ಭಟ್ಕಳ: ಮದುವೆಯಾದ ನಂತರ ಸಂಸಾರದ ಗೋಜಿನಲ್ಲಿ ಓದು ಮುಂದುವರೆಸಿ ಸಾಧನೆಗೈಯುವುದು ತುಂಬಾ ಕಷ್ಟ ಎನ್ನುವ ಹುಡುಗಿಯರ ಸಾಲಿನಲ್ಲಿ ನೆಲೆಗೊಳ್ಳದೆ ಸತತ ಓದು ಹಾಗೂ ಪರಿಶ್ರಮದಿಂದ NITK ಸುರತ್ಕಲ್ ನಲ್ಲಿ ಕೆಮಿಕಲ್ ಇಂಜಿನಿಯರಿಂಗ್ ವಿಷಯದ ಬಗ್ಗೆ ಸಂಶೋಧನೆ ಮಾಡಿ ಚೈತ್ರ ಡಾಕ್ಟರೇಟ್(PHD) ಪದವಿ ಪಡೆದುಕೊಂಡಿದ್ದಾಳೆ.

ಚೈತ್ರ ಇವರು ಭಟ್ಕಳ ತಾಲೂಕಿನ ಶಿರಾಲಿಯ ಉಷಾ ಮತ್ತು ಉಲ್ಲಾಸ್ ಪ್ರಭು ಇವರ ಸೊಸೆ ಹಾಗೂ ಪ್ರಸನ್ನ ಉಲ್ಲಾಸ್ ಪ್ರಭು ಅವರ ಧರ್ಮಪತ್ನಿ ಆಗಿರುತ್ತಾಳೆ, ಹಾಗೂ ಇವರು ಶಿರ್ಶಿ ಕಾನಸೂರಿನ ಶ್ರೀಮತಿ ಚೇತನ ಮತ್ತು ಚಂದ್ರಕಾಂತ್ ಶಾನಭಾಗ್ ಇವರ ಮಗಳಾಗಿರುತ್ತಾಳೆ.
ಇವರ ಈ ಸಾಧನೆಗೆ ತಾಲೂಕಿನ ಸ್ವ ಸಮಾಜ ಬಾಂಧವರು ಗಣ್ಯರು, ಹಾಗೂ ಹಿತೈಷಿಗಳು ಅಭಿನಂದಿಸಿರುತ್ತಾರೆ.
ವರದಿ: ಉಲ್ಲಾಸ್ ಶಾನಭಾಗ ಶಿರಾಲಿ.
