ಹುಬ್ಬಳ್ಳಿಯಲ್ಲಿ ಕಾರ್ಯನಿರತ ಪತ್ರಕರ್ತರ ಧ್ವನಿ ವತಿಯಿಂದ ರಾಷ್ಟ್ರೀಯ ಪತ್ರಿಕಾ ದಿನಾಚರಣೆಯ ಸಂಭ್ರಮ

Share

ಹುಬ್ಬಳ್ಳಿ: ಭಾನುವಾರ ಮಧ್ಯಾಹ್ನ 12.30 ಕ್ಕೆ ಹುಬ್ಬಳ್ಳಿಯ ಡಾ.ಡಿ.ಎಸ್ ಕರ್ಕಿ ಕನ್ನಡ ಭವನ ದಲ್ಲಿ ಕಾನಿಪ ಧ್ವನಿ ವತಿಯಿಂದ ರಾಷ್ಟ್ರೀಯ ಪತ್ರಿಕಾ ದಿನಾಚರಣೆಯನ್ನು ಸಸಿಗೆ ನೀರು ಹಾಕುವ ಮೂಲಕ ಸಾನಿಧ್ಯವನ್ನು ವಹಿಸಿದಂತ ಹುಬ್ಬಳ್ಳಿಯ ಅಕ್ಕಿಹೊಂಡ ಹೊಸಮಠದ ಪರಮಪೂಜ್ಯ ಜಗದ್ಗುರು ಶ್ರೀ ಡಾ.ಚಂದ್ರಶೇಖರ ಶಿವಯೋಗಿ ಸ್ವಾಮಿಗಳು,ಸುಕ್ಷೇತ್ರ ನೀಲಗುಂದ ಮಠದ ಪರಮಪೂಜ್ಯ ಶ್ರೀ ಮಂಜುನಾಥ ಅಪ್ಪಾಜಿಯವರು, ಹೈಕೋರ್ಟ್ ನ ವಿಶ್ರಾಂತ ನ್ಯಾಯಮೂರ್ತಿಗಳಾದ ಶ್ರೀ ಅರಳಿ ನಾಗರಾಜ್ ರವರು ಉದ್ಘಾಟಿಸಿದರು.

ಅರಳಿ ನಾಗರಾಜ್ ಅವರು ಮಾತನಾಡಿ ಸಮಾಜವನ್ನು ತಿದ್ದುವ ಕೆಲಸ ಪತ್ರಕರ್ತರಿಂದ ಆಗಬೇಕಿದೆ ಸಮಾಜದಲ್ಲಿ ಭ್ರಷ್ಟಾಚಾರವೇ ಮನೆದೇವರು ಎನ್ನುವ ರೀತಿಯಲ್ಲಿ ಬೆಳೆದಿದೆ ಈ ಭ್ರಷ್ಟಾಚಾರ ನಿರ್ಮೂಲನೆಗೆ ಪತ್ರಕರ್ತರು ಒಂದಾಗಬೇಕಿದೆ. ಚುನಾವಣೆಗೆ ನಿಲ್ಲುವ ಪ್ರತಿನಿಧಿಯಿಂದ ತನ್ನ ಕ್ಷೇತ್ರದ ಅಭಿವೃದ್ಧಿಗಾಗಿ ಮಾಡುವ ಕೆಲಸಗಳ ಕುರಿತು ಚುನಾವಣೆ ಪ್ರಣಾಳಿಕೆಯ ಅಫಿಡವಿಟ್ ಮೂಲಕ ತನ್ನ ಕ್ಷೇತ್ರದ ಮತದಾರರಿಗೆ ತಿಳಿಸಬೇಕು. ಸ್ವಸ್ಥ ಸಮಾಜವನ್ನು ನಿರ್ಮಿಸಲು ಪತ್ರಕರ್ತರಿಂದಮಾತ್ರ ಸಾಧ್ಯ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕ ನುಡಿಗಳನ್ನಾಡಿದ ಕಾನಿಪ ಧ್ವನಿ ರಾಜ್ಯಾಧ್ಯಕ್ಷರಾದ ಬಂಗ್ಲೆ ಮಲ್ಲಿಕಾರ್ಜುನರವರು ಪತ್ರಕರ್ತರು ತಮ್ಮ ಪ್ರಾಣವನ್ನು ಒತ್ತೆಯಿಟ್ಟು ಸುದ್ದಿಗಳನ್ನು ಮಾಡುತ್ತಾರೆ ಯಾವುದೇ ಸ್ವಾರ್ಥವಿಲ್ಲದೆ ನಿಸ್ವಾರ್ಥದಿಂದ ಹಗಲು ರಾತ್ರಿ ಎನ್ನದೆ ಸಮಾಜ ಸೇವೆಯನ್ನ ಮಾಡುತ್ತಾರೆ ಇಂತಹ ಪತ್ರಕರ್ತರಿಗೆ ಸರ್ಕಾರದಿಂದಾಗಲಿ ಸಮಾಜದಿಂದಾಗಲಿ ಯಾವುದೇ ಸೌಲತ್ತುಗಳು ದೊರೆಯುತ್ತಿಲ್ಲ. ಸರ್ಕಾರ ಈಗಲಾದರೂ ಎಚ್ಚೆತ್ತುಕೊಂಡು ಪತ್ರಕರ್ತರಿಗೆ ನಿವೇಶನ ಮತ್ತು ಫ್ರೀ ಬಸ್ ಪಾಸುಗಳನ್ನು ಮಂಜೂರು ಮಾಡಬೇಕು ಎಂದು ಸರ್ಕಾರವನ್ನು ಈ ಸಂದರ್ಭದಲ್ಲಿ ಒತ್ತಾಯಿಸಿದರು. ಸಾನಿಧ್ಯ ವಹಿಸಿದ ಪೂಜ್ಯರಿಂದ ರಾಜ್ಯದ ಪದಾಧಿಕಾರಿಗಳನ್ನು ಸನ್ಮಾನಿಸಲಾಯಿತು.

ಧಾರವಾಡ ಉಚ್ಚ ನ್ಯಾಯಾಲಯದ ಅಧಿಕಾರಿಯಾಗಿರುವ ಶ್ರೀವೀರಭದ್ರಗೌಡ ಪಾಟೀಲ,ಕಾನಿಪ ಧ್ವನಿ ರಾಜ್ಯಾಧ್ಯಕ್ಷರಾದ ಬಂಗ್ಲ ಮಲ್ಲಿಕಾರ್ಜುನ,ರಾಜ್ಯ ಉಪಾಧ್ಯಕ್ಷರಾದ ಎಸ್.ಎಸ್.ಪಾಟೀಲ್,ಕಾನಿಪ ಧ್ವನಿ ದಾರವಾಢ ಜಿಲ್ಲಾಧ್ಯಕ್ಷರಾದ ಸಂಗನಗೌಡ ಫ.ಹೂವನ್ನವರ,ಕಾನಿಪ ಧ್ವನಿಯ ಅನೇಕ ಜಿಲ್ಲಾಧ್ಯಕ್ಷರು,ತಾಲೂಕು ಅಧ್ಯಕ್ಷರುಗಳು,ರೈತಾಪಿ ಮುಖಂಡರುಗಳು ಹಾಗೂ ಗಣ್ಯಮಾನ್ಯರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!