ಆರ್‌. ಎನ್‌. ಎಸ್ ವಿದ್ಯಾನಿಕೇತನ ಸಿ.ಬಿ.ಎಸ್‌.ಇ ಶಾಲೆಯಲ್ಲಿ ವಾರ್ಷಿಕ ಸ್ನೇಹ ಸಮ್ಮೆಳನ

Share


ಮುರುಡೇಶ್ವರ: ನವೆಂಬರ್‌ 28 ರಂದು ಮುರುಡೇಶ್ವರ ಆರ್‌. ಎನ್‌. ಎಸ್ ಶಾಲೆಯ ವಾರ್ಷಿಕ ಸ್ನೇಹ ಸಮ್ಮೇಳನ ವಿಜೃಂಭಣೆಯಿಂದ ಜರುಗಿತು. ಕುಂದಾಪುರದಲ್ಲಿ ಅರ್ಥಶಾಸ್ತ್ರ ಉಪನ್ಯಾಸಕರಾಗಿದ್ದು, ನಿರೂಪಣೆಯಲ್ಲಿ ನ್ಯಾಶನಲ್‌ ಪ್ರಶಸ್ತಿ ಪಡೆದಿರುವ ಶ್ರೀ ಅಕ್ಷಯ ಹೆಗ್ದೆ ಮೊಳಹಳ್ಳಿಯವರು ಮುಖ್ಯ ಅತಿಥಿಯಾಗಿದ್ದು ಮಕ್ಕಳ ಪಾಲನೆ ಹಾಗೂ ಶಾಲೆಯ ಪ್ರತಿ ಪಾಲಕರ ಜವಬ್ದಾರಿಯ ಕುರಿತು ಮಾತನಾಡಿದ್ದರು.


ಅತಿಥಿ ಡಾII ನಮೃತಾ ನಾಯ್ಕ, ಭಟ್ಕಳ ಇವರು ಆರೋಗ್ಯ, ಮಕ್ಕಳ ಪಾಲನೆಯ ಕುರಿತು ಪಾಲಕರಿಗೆ ಕಿವಿಮಾತು ಹೇಳುತ್ತಾ ವಿದ್ಯಾರ್ಥಿಗಳ ಗುರಿಯ ಕುರಿತು ಮಾತನಾಡಿದರು.
ಗೌರವ ಅತಿಥಿ ವಿದ್ವಾನ್‌ ನೀಲಕಂಠ ಯಾಜಿಯವರು ವಿದ್ಯಾರ್ಥಿಗಳ ಅಭ್ಯುದಯದಲ್ಲಿ ಪಾಲಕರ ಹಾಗೂ ಶಾಲೆಯ ಪಾತ್ರವನ್ನು ಮಾರ್ಮಿಕವಾಗಿ ತಿಳಿಸಿದರು.


ಪ್ರಾಂಶುಪಾಲೆ ಶ್ರೀಮತಿ ಗೀತಾ ಕಿಣಿ ವಾರ್ಷಿಕ ವರದಿ ವಾಚನ ಮಾಡಿದರು. ಶ್ರೀಮತಿ ಶ್ರುತಿ ನಾಯ್ಕ ಸ್ವಾಗತಿಸಿದರು, ಶ್ರೀಮತಿ ಕ್ಲೆರ ಮತ್ತು ರುಬಿನಾ ನಿರೂಪಿಸಿದರು ಹಾಗೂ ಶ್ರೀ ಕೇಶವ ಗೌಡ ವಂದನಾರ್ಪಣೆ ಮಾಡಿದರು.ನಂತರ ವಿವಿಧ ಆಕರ್ಷಕ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.

Leave a Reply

Your email address will not be published. Required fields are marked *

error: Content is protected !!