ಪ್ರಧಾನಿಯಿಂದ ಲೋಕಾರ್ಪಣೆಗೊಳ್ಳಲಿರುವ 77 ಅಡಿ ಉದ್ದದ ಶ್ರೀ ರಾಮನ ಕಂಚಿನ ಪ್ರತಿಮೆ

Share


ಗೋವಾ: ಸುಂದರ ಹಾಗೂ ಸೂಸಜ್ಜಿತ ವರ್ಣ ರಂಜಿತ ವೇದಿಕೆ, ಹಾಗೂ ಉದ್ಘಾಟನೆ ಗೊಳ್ಳಲು ಸಿದ್ದವಾಗುತ್ತಿರುವ 77 ಅಡಿ ಎತ್ತರದ ಕಂಚಿನ ಶ್ರೀರಾಮನ ಪ್ರತಿಮೆ.
ಕರ್ನಾಟಕ ,ಗೋವಾದ ಕರಾವಳಿ ಭಾಗದ ಧಾರ್ಮಿಕ ಶ್ರದ್ದಾ ಕೇಂದ್ರಗಳಿಗೆ ಪ್ರಧಾನಿ ನರೇಂದ್ರ ಮೋದಿ ಭೇಟಿ ನೀಡಲಿದ್ದು ನವಂಬರ್ 28 ರಂದು ಉಡುಪಿ ಹಾಗೂ ಗೋವಾದ ಧಾರ್ಮಿಕ ಶ್ರದ್ಧಾ ಕ್ರೇಂದ್ರದಲ್ಲಿ ಮೋದಿ ಭಾಗವಹಿಸಲಿದ್ದು ಗೋವಾದ ಪರ್ತಗಾಳಿ ಮಠದಲ್ಲಿ 77 ಅಡಿ ಉದ್ದದ ಕಂಚಿನ ಶ್ರೀರಾಮನ ಮೂರ್ತಿ ಲೋಕಾರ್ಪಣೆಗೆ ಭರತಸಿದ್ಧತೆ ನಡೆದಿದೆ.


550 ವರ್ಷದ ಇತಿಹಾಸ ಹೊಂದಿದ ಗೋಕರ್ಣ ಪರ್ತಗಾಳಿ ಜೀವೋತ್ತಮ ಮಠದ 550 ನೇ ವರ್ಷಾಚರಣೆ ಹಿನ್ನಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಆಗಮಿಸಲಿದ್ದು , ನವಂಬರ್28ರಂದು ಶ್ರೀರಾಮನ ಪ್ರತಿಮೆ ಹಾಗೂ ಥೀಮ್ ಪಾರ್ಕ್, 3ಡಿ ಪ್ರೊಜೆಕ್ಷನ್ ಅನಾವರಣಗೊಳಿಸಲಿದ್ದಾರೆ. ಇದಕ್ಕಾಗಿ ಗೋವಾದ ಪೋಯಿಂಗ್ವಿನಿಂ ನಲ್ಲಿ ಭರದ ಸಿದ್ದತೆ ಮಾಡಿಕೊಳ್ಳಲಾಗುತ್ತಿದೆ. ಗೌಡಸಾರಸ್ವತ ಬ್ರಾಹ್ಮಣ ಸಮುದಾಯಕ್ಕೆ ಸೇರಿದ ಈ ಮಠ ಐತಿಹಾಸಿಕ ಹಿನ್ನಲೆ ಹೊಂದಿದ ಮಠವಾಗಿದೆ.

13 ನೇ ಶತಮಾನದಲ್ಲಿ ಮದ್ವಾಚಾರ್ಯರು ಸ್ಥಾಪಿಸಿದ ಈ ಮಠ ವೈಷ್ಣವ ಸಂಪ್ರದಾಯದ ದ್ವೈತ ಕ್ರಮವನ್ನು ಅನುಸರಿಸುತ್ತದೆ. ಮಠವು ಕುಶಾವತಿ ನದಿಯ ದಡದಲ್ಲಿರುವ ದಕ್ಷಿಣ ಗೋವಾದ ಸಣ್ಣ ಪಟ್ಟಣವಾದ ಪರ್ತಗಾಳಿ ಯಲ್ಲಿ ಪ್ರಧಾನ ಕಛೇರಿಯನ್ನು ಹೊಂದಿದೆ. ಇದೀಗ ಈ ಮಠದ ಜೀರ್ಣೋದ್ದಾರ ವನ್ನು 24 ನೇ ಯತಿಗಳಾಗಿರುವ ಪರಮಪೂಜ್ಯ ಶ್ರೀ ಶ್ರೀ ಶ್ರೀ ವಿದ್ಯಾಧೀಶ ಶ್ರೀಪಾದ ವಡೇರ ಸ್ವಾಮೀಜಿರವರು ನೆರವೇರಿಸಿದ್ದು, ಸರ್ದಾರ್ ವಲ್ಲಭಾಬಾಯ್ ಪಟೇಲ್ ಹಾಗೂ ಬೆಂಗಳೂರು ಕೆಂಪೇಗೌಡ ಪ್ರತಿಮೆಯ ಶಿಲ್ಪಿ ಯಾದ ರಾಮ ಸುತಾ ಅವರಿಂದ 16 ಕೋಟಿ ವೆಚ್ಚದ 77 ಅಡಿ ಉದ್ದದ ಕಂಚಿನ ಶ್ರೀರಾಮನ ಪ್ರತಿಮೆ ನಿರ್ಮಿಸಿದ್ದಾರೆ. ಇದರ ಜೊತೆ ರಾಮಾಯಣದ ಸಾರಹೊಂದಿದ ಥೀಮ್ ಪಾರ್ಕ ಸಹ ನಿರ್ಮಿಸಿದ್ದು ಇವುಗಳ ಉದ್ಘಾಟನೆ ಪ್ರಧಾನಿ ನರೇಂದ್ರ ಮೋದಿಯಿಂದ ನೆರವೇರಲಿದ್ದು ಸಕಲ ಸಿದ್ದತೆ ಮಾಡಿಕೊಳ್ಳಲಾಗಿದೆ ಎಂದು ಗೋವಾದ ಗೋಕರ್ಣ ಪರ್ತಗಾಳಿ ಜೀವೋತ್ತಮ‌ ಮಠದ ಪರಮಪೂಜ್ಯ ಶ್ರೀ ವಿದ್ಯಾಧೀಶ ಶ್ರೀಪಾದ ವಡೇರ ಸ್ವಾಮೀಜಿ ಮಾಹಿತಿ ನೀಡಿದ್ದಾರೆ.ಇನ್ನು ಈ ಮಠದಲ್ಲಿ 11 ದಿನಗಳ ಕಾಲ ಸಾರ್ಥಪಂಚಶತಮಾನೋತ್ಸವ ಮಹೋತ್ಸವ ಕಾರ್ಯಕ್ರಮ ನೆರೆವೇರುತಿದ್ದು , ನವಂಬರ್ 27ರಿಂದ ಡಿಸೆಂಬರ್ 7ರವರೆಗೆ ವಿವಿಧ ಕಾರ್ಯಕ್ರಮ ನೆರವೇರಲಿದೆ. ಪ್ರಧಾನಿ ನರೇಂದ್ರ ಮೋದಿ ಭೇಟಿ ಹಿನ್ನಲೆಯಲ್ಲಿ ಕಾರ್ಯಕ್ರಮಕ್ಕೆ 15 ಸಾವಿರ ಜನ ಆಸೀನರಾಗಬಹುದಾದ ವೇದಿಕೆ ಸಿದ್ದಪಡಿಸಲಾಗಿದೆ.

ದಿನಕ್ಕೆ 55ರಂತೆ 11ದಿನಗಳಲ್ಲಿ 550 ಋತ್ವಿಕರ ನೇತೃತ್ವದಲ್ಲಿ ಹೋಮ ನೆರವೇರಲಿದೆ .ಈಗಾಗಲೇ 120 ಕೇಂದ್ರ ಹಾಗೂ 104 ಉಪಕೇಂದ್ರದಲ್ಲಿ 550 ಕೋಟಿ ರಾಮನಾಮ ಜಪ ಪೂರ್ಣಗೊಂಡಿದ್ದು ,11 ದಿನಗಳ ಕಾರ್ಯಕ್ರಮದಲ್ಲಿ ಪ್ರತಿದಿನ ಸಾಂಸ್ಕೃತಿಕ ಕಾರ್ಯಕ್ರಮಗಳು, ಯೋಗಾ ಶಿಬಿರಗಳು ಹಾಗೂ ತಜ್ಞ ವೈದ್ಯರಿಂದ ಮೆಡಿಕಲ್ ಕ್ಯಾಂಪ್ ಆಯೋಜನೆ ಮಾಡಲಾಗಿದ್ದು ವಿಶಿಷ್ಟವಾಗಿ ಧಾರ್ಮಿಕ ಕಾರ್ಯಗಳು ನೆರವೇರಲಿದೆ.
ವರದಿ: ಉಲ್ಲಾಸ್ ಶಾನಭಾಗ ಶಿರಾಲಿ.

Leave a Reply

Your email address will not be published. Required fields are marked *

error: Content is protected !!