
National pulse polio program
ಎಲ್ಲಾ ಸಾರ್ವಜನಿಕರಿಗೆ ನಮಸ್ಕಾರಗಳು.
ಇದೇ ತಿಂಗಳ ಡಿಸೆಂಬರ್ 21 ಭಾನುವಾರದಂದು ರಾಷ್ಟ್ರೀಯ ಪಲ್ಸ್ ಪೋಲಿಯೋ ಕಾರ್ಯಕ್ರಮ ಆಯೋಜಿಸಲಾಗಿದೆ. ಅದಕ್ಕೆ 5 ವರ್ಷದ ಒಳಗಿನ ಎಲ್ಲಾ ಮಕ್ಕಳಿಗೆ ಪೋಲಿಯೋ ಎರಡು ಹನಿಗಳನ್ನು ತಪ್ಪದೇ ಹಾಕಿಸುವಂತೆ ಈ ಮೂಲಕ ಕೋರಿದೆ.
ಪೋಲಿಯೋ ಲಸಿಕೆಗಳನ್ನು ನಿಮ್ಮ ಹತ್ತಿರದ ಬೂತ್ಗಳಲ್ಲಿ ಮತ್ತು ಆರೋಗ್ಯ ಕೇಂದ್ರಗಳಲ್ಲಿ ಹಾಕಲಾಗುವುದು. ಹೆಚ್ಚಿನ ಮಾಹಿತಿಗಾಗಿ ಹತ್ತಿರದ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳು. ಮತ್ತು ಆರೋಗ್ಯ ಸಿಬ್ಬಂದಿಗಳು ಅಥವಾ ಆಶಾ ಕಾರ್ಯಕರ್ತೆಯರನ್ನು ಭೇಟಿ ಮಾಡಬೇಕಾಗಿ ವಿನಂತಿ.

ದೇಶಾದ್ಯಂತ ರಾಷ್ಟ್ರೀಯ ಪೋಲಿಯೋ ಹನಿ ಅಭಿಯಾನ ನಡೆಸಲಾಗುತ್ತಿದೆ. ಐದು ವರ್ಷದೊಳಗಿನ ಮಕ್ಕಳಿಗೆ ಪೋಲಿಯೋ ಹನಿ ಹಾಕುವುದು ಮತ್ತು ಅದರ ಬಗ್ಗೆ ಜಾಗೃತಿ ಮೂಡಿಸುವುದಕ್ಕೆ ರಾಜ್ಯ ಸರ್ಕಾರಗಳು ಭಿನ್ನ ವಿಭಿನ್ನ ಯೋಜನೆಗಳನ್ನು ಹಾಕಿಕೊಂಡಿವೆ.
ಡಿಸೆಂಬರ್ 21 ಭಾನುವಾರದಂದು ಎಲ್ಲಾ ಬೂತ್ ಗಳಲ್ಲಿ ಪೋಲಿಯ ಲಸಿಕೆಗಳನ್ನು ಹಾಕಲಾಗುವುದು
ಇದನ್ನು ಹೊರತುಪಡಿಸಿ ಎಲ್ಲಾ ರೈಲ್ವೆ ಸ್ಟೇಷನ್. ಬಸ್ ಸ್ಟ್ಯಾಂಡ್. ಮತ್ತು ಮುರುಡೇಶ್ವರ ದೇವಸ್ಥಾನ ಗಳಲ್ಲಿ ನಾಲ್ಕು ದಿನವು ಸಹಿತ ಪೋಲಿಯೋ ಲಸಿಕೆಗಳನ್ನು ಹಾಕಲಾಗುವುದು.
ಇದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಕಾರವಾರ ಉತ್ತರ ಕನ್ನಡ ಅವರ ಪ್ರಕಟಣೆ.

