
ಕಾರವಾರ: ಜೆ. ಪಿ. ನಾರಾಯಣಸ್ವಾಮಿ ಪ್ರತಿಷ್ಠಾನ ಬೆಂಗಳೂರು ಇವರು ಕಳೆದ 7 ವರ್ಷಗಳಿಂದ ಉತ್ತರ ಕನ್ನಡ ಜಿಲ್ಲೆಯ 120 ಕ್ಕೂ ಅದಿಕ ಪ್ರತಿಭಾನ್ವಿತ ಬಡ ವಿದ್ಯಾರ್ಥಿಗಳಿಗೆ ಪ್ರತಿ ವರ್ಷ 07-10 ಲಕ್ಷ ರೂಪಾಯಿ ಮೊತ್ತದ ಪ್ರೋತ್ಸಾಹ ಧನವನ್ನು ಸ್ಕಾಲರ್ಶಿಪ್ ರೂಪದಲ್ಲಿ ನೀಡುತ್ತಾ ಬಂದಿದ್ದು ಕಾರಣಾಂತರದಿಂದ ಪ್ರಸ್ತುತ 2025-26 ನೇ ಸಾಲಿನ ಪುರಸ್ಕಾರಕ್ಕಾಗಿ ಜಿಲ್ಲೆಯ ಪ್ರತಿಭೆಗಳಿಗೆ ಅವಕಾಶ ನೀಡಿರುವುದಿಲ್ಲ
ಈ ಹಿನ್ನೆಲೆಯಲ್ಲಿ ಪ್ರತಿಷ್ಠಾನದ ಜಿಲ್ಲೆಯ ಪದಾಧಿಕಾರಿಗಳು ಕಾರವಾರದಲ್ಲಿ ಮಾಧ್ಯಮ ಗೋಷ್ಠಿ ನಡೆಸಿ ಜಿಲ್ಲೆಯ ವಿದ್ಯಾರ್ಥಿಗಳನ್ನು ಪರಿಗಣಿಸುವಂತೆ ಪ್ರತಿಷ್ಠಾನದ ಮುಖ್ಯಸ್ಥರಿಗೆ ಮನವಿ ಮಾಡಿದರು ಅಲ್ಲದೆ ಜಿಲ್ಲೆಯಲ್ಲಿನ ನಮ್ಮ ಸಮಾಜ ಬಾಂಧವರು ನಾಮಧಾರಿ, ದೀವರು, ಈಡಿಗ, ಬಿಲ್ಲವ ಇತ್ಯಾದಿ ಉಪ ಪಂಗಡಗಳಲ್ಲಿ ಭಿನ್ನಮತ ಎಣಿಸದೆ ನಾವೆಲ್ಲ ಒಂದು ಎಂಬ ಐಕ್ಯತೆ ಕಾದುಕೊಳ್ಳೋಣ. ತನ್ಮೂಲಕ ಸಮಾಜದ ಬಡಪಾಯಿ ಪ್ರತಿಭೆಗಳು ಪಡೆಯಬಹುದಾದ ಯಾವುದೇ ಸೌಲಭ್ಯದಿಂದ ವಂಚಿತರಾಗದಂತೆ ನಾವೆಲ್ಲ ಜಾಗೃತೆ ವಹಿಸೋಣ ಎಂದರು.
ಜಿಲ್ಲಾ ಗೌರವ ಸಂಚಾಲಕ ವಿ.ಎನ್. ನಾಯ್ಕ ಬೇಡ್ಕಣಿ, ಭಟ್ಕಳ ನಾಮಧಾರಿ ಕೂಟದ ನಿರ್ದೇಶಕರಾದ ಕೆ.ಆರ್. ನಾಯ್ಕ, ಡಾ. ಪದ್ಮಯ್ಯ ನಾಯ್ಕ, ಎಂ.ಡಿ. ನಾಯ್ಕ ಮಾರುಕೇರಿ, ಸಿದ್ದಾಪುರ ತಾಲೂಕು ಕೃಷಿಕ ಸಮಾಜದ ಅಧ್ಯಕ್ಷ ವೀರಭದ್ರ ನಾಯ್ಕ ಮಳಲಿ, ಜೆ.ಪಿ.ಎನ್.ಪಿ. ತಾಲೂಕು ಮುಖ್ಯ ಸಂಚಾಲಕರುಗಳಾದ
ಸುನಿಲ್ ಸೋನಿ ಎಸ್. ನಾಯ್ಕ (ಕಾರವಾರ), ಎಸ್.ಬಿ. ನಾಯ್ಕ (ಶಿರಸಿ), ದಾಮೋದರ ಜಿ. ನಾಯ್ಕ (ಅಂಕೋಲ), ಸುಭಾಶ್ಚಂದ್ರ ಆರ್. ನಾಯ್ಕ (ಸಿದ್ದಾಪುರ), ಶ್ರೀಧರ ನಾಯ್ಕ (ಭಟ್ಕಳ) ಹೋರಾಟಗಾರ – ರೈತ ಮುಖಂಡ ರಾಘವೇಂದ್ರ ನಾಯ್ಕ ಕೌಂಚೂರ್ ಮುಂತಾದವರಿದ್ದರು
- ಡಾ. ನಾಗೇಶ ನಾಯ್ಕ ಕಾಗಾಲ
(ಜಿಲ್ಲಾ ಮುಖ್ಯಸ್ಥರು – ಜೆ.ಪಿ.ಎನ್. ಪ್ರತಿಷ್ಠಾನ, ಉ. ಕ.)
