ಮುರುಡೇಶ್ವರ:ಜನತಾ ವಿದ್ಯಾಲಯ ಮುರುಡೇಶ್ವರ ಇದರ 2005ನೇ ಸಾಲಿನ ವಿದ್ಯಾರ್ಥಿಗಳಿಂದ ಗುರುವಂದನಾ ಕಾರ್ಯಕ್ರಮ ಶಾಲಾ ಆವರಣದಲ್ಲಿನೆರವೇರಿತು.
ಕಾರ್ಯಕ್ರಮದ ಪೂರ್ವದಲ್ಲಿ ವಿದ್ಯಾರ್ಥಿಗಳು ಶ್ರೀ ಗಣೇಶ ದೇವರಿಗೆ ಪೂಜೆ ನೆರವೇರಿಸಿದರು. ನಂತರ ಡಾಕ್ಟರ್ ದಿನಕರ್ ದೇಸಾಯಿ ಅವರ ಪ್ರತಿಮೆಗೆ ಮಾಲಾರ್ಪಣೆ ಹಾಗೂ ಶ್ರೀ ಸರ್ವಪಲ್ಲಿ ರಾಧಾಕೃಷ್ಣನ್ ಗುರುಗಳ ಫೋಟೋಗೆ ಪುಷ್ಪಾರ್ಚನೆ ಮಾಡಲಾಯಿತು. ನಂತರ ಗುರು ವೃಂದದವರನ್ನು ಹಳದಿ ಮತ್ತು ಕೆಂಪು ಸಾಲನ್ನು ಹಾಕಿ ಗುರುಗಳಿಗೆ ಪುಷ್ಪಾರ್ಚನೆ ಮಾಡಿ ಸ್ವಾಗತಿಸಿ ಗಿಡಕ್ಕೆ ನೀರು ಹಾಕಿ ದೀಪ ಬೆಳಗಿಸುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.

ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜನತಾ ವಿದ್ಯಾಲಯದ ಮುಖ್ಯ ಶಿಕ್ಷಕರಾದ ಶ್ರೀಮತಿ ಆಶಾ ಕಲ್ಮನೆ, ಉದ್ಘಾಟಕರಾಗಿ ಕೆ.ಜೆ. ಹೆಗಡೆ ನಿವೃತ್ತ ಮುಖ್ಯ ಶಿಕ್ಷಕರು, ಎಸ್ .ಎಸ್. ಕಾಮತ್, ಸುಬ್ರಹ್ಮಣ್ಯ ನಾಯಕ್, ಗೌರವ ಉಪಸ್ಥಿತಿಯೊಂದಿಗೆ ಗುರುವಂದನ ಕಾರ್ಯಕ್ರಮದ ವಿಶೇಷ ಉಪನ್ಯಾಸಕರಾಗಿ ಶ್ರೀ ದಾಮೋದರ್ ಶರ್ಮಾ ,
ಹಾಗೂ ಭಟ್ಕಳದ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಶ್ರೀ ವೆಂಕಟೇಶ್ ನಾಯಕ್ ಬಿ. ಆರ್ .ಸಿ ಪೂರ್ಣಿಮಾ, ಶ್ರೀ ರಾಘವೇಂದ್ರ ನಾಯ್ಕ, ಪ್ರತಿಭಾ ಎಸ್ ಹೆಗಡೆ,ರಾಜೇಶ್ ಕುಪ್ಪಯ್ಯ ಶೆಟ್ಟಿ,ಶಂಕರ ದೇವಾಡಿಗ,ಅಶೋಕ್ ಈಶ್ವರ ಆಚಾರಿ,ಸತೀಶ್ ಶೆಟ್ಟಿ,ಬಾಬು ನಾಯ್ಕ್,ಮೋಹನ್ ನಾಯ್ಕ,ನೇತ್ರ ಬಿ ಮಡಿವಾಳ,ವಿಜಯ ನಾಯ್ಕ,ಮಿತಾ ಹೊನ್ನಿ
ಸವಿತಾ ನಾಯ್ಕ,ಅನಿತಾ ಭಟ್,ಮಾದೇವಿ ನಾಯ್ಕ,ರವೀಂದ್ರ ನಾಯ್ಕ,ಎಲ್ ಈ ನಾಯ್ಕ,ಪ್ರಭಾ ನಾಯ್ಕ ಜನತಾ ವಿದ್ಯಾಲಯದ ಮಾದರಿ ವಿದ್ಯಾರ್ಥಿಯಾದ ಶಿವಾನಂದ್ ನಾಯ್ಕ ಮೊದಲಾದವರು ಸಭಾ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಇದೇ ಸಂದರ್ಭದಲ್ಲಿ ಈ ಶಾಲಾ ವಿದ್ಯಾರ್ಥಿಯಾದ ಹರೀಶ್ ನಾಯಕ್ ಇವರಿಗೆ ಭಾರತೀಯ ಸೇನೆಯಲ್ಲಿ 16 ವರ್ಷಗಳ ಸೇವೆ ಸಲ್ಲಿಸಿದ ಗೌರವಕ್ಕಾಗಿ ಗುರುಗಳಿಂದ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಶಿಕ್ಷಕ ವೃಂದದವರೆಲ್ಲ ಈ ರೀತಿಯ ಅದ್ಭುತ ಪೂರ್ವವಾದ ಗುರುವಂದನಾ ಕಾರ್ಯಕ್ರಮ ಎಲ್ಲರಿಗೂ ಮಾದರಿ ಹಾಗೂ ಪ್ರೇರಣೆಯಾಗಿದೆ ಎನ್ನುವುದರ ಮೂಲಕ, ಕಾರ್ಯವನ್ನು ಮನಪೂರ್ವಕವಾಗಿ ಸಂತೋಷಗೊಂಡು ವಿದ್ಯಾರ್ಥಿಗಳಿಗೆ ಆಶೀರ್ವದಿಸಿದರು, ಈ ರೀತಿಯ ಕಾರ್ಯಕ್ರಮಗಳು ನಡೆಯುತ್ತಿದ್ದರೆ ಗುರು ಶಿಷ್ಯ ಬಾಂಧವ್ಯ ವೃದ್ಧಿ ಆಗುವುದರ ಜೊತೆಗೆ ಸಮಾಜದಲ್ಲಿ ಒಂದು ಸಾಮರಸ್ಯದ ಒಳ್ಳೆಯ ಬಾಂಧವ್ಯ ಬೆಳೆಯಲು ಸಾಧ್ಯ, ಈ ಕಾರ್ಯಕ್ರಮದಲ್ಲಿ ಭಾರತೀಯ ಸಂಸ್ಕೃತಿಯ ಮೆಲುಕು ಹಾಕಿರುವುದು ಗಮನಹರವಾಗಿತ್ತು.

ಈ ಸಭೆಯಲ್ಲಿ 2005ನೇ ಸಾಲಿನ ಎಲ್ಲಾ ವಿದ್ಯಾರ್ಥಿಗಳು ಹಾಗೂ ಪ್ರಸ್ತುತ ಜನತಾ ವಿದ್ಯಾಲಯದ ವಿದ್ಯಾರ್ಥಿಗಳು ಹಾಗೂ ಪಾಲಕರು ಪೋಷಕರು ಹಾಜರಿದ್ದು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿಕೊಟ್ಟರು.
ಕಾರ್ಯಕ್ರಮದ ನಿರ್ವಹಣೆ ಮತ್ತು ನಿರೂಪಣೆ ಹರೀಶ, ವಿಶ್ವನಾಥ್, ನಮಿತಾ, ಶಿವಕುಮಾರ, ಗಣೇಶ, ವಿಷ್ಣು, ಮೋಹನ, ಸುನಂದ, ಗೀತಾ ಮೊದಲಾದವರು ಕಾರ್ಯಕ್ರಮದಲ್ಲಿ ಮುತುವರ್ಜಿ ವಹಿಸಿ ಕೆಲಸ ಮಾಡಿರುವುದು ಸ್ಮರಿಸಬಹುದಾಗಿತ್ತು.
ವರದಿ: ಉಲ್ಲಾಸ ಶಾನಭಾಗ ಶಿರಾಲಿ.
