ಭಟ್ಕಳ : ದತ್ತ ಜಯಂತಿ ಅಂಗವಾಗಿ ಇಲ್ಲಿನ ಗೋಪಾಲಕೃಷ್ಣ ರಸ್ತೆಯಲ್ಲಿರುವ ಶ್ರೀ ತಿಮ್ಮಯ್ಯ ದಾಸರಿಂದ ಸಂಸ್ಥಾಪಿಸಲ್ಪಟ್ಟ ಶ್ರೀಧರ ಪದ್ಮಾವತಿ ದೇವಿಯ ರಥೋತ್ಸವವು ಇದೇ ಡಿಸೆಂಬರ್ 4ನೇ ತಾರೀಖಿನ ಗುರುವಾರ ನಡೆಯಲಿದೆ. ಆ ದಿನ ಮುಂಜಾನೆಯಿಂದ ದೇವಾಲಯದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿದ್ದು ಪುಣ್ಯಾಹ, ಪಂಚಾಗವ್ಯ, ಶ್ರೀ ದೇವಿಗೆ ಪಂಚಾಮೃತ ಅಭಿಷೇಕ, ಶ್ರೀ ಗುರುಪಾದುಕಾ ಪೂಜೆ, ದಿಗ್ಬಲಿ, ರಥ ಬಲಿ, ಶ್ರೀ ದೇವರ ರಥಾರೋಹಣ,ಶ್ರೀ ಪದ್ಮಾವತಿ ದೇವಿಗೆ ವಿಶೇಷ ಪೂಜೆ ನಡೆಯಲಿದೆ. ಮದ್ಯಾಹ್ನ 12.30ಕ್ಕೆ ಮಹಾಪೂಜೆ, ನಂತರ 1 ಒಂದು ಗಂಟೆಯಿಂದ ಅನ್ನ ಸಂತರ್ಪಣೆ ನಡೆಯಲಿದೆ.
ಸಂಜೆ ನಾಲ್ಕು ಗಂಟೆಗೆ ಪುರ ಬೀದಿಯಲ್ಲಿ ರಥೋತ್ಸವದ ಮೆರವಣಿಗೆಯು ನಡೆಯಲಿದೆ. ರಥೋತ್ಸವದ ಮೆರವಣಿಯು ದೇವಾಲಯದಿಂದ ಹೊರಟು ಮಣ್ಕುಳಿಕೇರಿಯ ಮಾರ್ಗವಾಗಿ ಸಾಗಿ ಪುಷ್ಪಾಂಜಲಿ ಚಿತ್ರಮಂದಿರದವರೆಗೆ ತಲುಪಿ ಅಲ್ಲಿಂದ ಹಿಂದಿರುಗಿ ವೀರ ವಿಠಲ ರಸ್ತೆ ಒಡೆಯರ ಮಠದ ಮಾರ್ಗವಾಗಿ ಸಾಗಿ ನೆಹರು ರಸ್ತೆಗೆ ತಲುಪಿ ಅಲ್ಲಿಂದ ಹೂವಿನ ಪೇಟೆಯ ಮಾರ್ಗವಾಗಿ ಮುಖ್ಯ ರಸ್ತೆ ಅಲ್ಲಿಂದ ಮಾರಿಕಟ್ಟೆಯ ಮೂಲಕ ಸಾಗಿ ಹಳೆ ಬಸ್ ನಿಲ್ದಾಣದ ಮೂಲಕ ಅರ್ಬನ್ ಬ್ಯಾಂಕ್ ವರೆಗೆ ಸಾಗಿ ಅಲ್ಲಿಂದ ಹಿಂದಿರುಗಿ ಕಳಿ ಹನುಮಂತ ದೇವಸ್ಥಾನದ ಮಾರ್ಗದಲ್ಲಿ ಸಾಗಿ ಬಂದು ದೇವಾಲಯವನ್ನು ತಲುಪಲಿದೆ. ಎಲ್ಲ ಕಾರ್ಯಕ್ರಮಗಳಿಗೆ ಭಕ್ತಾದಿಗಳು ಆಗಮಿಸಬೇಕಾಗಿ ದೇವಾಲಯದ ಧರ್ಮದರ್ಶಿಗಳು ಕೋರಿದ್ದಾರೆ.
ಡಿಸೆಂಬರ್ 4 ನೇ ತಾರೀಕಿನ ಗುರುವಾರ ಶ್ರೀಧರ ಪದ್ಮಾವತಿ ದೇವಿಯ ರಥೋತ್ಸವ
