
ಭಟ್ಕಳ: ತಾಲೂಕಿನ ಶ್ರೀ ಗುರು ಸುಧೀಂದ್ರ ಪದವಿ ಕಾಲೇಜಿನಲ್ಲಿ ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡದ ಸಂಲಗ್ನ ಕಾಲೇಜುಗಳ ಅಂತರ ಮಹಾವಿದ್ಯಾಲಯಗಳ ಏಕ ವಲಯ
ಮಟ್ಟದ ಪುರುಷ ಹಾಗೂ ಮಹಿಳೆಯರ ಚೆಸ್ ಪಂದ್ಯಾವಳಿ ಹಾಗೂ ಆಯ್ಕೆಯು ಜರುಗಿತು.
ಪಂದ್ಯಾವಳಿಯನ್ನು ಉದ್ಘಾಟಿಸಿ ಮಾತನಾಡಿದ ಭಟ್ಕಳ ಎಜ್ಯುಕೇಶನ್ ಟ್ರಸ್ಟನ ಟ್ರಸ್ಟಿ ರಮೇಶ ಖಾರ್ವಿಯವರು ಶಿಕ್ಷಣದ ಜೊತೆಯಲ್ಲಿ ವಿದ್ಯಾರ್ಥಿಗಳು ಕ್ರೀಡೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕು ಎಂದರು.

ಚದುರಂಗ ಸ್ಪರ್ಧೆಯ ನಿರ್ಣಾಯಕರಾದ ಪ್ರಸನ್ನ ರಾವ್, ಉಪನಿರ್ಣಾಯಕರಾದ ಧನರಾಜ್ ಖಾರ್ವಿ, ರಾಷ್ಟ್ರೀಯ ಚೆಸ್ ತರಬೇತುದಾರರಾದ ಗುರುರಾಜ್ ಶೆಟ್ಟಿ ಯವರು ಉಪಸ್ಥಿತರಿದ್ದು ವಿದ್ಯಾರ್ಥಿಗಳಿಗೆ ಶುಭ ಕೋರಿದರು. ಪ್ರಾಂಶುಪಾಲರಾದ ಶ್ರೀನಾಥ್ ಪೈ ರವರು ಅತಿಥಿ ಗಣ್ಯರನ್ನು ಸ್ವಾಗತಿಸಿದರು.

ಪುರುಷರ ವಿಭಾಗದಲ್ಲಿ ಸಮರ್ಥ ಕಾಲೇಜ್, ಹುಬ್ಬಳ್ಳಿ, ಪಿಸಿ ಜೇಬಿನ್ ಕಾಲೇಜ್, ಹುಬ್ಬಳ್ಳಿ, ಜೆ ಜಿ ಕಾಮರ್ಸ್ ಕಾಲೇಜ್, ಹುಬ್ಬಳ್ಳಿ, ಕರ್ನಾಟಕ ಆರ್ಟ್ಸ್ ಕಾಲೇಜ್, ಧಾರವಾಡ, ಗುರು ಸುಧೀಂದ್ರ ಕಾಲೇಜ್, ಭಟ್ಕಳ ಟಾಪ್ ಐದು ಸ್ಥಾನ ಪಡೆಯಿತು. ಮಹಿಳೆಯರ ವಿಭಾಗದಲ್ಲಿ ಎಂ.ಎA. ಆರ್ಟ್ಸ್ ಅಂಡ್ ಸೈನ್ಸ್ ಕಾಲೇಜ್, ಸಿರ್ಸಿ, ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಹೊನ್ನಾವರ, ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಅಂಕೋಲಾ, ಶ್ರೀ ಗುರು ಸುಧೀಂಧ್ರ ಕಾಲೇಜ್, ಭಟ್ಕಳ, ಪಿ.ಸಿ. ಜೇಬಿನ್ ಸೈನ್ಸ್ ಕಾಲೇಜ್, ಹುಬ್ಬಳ್ಳಿ ಟಾಪ್ ಐದು ಸ್ಥಾನ ಪಡೆಯಿತು.
ಭಟ್ಕಳ ಎಜ್ಯುಕೇಶನ್ ಟ್ರಸ್ಟ್ನ ಅಧ್ಯಕ್ಷರಾದ ಡಾ. ಸುರೇಶ ನಾಯಕ, ದೈಹಿಕ ಶಿಕ್ಷಣ ನಿರ್ದೇಶಕರಾದ ವಿನಾಯಕ ನಾಯ್ಕ ಉಪಸ್ಥಿತರಿದ್ದರು. ಕುಮಾರಿ. ಸಹನಾ ಮೊಗೇರ, ಕುಮಾರಿ. ಮಮತಾ ಶಾನಭಾಗ್ ಕಾರ್ಯಕ್ರಮವನ್ನು ನಿರೂಪಿಸಿ ವಂದನಾರ್ಪಣೆ ಮಾಡಿದರು.
