ಭಟ್ಕಳ : ಅಂಜುಮನ್ ಬಿ. ಎಡ್. ಕಾಲೇಜಿನ ಆಡಳಿತ ಮಂಡಳಿಯ ಸದಸ್ಯರೊಬ್ಬರು ಪ್ರಾಚಾರ್ಯ ಜಿಕ್ರಿಯ ಸುಲ್ತಾನ್ ಹಜಾರಿ ಅವರನ್ನ ಮಂಚಕ್ಕೆ ಕರೆದಿದ್ದು ತಮ್ಮ ಬಯಕೆಗಳನ್ನ ಈಡೇರಿಸಿದರೆ ಉನ್ನತ ಸ್ಥಾನಮಾನ ನೀಡುವುದಾಗಿ ಆಮಿಷ ಒಡ್ಡಿದ್ದಾರೆ. ಇದಕ್ಕೆ ಒಪ್ಪದ ಕಾರಣ ಪ್ರಾಚಾರ್ಯರ ವಿರುದ್ಧ ಅಕ್ರಮ ಸಂಬಂಧ ಹೊಂದಿದ್ದಾರೆ ಎಂದು ವದಂತಿ ಹಬ್ಬಿಸಿದ್ದಾರೆ.
2003 ರಿಂದ ಅಂಜುಮನ್ ಹಮಿ-ಎ-ಮುಸ್ಲಿಮೀನ್ ಟ್ರಸ್ಟಿನಲ್ಲಿ ಸಹಾಯಕ ವಿಜ್ಞಾನ ಶಿಕ್ಷಕಿ ಹಾಗೂ ಸಹಾಯಕ ವಿಜ್ಞಾನ ಪ್ರಾಧ್ಯಾಪಕಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. 2016ರಲ್ಲಿ ಅವರು ಬಿ ಎಡ್ ವಿಭಾಗದ ಪ್ರಾಚಾರ್ಯರಾಗಿದ್ದಾರೆ.
ಭಟ್ಕಳದ ಅಂಜುಮನ್ ಬಿ. ಎಡ್. ಕಾಲೇಜ್ ನ ಆಡಳಿತ ಮಂಡಳಿಯ ಮೂವರು ಸದಸ್ಯರಿಂದ ಸಮಸ್ಯೆಗೆ ಸಿಲುಕಿದ್ದಾರೆ. ಮದೀನಾ ಕಾಲೋನಿಯ ನಿವಾಸಿಯಾಗಿರುವ ಜಿಕ್ರಿಯ ಸುಲ್ತಾನ್ ಹಜಾರಿ ಇವರು ವಿವಾಹ ವಿಚ್ಛೇದಿತರಾಗಿದ್ದಾರೆ. ಅಂಜುಮನ್ ಹಮಿ-ಎ_ಮುಸ್ಲಿಂ ಟ್ರಸ್ಟಿನ ಸದಸ್ಯರಾಗಿರುವ ಅಹಿದ್ ಮೊಹ್ತೆಶಾಮ್ ಅವರು 20204 ರಲ್ಲಿ ಬಿ.ಎಡ್ ಕಾಲೇಜಿನ ಕಾರ್ಯದರ್ಶಿಯಾಗಿ ಅಧಿಕಾರವಹಿಸಿಕೊಂಡಿದ್ದ ದಿನದಿಂದ ಜಕ್ರಿಯ ಸುಲ್ತಾನ ಹಜಾರೆ ಅವರಿಗೆ ಈ ಸಮಸ್ಯೆ ಶುರುವಾಗಿದೆ. ಮೊಹ್ತೆಶಾಮ್ ಅವರು ಝಿಕ್ರಿಯ ಅವರ ಕೊಠಡಿಗೆ ಬಂದು ಲೈಂಗಿಕ ಕಿರುಕುಳ ನೀಡುತ್ತಿದ್ದರು ಮತ್ತು ಜಿಕ್ರಿಯ ಅವರ ವೈಯಕ್ತಿಕ ಜೀವನದ ಬಗ್ಗೆಯು ನಿಂದಿಸುತ್ತಿದ್ದರು ಇದನ್ನು ಸಹಿಸದ ಜಿಕ್ರಿಯ ಅವರ ಬಗ್ಗೆ ಇಲ್ಲದ ಸಲ್ಲದ ಆರೋಪ ಮಾಡಿ ಬೇರೆ ಪುರುಷರ ಜೊತೆ ಅಕ್ರಮ ಸಂಬಂಧ ಹೊಂದಿದೆ ಎಂದು ವದಂತಿ ಹಬ್ಬಿಸಿದ್ದಾರೆ. ಅಹಿದ್ ಮೊಹ್ತೆಶಾಮ್ ಅವರು ತಮ್ಮ ಕುಕೃತ್ಯಕ್ಕೆ ಕಮಿಟಿ ಸದಸ್ಯರಾದ ಸಜ್ಜದ್ ಕೋಲಾ ಹಾಗೂ ಇಸಾಕ್ ಶಾಬಂದ್ರಿ ಖಾಜಾ ಮಹ್ಮದ್ ಗೌಸ್ ಅವರ ಸಹಕಾರಪಡೆದಿದ್ದಾರೆ. ಈ ಮೂವರು ಸೇರಿ ಹಿಂಸೆ ನೀಡುತ್ತಿರುವ ಬಗ್ಗೆ ಜಿಕ್ರಿಯಾ ಸುಲ್ತಾನ್ ಹಜಾರಿ ಅವರು ನ್ಯಾಯಾಲಯದ ಮೊರೆ ಹೋಗಿದ್ದಾರೆ. ಮಾರ್ಚ 9ರಂದು ಕಾಲೇಜಿಗೆ ಬಂದು ಕೈ ಹಿಡಿದು ಎಳೆದಾಡಿದ ಬಗ್ಗೆ ಅವರು ದೂರಿದ್ದಾರೆ. ನ್ಯಾಯಾಲಯದ ಸೂಚನೆ ಮೇರೆಗೆ ಭಟ್ಕಳ ನಗರಠಾಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.
“ಲೈಂಗಿಕ ಕಿರುಕುಳ ಆರೋಪ” ನ್ಯಾಯಾಲಯದ ಸೂಚನೆ ಮೇರೆಗೆ ಭಟ್ಕಳ ಅಂಜುಮನ್ ಬಿ ಎಡ್ ಕಾಲೇಜಿನ ನಿರ್ದೇಶಕರ ಮೇಲೆ ಎಫ್ಐಆರ್
