ಭಟ್ಕಳದಲ್ಲಿ ನಡೆಯುವ “ಪತ್ರಕರ್ತರ ಸಮಾಗಮ” ಕಾರ್ಯಕ್ರಮದ ಪೋಸ್ಟರ್ ಕೊರಟಗೆರೆ ತಾಲೂಕಿನಲ್ಲಿ ಎಲೆರಾಂಪುರದ ಶ್ರೀ ಕುಂಚಿಟಿಗರ ಮಹಾಸಂಸ್ಥಾನ ಮಠದಲ್ಲಿ ಬಿಡುಗಡೆ

Share

ಭಟ್ಕಳ ನಗರದಲ್ಲಿ ಕಾನಿಪ ಧ್ವನಿ ವತಿಯಿಂದ 28 -1 -2026 ರಂದು ಶ್ರೀ ನಾಗಯಕ್ಷೇ ಧರ್ಮಾರ್ಥ ಸಭಾಭವನದಲ್ಲಿ ನಡೆಯುವ ರಾಜ್ಯಮಟ್ಟದ ಪತ್ರಕರ್ತರ ಸಮಾಗಮ, ವಿಚಾರ ಸಂಕಿರಣ ಹಾಗೂ ಪ್ರಶಸ್ತಿ ಪ್ರಧಾನ ಕಾರ್ಯಕ್ರಮವನ್ನ ಶ್ರೀ ಕ್ಷೇತ್ರ ಬಂಗಾರಮಕ್ಕಿಯ ಶ್ರೀ ಶ್ರೀ ಶ್ರೀ ಮಾರುತಿ ಗುರೂಜಿ ರವರ ದಿವ್ಯ ಸಾನಿಧ್ಯದೊಂದಿಗೆ ಉತ್ತರ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವರಾದ ಮಂಕಾಳ್ ವೈದ್ಯರ ಸಭಾಧ್ಯಕ್ಷತೆಯಲ್ಲಿ ಸುಪ್ರೀಂ ಕೋರ್ಟ್ ನ ನಿವೃತ್ತ ನ್ಯಾಯಮೂರ್ತಿ ಹಾಗೂ ಮಾಜಿ ಲೋಕಾಯುಕ್ತರದ ಸಂತೋಷ್ ಹೆಗಡೆ ರವರು ಉದ್ಘಾಟಿಸಲಿರುವ ಈ ಕಾರ್ಯಕ್ರಮದ ಪೋಸ್ಟರ್ ಅನ್ನು ದಿನಾಂಕ 19/12/2025 ರಂದು ತುಮಕೂರು ಜಿಲ್ಲಾ ಕೊರಟಗೆರೆ ತಾಲೂಕಿನ ಎಲೆರಾಂಪುರದ ಶ್ರೀ ಕುಂಚಿಟಿಗರ ಮಹಾಸಂಸ್ಥಾನ ಮಠದಲ್ಲಿ ಪರಮ ಪೂಜ್ಯ ಶ್ರೀ ಶ್ರೀ ಶ್ರೀ ಹನುಮಂತನಾಥ ಮಹಸ್ವಾಮಿಗಳು ಹಾಗೂ ಶ್ರೀ ಕ್ಷೇತ್ರ ಸಿದ್ದರಬೆಟ್ಟದ ಪರಮ ಪೂಜ್ಯ ಶ್ರೀ ಶ್ರೀ ಶ್ರೀ ವೀರಭಧ್ರ ಶಿವಾಚಾರ್ಯ ಸ್ವಾಮೀಜಿರವರ ಸಾನಿಧ್ಯದಲ್ಲಿ ಸುಪ್ರೀಂಕೋರ್ಟ್ ನ ನಿವೃತ್ತ ನ್ಯಾಯಮೂರ್ತಿಗಳಾದ ಮಾನ್ಯ ಸಂತೋಷ ಹೆಗಡೆ, ಕೊರಟಗೆರೆ ತಾಲೂಕಿನ ಧೀಮಂತ ರಾಜಕಾರಣಿ ಸಮಾಜ ಸೇವಕರು ಹಾಗೂ ಮಾಜಿ ಜಿ.ಪಂ.ಸದಸ್ಯರಾದ ಮಾನ್ಯ ಪಿ.ಎನ್.ಕೃಷ್ಣಮೂರ್ತಿ,ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘಟನೆಯ ರಾಜ್ಯಾಧ್ಯಕ್ಷರಾದ ಬಂಗ್ಲೆ ಮಲ್ಲಿಕಾರ್ಜುನ, ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯರಾದ ಆರ್.ಟಿ.ಓ. ಹನುಮಂತರಾಯಪ್ಪ ಹಾಗೂ ಇನ್ನೀತರರ ಉಪಸ್ಥಿತಿಯಲ್ಲಿ ಬಿಡುಗೊಡೆಗೊಳಿಸಿದರು.

Leave a Reply

Your email address will not be published. Required fields are marked *

error: Content is protected !!