.ಎಚ್.ಮುನಿಯಪ್ಪ ಭರವಸೆಯ ಮಾತನ್ನು ನೀಡಿದರು.
ಬೆಳಗಾವಿ ವಿಧಾನಸೌಧದ ಎದುರಿಗೆ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘಟನೆ ನೇತೃತ್ವದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಬೃಹತ್ ಹೋರಾಟದ ಸ್ಥಳಕ್ಕೆ ಆಗಮಿಸಿದ ಸಚಿವ ಕೆ.ಎಚ್.ಮುನಿಯಪ್ಪ ಅವರು ಸಂಘಟನೆಯ ರಾಜ್ಯಾಧ್ಯಕ್ಷ ಬಂಗ್ಲೆ ಮಲ್ಲಿಕಾರ್ಜುನ ಅವರೊಂದಿಗೆ ಮಾತುಕತೆ ನಡೆಸಿದರು.
ಕಾನಿಪ ಧ್ವನಿ ರಾಜ್ಯಾಧ್ಯಕ್ಷ ಬಂಗ್ಲೆ ಮಲ್ಲಿಕಾರ್ಜುನ ಮಾತನಾಡಿ,ಪತ್ರಕರ್ತರ ಹಿತರಕ್ಷಣಾ ಕಾಯ್ದೆ ಜಾರಿ, ಗ್ರಾಮೀಣ ಪತ್ರಕರ್ತರಿಗೆ ಜಿಲ್ಲಾ ಮಟ್ಟದಲ್ಲಿ ಸಂಚರಿಸಲು ಜಾರಿಗೊಳಿಸಿರುವ ಉಚಿತ ಬಸ್ ಪಾಸ್ ವಿತರಣೆಗೆ ವಿಧಿಸಿರುವ ಮಾನದಂಡಗಳನ್ನು ಸಡಿಲಿಸುವುದು,ವಾರ್ತಾ ಇಲಾಖೆಯಲ್ಲಿ ಖಾಲಿ ಇರುವ ಸಿಬ್ಬಂದಿ ಭರ್ತಿ,ಟೋಲ್ ನಾಕಾಗಳಲ್ಲಿ ಪತ್ರಕರ್ತರಿಗೆ ಉಚಿತವಾಗಿ ಸಂಚರಿಸಲು ಅವಕಾಶ ಕಲ್ಪಿಸುವುದು ಸೇರಿದಂತೆ ಹಲವು ಬೇಡಿಕೆಗಳ ಈಡೇರಿಸುವಂತೆ ಒತ್ತಾಯಿಸಿದರು.
ಮನವಿ ಸ್ವೀಕರಿಸಿದ ಸಚಿವ ಕೆ.ಎಚ್.ಮುನಿಯಪ್ಪ ಮಾತನಾಡಿ, ಸಿಎಂ ಸಿದ್ಧರಾಮಯ್ಯನವರ ಸೂಚನೆ ಮೇರೆಗೆ ನಾನು ಮನವಿ ಸ್ವೀಕರಿಸಲು ಬಂದಿದ್ದೇನೆ.ನಿಮ್ಮ ಬೇಡಿಕೆಗಳು ನ್ಯಾಯಯುತವಾಗಿದ್ದು ಸಂಬಂಧಿಸಿದ ಸಚಿವರ ಹಾಗೂ ಅಧಿಕಾರಿಗಳ ಗಮನಕ್ಕೆ ಖುದ್ದಾಗಿ ತಂದು ಈಡೇರಿಸಲು ಕ್ರಮ ಕೈಗೊಳ್ಳುವ ಭರವಸೆ ನೀಡಿದರು. ಇದೇ ಸಂದರ್ಭದಲ್ಲಿ ಸಚಿವರಾದ ಮುನಿಯಪ್ಪ ನವರಿಗೆ ಕಾನಿಪ ಧವನಿ ರಾಜ್ಯಾಧ್ಯಕ್ಷರಾದ ಬಂಗ್ಲೆ ಮಲ್ಲಿಕಾರ್ಜುನ ರವರು ಪ್ರತಿಕ್ರಯಿಸಿ ಒಂದು ವೇಳೆ ನಾಡಿನ ಪತ್ರಕರ್ತರ ಮೂಲಬೇಡಿಕೆಗಳ ಕುರಿತಂತೆ ಸರ್ಕಾರ ಉದಾಸೀನ ತೋರಿದ್ದೇ ಆದಲ್ಲಿ ಕಾನಿಪ ಧ್ವನಿ ವತಿಯಿಂದ ಸರ್ಕಾರಕ್ಕೆ ರಿಟ್ ಪಟಿಷನ್ ಹೈಕೋರ್ಟ್ ನಲ್ಲಿ ದಾಖಲು ಮಾಡುವುದರ ಮುಖಾಂತರ ಸರ್ಕಾರಕ್ಕೆ ಕಾನೂನು ಚಾಟಿ ಖಂಡಿತ ನೀಡಿ ನ್ಯಾಯ ಪಡೆಯಲಿದ್ದೇವೆ ಎಂದು ಆತ್ಮ ವಿಶ್ವಾಸದ ನುಡಿಗಳನ್ನು ಹೇಳಿದ್ದು ವಿಶೇಷವಾಗಿತ್ತು.
ಇದೇ ಸಂದರ್ಭದಲ್ಲಿ ಉತ್ತರ ಕರ್ನಾಟಕ ಅಧ್ಯಕ್ಷರು ಆದ ಅಶೋಕ ರಾಠೋಡ, ರಾಜ್ಯ ಕಾರ್ಯಾಧ್ಯಕ್ಷರು ಇರ್ಫಾನ್ ಬೀಳಗಿ, ರಾಜ್ಯ ಪದಾಧಿಕಾರಿಗಳಾದ ಬಸವರಾಜ ಸಿರಸಂಗಿ, ಎಸ್.ಎಸ್.ಪಾಟೀಲ,ಜಗಳೂರು ಲಕ್ಷ್ಮಣರಾವ್, ಜಾನ್ಸನ್ ಗೋಡೆ, ಎಂ.ಇಸಾಕ್, ಮಂಜುಳಾ.ಬಿ. ವಿಜಯಪುರ ಜಿಲ್ಲಾ ಕಾರ್ಯಧ್ಯಕ್ಷರು ವೀರೇಶ ಮೇಟಿ ನಿಡಗುಂದಿ ಕಾನಿಪ ಧ್ವನಿ ತಾಲ್ಲೂಕು ಅಧ್ಯಕ್ಷ ರಾಜಶೇಖರ ಹಿರೇಮಠ,ಮುದ್ದೇಬಿಹಾಳ ಧ್ವನಿ ಸದಸ್ಯ ರವಿ ದಂಡಿನ್, ಮೊದಲಾದವರು ಇದ್ದರು.

Leave a Reply

Your email address will not be published. Required fields are marked *

error: Content is protected !!