
ಭಟ್ಕಳ: ಎಚ್.ಡಿ.ಏಫ್.ಸಿ ಬ್ಯಾಂಕ್ ಭಟ್ಕಳ ಶಾಖೆ ಹಾಗೂ ರೆಡ್ ಕ್ರಾಸ್ ಬ್ಲಡ್ ಬ್ಯಾಂಕ್ ಕುಂದಾಪುರ ಇವರ ಸಹಭಾಗಿತ್ವದಲ್ಲಿ ಭಟ್ಕಳದ ಶ್ರೀ ಗುರು ಸುಧೀಂದ್ರ ಕಾಲೇಜಿನಲ್ಲಿ ೧೨ ಡಿಸೆಂಬರ್ ೨೦೨೫ ಶುಕ್ರವಾರದಂದು ರಕ್ತದಾನ ಶಿಬಿರವನ್ನು ಆಯೋಜಿಸಲಾಗಿದೆ. ಕಾಲೇಜಿನ ಎನ್.ಎಸ್.ಎಸ್ ಘಟಕ, ರೋಟರಾಕ್ಟ್ ಕ್ಲಬ್, ಯುತ್ ರೆಡ್ ಕ್ರಾಸ್ ಹಾಗೂ ಉನ್ನತ ಭಾರತ ಅಭಿಯಾನ ಘಟಕಗಳ ಸಹಕಾರದೊಂದಿಗೆ ಜರುಗುವ ಈ ರಕ್ತದಾನ ಶಿಬಿರದಲ್ಲಿ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ರಕ್ತದಾನವನ್ನು ಯಶಸ್ವಿಗೊಳಿಸಬೇಕಾಗಿ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

