ಭಟ್ಕಳ ಪುರಸಭೆಗೆ ಜಾಲಿ ಪಟ್ಟಣ ಪಂಚಾಯಿತಿ ಮತ್ತು ಹೆಬ್ಳೆ ಗ್ರಾಮ ಪಂಚಾಯಿತಿ ಪ್ರದೇಶವನ್ನು ಸೇರಿಸಿ 22. 67 ಚದರ ಕಿಲೋಮೀಟರ್ ವ್ಯಾಪ್ತಿಯನ್ನ ಭಟ್ಕಳ ನಗರಸಭೆಯಾಗಿ ರಚಿಸಿ ಅಂತಿಮ ಅಧಿಸೂಚನೆ ಹೊರಡಿಸಿದೆ.
60,000 ಕ್ಕಿಂತ ಹೆಚ್ಚು ಜನಸಂಖ್ಯೆ ಹೊಂದಿರುವ ಭಟ್ಕಳ ಪುರಸಭೆಯನ್ನ ನಗರಸಭೆಯನ್ನಾಗಿ ಮಾಡುವ ಪ್ರಯತ್ನ 2015 ರಿಂದ ನಡೆದಿತ್ತು. 2011ರ ಜನಗಣತಿ ಪ್ರಕಾರ ಭಟ್ಕಳ ಪುರಸಭೆ ವ್ಯಾಪ್ತಿಯಲ್ಲಿ 32,000, ಹೆಬ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 19,000 ಮತ್ತು ಜಾಲಿ ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿ ಜನಸಂಖ್ಯೆ ಇದ್ದು ಈ ಮೂರು ಪ್ರದೇಶ ಸೇರಿಸಿದರೆ 75,000ಕ್ಕೂ ಹೆಚ್ಚು ಜನಸಂಖ್ಯೆ ಆಗುತ್ತದೆ. ಹೀಗಾಗಿ ಇದನ್ನ ನಗರಸಭೆ ಯಾಗಿ ರಚಿಸಬೇಕೆಂದು ಮಾನ್ಯ ಉತ್ತರ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವರಾದ ಮಂಕಾಳ್ ವೈದ್ಯರವರು ಜನವರಿ 12 2025ರಂದು ನಗರಾಭಿವೃದ್ಧಿ ಸಚಿವರಿಗೆ ಪತ್ರ ಬರೆದಿದ್ದರು. ಇದನ್ನ ವಿರೋಧಿಸಿದ ಬಿಜೆಪಿ ನಾಯಕರು ಕೇವಲ ಮುಸ್ಲಿಂ ಬಾಹುಳ್ಯದ ಪ್ರದೇಶವನ್ನ ಮಾತ್ರ ಸೇರ್ಪಡಿಸುವುದಕ್ಕೆ ನಮ್ಮ ವಿರೋಧವಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷರಿಗೆ ವಿಧಾನಸಭೆಯಲ್ಲಿ ಇದನ್ನ ತಡೆಯಬೇಕೆಂದು ಮನವಿಯನ್ನು ನೀಡಿದ್ದರು. ಅಗಸ್ಟ್ 25ರಂದು ಕರಡು ಅಧಿಸೂಚನೆ ಪ್ರಕಟಿಸಿದ್ದ ನಗರಾಭಿವೃದ್ಧಿ ಇಲಾಖೆ ಆಕ್ಷೇಪಣೆ ಸಲ್ಲಿಕೆಗೆ ಒಂದು ತಿಂಗಳು ಕಾಲಾವಕಾಶ ನೀಡಿತ್ತು. ಬಹಿರಂಗವಾಗಿ ಆಕ್ಷೇಪಣೆ ಎತ್ತುತ್ತಿದ್ದ ಬಿಜೆಪಿಯ ಸ್ಥಳೀಯ ನಾಯಕರು ಅಧಿಕೃತವಾಗಿ ಆಕ್ಷೇಪಣೆ ಸಲ್ಲಿಸಿರಲಿಲ್ಲ. ಯಾವುದೇ ಆಕ್ಷೇಪಣೆ ಬರದ ಕಾರಣ ಮೂರು ಸ್ಥಳೀಯ ಸಂಸ್ಥೆ ಪ್ರದೇಶವನ್ನು ಒಳಗೊಂಡ ವ್ಯಾಪ್ತಿಯನ್ನ ನಗರಾಭಿವೃದ್ಧಿ ಇಲಾಖೆಯು ಅಧಿಸೂಚನೆಯನ್ನು ಅಂತಿಮಗೊಳಿಸಿ ಆದೇಶವನ್ನ ನವಂಬರ್ 20ರಂದು ಹೊರಡಿಸಿದೆ.
ಬಿಜೆಪಿಯ ವಿರೋಧದ ನಡುವೆಯೂ ಭಟ್ಕಳ ಪುರಸಭೆಯನ್ನು ನಗರಸಭೆಯಾಗಿ ಅಧಿಸೂಚನೆ ಹೊರಡಿಸಿದ ರಾಜ್ಯ ಸರಕಾರ
