ಐ ಆರ್ ಬಿ ನಡೆಸಿರುವ ಕಳಪೆ ಕಾಮಗಾರಿ ಕುರಿತು ಸಚಿವ ಜಾರಕಿ ಸತೀಶ್ ಜಾರಕಿಹೊಳೆ ಗಮನ ತಂದ ಡಾ. ನಾಗೇಶ್ ನಾಯ್ಕ್ ಕಾಗಲ್

Share

ನಾಗೇಶ್ ನಾಯ್ಕ್ ಕಾಗಲ್ ಇವರ ನೇತೃತ್ವದಲ್ಲಿ ದಿನಾಂಕ 2-12-25ರಂದು NHAI-IRB ಕಂಪನಿಯವರು ಉತ್ತರ ಕನ್ನಡ ಜಿಲ್ಲೆಯ ಕರಾವಳಿ ಭಾಗದಲ್ಲಿ ಕಳೆದ 11 ವರ್ಷಗಳಿಂದ ಆಮೆಗತಿಯಲ್ಲಿ ನಡೆಸಿರುವ ರಾಷ್ಟ್ರೀಯ ಹೆದ್ದಾರಿ ಎನ್ ಹೆಚ್ 66 ಅಪೂರ್ಣ ಮತ್ತು ಅವೈಜ್ಞಾನಿಕ ಅವೈಜ್ಞಾನಿಕ ಕಾಮಗಾರಿಯಿಂದ ಕೂಡಿದೆ ಮತ್ತು ಅದರಿಂದ ಉಂಟಾಗುತ್ತಿರುವ ಅನಾಹುತಗಳನ್ನ ರಾಜ್ಯ ಲೋಕೋಪಯೋಗಿ ಸಚಿವ ಸತಿಜಾರಕಿಹೊಳೆಯವರ ಬೆಂಗಳೂರಿನ ಗೃಹಕಚೇರಿಯಲ್ಲಿ ಭೇಟಿಯಾಗಿ ಸಂಪೂರ್ಣ ವಿವರಣೆ ನೀಡಲಾಯಿತು. 2020 ರಿಂದಲೇ ಉತ್ತರ ಕನ್ನಡ ಜಿಲ್ಲೆಯ ವ್ಯಾಪ್ತಿಯಲ್ಲಿ ಮೂರು ಟೋಲ್ ಗೇಟ್ ಮೂಲಕ ಅನುಚಿತವಾಗಿ ಸಂಗ್ರಹಿಸುತ್ತಿರುವ ಸುಂಕ ವಸೂಲಾತಿ ದರೋಡೆಯನ್ನು ತಾತ್ಕಾಲಿಕವಾಗಿ ನಿಲ್ಲಿಸಿ ಕಾಮಗಾರಿಯನ್ನ ಸುರಕ್ಷಿತ ರೀತಿಯಲ್ಲಿ ಶೀಘ್ರ ಮುಕ್ತಾಯಗೊಳಿಸಬೇಕು ಇಲ್ಲವಾದಲ್ಲಿ ಈ ಸಂಬಂಧ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಯನ್ನ ಹೂಡುವುದಾಗಿ ಸಚಿವರ ಗಮನಕ್ಕೆ ತಂದರು. ಈ ಸಂದರ್ಭದಲ್ಲಿ ಅಹಿಂದ ಕರ್ನಾಟಕ ಸಂಘಟನೆಯ ಸಂಚಾಲಕ ಭರಮಣ್ಣ ಹಾಗೂ ಭಟ್ಕಳ ಮಾರುಕೇರಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷರಾದ ಎಂಡಿ ನಾಯ್ಕಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!