ಭಟ್ಕಳ: ಸಿದ್ದಾರ್ಥ ಪದವಿ ಪೂರ್ವ ಕಾಲೇಜ್ ಭಟ್ಕಳ ಮತ್ತು ಸಿದ್ದಾರ್ಥ ಸಂಯುಕ್ತ ಪದವಿ ಪೂರ್ವ ಕಾಲೇಜ್ ಶಿರಾಲಿ ಇವರ ಆಶ್ರಯದಲ್ಲಿ ಉತ್ತರ ಕನ್ನಡ ಜಿಲ್ಲೆಯ ಹತ್ತನೇ ತರಗತಿಯ ವಿದ್ಯಾರ್ಥಿಗಳಿಗೆ ಅವರ ವಿಜ್ಞಾನ ಮತ್ತು ಗಣಿತ ಪುಸ್ತಕದಿಂದ ಆಯ್ದ ಬಹು ಆಯ್ಕೆ ಪ್ರಶ್ನೆಗಳ ಎರಡು ಗಂಟೆಗಳ ಲಿಖಿತ ಪರೀಕ್ಷೆ ಹಮ್ಮಿಕೊಳ್ಳಲಾಗಿತ್ತು ಉತ್ತರ ಕನ್ನಡ ಜಿಲ್ಲೆಯ ಸುಮಾರು 45 ಪ್ರೌಢಶಾಲೆಗಳಿಂದ 150ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದು ಪ್ರಥಮ ಬಹುಮಾನ 10,000/- ಮತ್ತು ದ್ವಿತೀಯ ಬಹುಮಾನ 5,000/- ರೂಪಾಯಿಗಳನ್ನು ಕುಮಾರಿ ಗಂಗಾ ಆರ್ ಹೆಗಡೆ ಹಾಗೂ ಕುಮಾರಿ ಗೌರಿ ಆರ್ ಹೆಗಡೆ SFS ಹೈಸ್ಕೂಲ್ ಕೊಡಾಣಿಯ ಇಬ್ಬರು ವಿದ್ಯಾರ್ಥಿಗಳು ಪಡೆದಿರುತ್ತಾರೆ. ತೃತೀಯ ಬಹುಮಾನ 3,000/- ರೂಪಾಯಿಗಳನ್ನು ಕುಮಾರ ಅನ್ವಿತ್ ಜಿ ಗೊಂಡ ಸಿದ್ಧಾರ್ಥ ಆಂಗ್ಲ ಮಾಧ್ಯಮ ಪ್ರೌಢಶಾಲೆ ಪಂಚವಟಿ ಶಿರಾಲಿ ಭಟ್ಕಳ ಇವನು ಪಡೆದಿರುತ್ತಾನೆ. ಪ್ರಥಮ 10 ಸ್ಥಾನಪಡೆದ ಮಕ್ಕಳನ್ನು ಈ ಸಂದರ್ಭದಲ್ಲಿ ಪುರಸ್ಕರಿಸಲಾಯಿತು
ಇದೇ ಸಂದರ್ಭದಲ್ಲಿ ಸಿದ್ದಾರ್ಥ ಪಿ.ಯು. ಕಾಲೇಜಿನ 2025 ನೇ ಸಾಲಿನ ಎಂಬಿಬಿಎಸ್ ಪ್ರವೇಶ ಪಡೆದ ಕುಮಾರಿ ಸಂಜನಾ ನಾಯ್ಕ ಮತ್ತು IIIT ಪುಣೆ ಯಲ್ಲಿ ಕಂಪ್ಯೂಟರ್ ಸೈನ್ಸ್ ಪ್ರವೇಶ ಪಡೆದ ಸಂದೇಶ ಶೇಟ್ ಮತ್ತು ಕೆಸಿಇಟಿ ನಲ್ಲಿ 700ನೆೇ ರಾಂಕ್ ಪಡೆದು ಆರ್ ವಿ ಕಾಲೇಜಿನಲ್ಲಿ ಕಂಪ್ಯೂಟರ್ ಸೈನ್ಸ್ ಪ್ರವೇಶ ಪಡೆದ ರೋಹಿತ್ ಮಲ್ಯ ಅವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿಉದ್ಘಾಟಕರಾಗಿ ಶ್ರೀ ನಾಗೇಶ್ ಹೆಚ್ ನಾಯ್ಕ ರಿಟೈರ್ಡ್ ಕಸ್ಟಮ್ ಅಧಿಕಾರಿ ಕಾರವಾರ, ಮುಖ್ಯ ಅತಿಥಿಗಳಾಗಿ ಡಾಕ್ಟರ್ ಹೃತಿಕ್ ಆಚಾರ್ಯ ತಾಲೂಕ್ ಆಸ್ಪತ್ರೆ ಭಟ್ಕಳ ಮತ್ತು ಕುಮಾರಿ ಬಿ ಎನ್ ನಮಿತಾ ಇಂಜಿನಿಯರ ಐಬಿಎಂ ಬೆಂಗಳೂರು ಇವರು ಆಗಮಿಸಿ ವಿದ್ಯಾರ್ಥಿಗಳಿಗೆ ಹಿತವಚನ ನೀಡಿದರು. ರಸಾಯನ ಶಾಸ್ತ್ರ ಉಪನ್ಯಾಸಕರಾದ ಎಂ. ಕೆ. ನಾಯ್ಕ್, ಸOಸ್ಥೆಯ ಅಧ್ಯಕ್ಷರಾದ ಅರ್ಚನಾ ಯು. ಉಪಸ್ಥಿತರಿದ್ದರು. ವಿದ್ಯಾರ್ಥಿಗಳ ಮನರಂಜನಾ ಕಾರ್ಯಕ್ರಮದೊಂದಿಗೆ ಕಾರ್ಯಕ್ರಮವು ಮುಕ್ತಾಯವಾಯಿತು
ಸಿದ್ದಾರ್ಥ ಪದವಿ ಪೂರ್ವ ಕಾಲೇಜ್ ಭಟ್ಕಳ ಮತ್ತು ಸಿದ್ದಾರ್ಥ ಸಂಯುಕ್ತ ಪದವಿ ಪೂರ್ವ ಕಾಲೇಜ್ ಶಿರಾಲಿ ಇವರ ಆಶ್ರಯದಲ್ಲಿ ಪ್ರತಿಭಾ ಪುರಸ್ಕಾರ
