ಆರ್‌ ಎನ್‌ ಎಸ್‌ ವಿದ್ಯಾನಿಕೇತನ ಶಾಲೆಯ ವಿದ್ಯಾರ್ಥಿಗಳ ಕ್ರೀಡಾ ಸಾಧನೆ

Share

ಭಟ್ಕಳ: ಸಿ.ಬಿ.ಎಸ್.ಇ ಕದಂಬ ಸಹೋದಯ ಸ್ಕೂಲ್‌ ಕಾಂಪ್ಲೆಕ್ಷ್‌ ಉತ್ತರಕನ್ನಡ ಜಿಲ್ಲೆ ಇವರ ವಾರ್ಷಿಕ ಕ್ರೀಡಾಕೂಟ ಎಮ್.ಪಿ.ಇ ಸೊಸೈಟಿ ಸೆಂಟ್ರಲ್‌ ಸ್ಕೂಲ್‌ ಸಹಯೋಗದಲ್ಲಿ ಎಸ್.ಡಿ.ಎಂ ಕಾಲೇಜು ಮೈದಾನದಲ್ಲಿ ನವೆಂಬರ್‌ 22, 2025 ರಂದು ಜರುಗಿತು. ಉತ್ತರಕನ್ನಡ ಜಿಲ್ಲೆಯ ಹಲವು ಸಿ.ಬಿ.ಎಸ್.ಇ ಶಾಲೆಗಳು ಇದರಲ್ಲಿ ಭಾಗವಹಿಸಿದ್ದವು.
ಆರ್‌ ಎನ್‌ ಎಸ್‌ ವಿದ್ಯಾನಿಕೇತನ ಸಿ.ಬಿ.ಎಸ್.ಇ ಶಾಲೆಯ ವಿದ್ಯಾರ್ಥಿಗಳು ಹಲವು ವಿಧದ ಕ್ರೀಡಾ ಸ್ಪರ್ಧೆಗಳಲ್ಲಿ ಗೆದ್ದು ಬಹುಮಾನವನ್ನು ಪಡೆದಿದ್ದಾರೆ. ದೈಹಿಕ ಶಿಕ್ಷಣ ಶಿಕ್ಷಕರಾದ ಶ್ರೀ ಜಯಂತ ಗೌಡ, ಶ್ರೀ ನಾರಾಯಣ ಮೊಗೇರ ಮತ್ತು ಕುಮಾರಿ ಸಾವಿತ್ರಿ ಗೌಡ ಉತ್ತಮ ಮಾರ್ಗದರ್ಶನ ನೀಡಿದ್ದರು. 400ಮೀಟರ್‌ ರನ್ನಿಂಗ್ನಲ್ಲಿ ಪವನ್‌ಕುಮಾರ್. ಎಸ್‌. ನಾಯ್ಕ ಮತ್ತು ಜೀವಿತಾ. ಎಸ್.‌ ದೇವಾಡಿಗ ಪ್ರಥಮ ಸ್ಥಾನ, ಸ್ವಾತಿ. ಎನ್.‌ ಗೌಡ ದ್ವಿತಿಯ ಸ್ಥಾನ. ಲಾಂಗ್‌ ಜಂಪಿನಲ್ಲಿ ಸಂಜನಾ ವಿ ಮೊಗೇರ ಪ್ರಥಮ ಸ್ಥಾನ, ಎಸ್.‌ ಆರ್.‌ ಸೃಜನ್‌ ಮತ್ತು ಪ್ರೀತಮ್.‌ ಜಿ. ನಾಯ್ಕ ದ್ವಿತಿಯ ಸ್ಥಾನ. ಗುಂಡು ಎಸೆತದಲ್ಲಿ ದಿಶಾ. ಜಿ. ನಾಯ್ಕ ತೃತಿಯ ಸ್ಥಾನ. ಚೆಸ್ ನಲ್ಲಿ ಮಿಥುನ್.‌ ಎಮ್.‌ ನಾಯ್ಕ ತೃತಿಯ ಸ್ಥಾನ. 100×400 ಮೀಟರ್‌ ರೀಲೆಯಲ್ಲಿ ಹುಡುಗಿಯರು ಪ್ರಥಮ ಸ್ಥಾನ ಪಡೆದಿದ್ದಾರೆ. ಮಕ್ಕಳ ಈ ಸಾಧನೆಗೆ ಆಡಳಿತ ಮಂಡಳಿ, ಪ್ರಾಂಶುಪಾಲರು, ಶಿಕ್ಷಕರು ಮತ್ತು ಶಿಕ್ಷಕೇತರ ವೃಂದ ಹರ್ಷ ವ್ಯಕ್ತಪಡಿಸಿ ಅಭಿನಂದಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!