ಶಿರಾಲಿಯ ಯುವ ದಂತವೈದ್ಯ ಡಾ. ವಿವೇಕ್ ದೇವಿದಾಸ್ ಮಹಾಲೆ ಸ್ನಾತಕೋತ್ತರ ಅವಧಿಯಲ್ಲೇ ಎರಡು ವಿಶ್ವ ದಾಖಲೆಗಳ ಅದ್ಭುತ ಸಾಧನೆ

Share


ಉತ್ತರ ಕನ್ನಡದ ಹೆಮ್ಮೆ

ಭಟ್ಟಳ :ಉತ್ತರ ಕನ್ನಡದ ಶಿರಾಲಿ ಪಟ್ಟಣದ ಉದ್ಯಮಿ ದೇವಿದಾಸ ಮಹಾಲೆ ಮತ್ತು ಶಿಕ್ಷಕಿ ನಾರಾಯಣಿ ಮಹಾಲೆ ಅವರ ಮಗನಾದ ಯುವ ದಂತವೈದ್ಯರಾದ ಡಾ. ವಿವೇಕ್ ದೇವಿದಾಸ್ ಮಹಾಲೆ ಅವರು ಸ್ನಾತಕೋತ್ತರ ಪದವಿ ಅವಧಿಯಲ್ಲೇ ಎರಡು ಪ್ರತಿಷ್ಠಿತ ವಿಶ್ವ ದಾಖಲೆಗಳನ್ನು ಗಳಿಸಿ ರಾಜ್ಯದ ಹೆಮ್ಮೆ ಹೆಚ್ಚಿಸಿದ್ದಾರೆ. ಸವೀತಾ ಡೆಂಟಲ್ ಕಾಲೇಜ್, ಚೆನ್ನೈನಲ್ಲಿ ಎಂಡೋಡಾಂಟಿಕ್ಸ್ ಪಿಜಿ ತರಬೇತಿ ಪಡೆಯುತ್ತಿರುವ ಅವರು ಒಟ್ಟು 150 ಕ್ಕೂ ಹೆಚ್ಚು ‘ಸೆಪರೇಟೆಡ್ ಇನ್‌ಸ್ಟ್ರುಮೆಂಟ್ ರಿಟ್ರೀವಲ್’ ಪ್ರಕರಣಗಳನ್ನು ಯಶಸ್ವಿಯಾಗಿ ನಿರ್ವಹಿಸಿದ ವಿಶ್ವದ ಮೊದಲ ಪೋಸ್ಟ್‌ಗ್ರಾಜುಯೇಟ್ ಎಂಬ ಗೌರವಕ್ಕೆ Raaba Book of World Records ಮತ್ತು Golden Book of World Records ಮನ್ನಣೆ ಲಭಿಸಿದೆ. ಅತ್ಯಂತ ಸವಾಲಿನ ಹಾಗೂ ಪರಿಣತಿಯ ಅಗತ್ಯವಿರುವ ಈ ಚಿಕಿತ್ಸಾ ವಿಧಾನದಲ್ಲಿ ಪಿಜಿ ಅವಧಿಯಲ್ಲೇ ಇಷ್ಟು ದಾಖಲೆಮಟ್ಟದ ಪ್ರಕರಣಗಳನ್ನು ಕೈಗೊಳ್ಳುವ ಸಾಧನೆ ಅಪರೂಪದದ್ದು.

ನವೆಂಬರ್ 8, 2025ರಂದು ನಡೆದ ವಿಶೇಷ ಸಮಾರಂಭದಲ್ಲಿ SIMATS ಸಂಸ್ಥೆಯ ಚಾನ್ಸೆಲರ್ ಡಾ. ಎನ್.ಎಂ. ವೀರೈಯನ್ ಅವರ ಸಮ್ಮುಖದಲ್ಲಿ ಪ್ರಮಾಣಪತ್ರ ಪ್ರದಾನವಾಯಿತು. ದಾವಣಗೆರೆಯ ಕಾಲೇಜ್ ಆಫ್ ಡೆಂಟಲ್ ಸೈನ್ಸಸ್‌ನಲ್ಲಿ ಬಿ. ಡಿ. ಎಸ್. ಪೂರ್ಣಗೊಳಿಸಿದ ಶಿರಾಲಿಯಈ ಯುವಕನ ಸಾಧನೆ “ಸಣ್ಣ ಊರು, ದೊಡ್ಡ ಕನಸು — ದೃಢ ಇಚ್ಛಾಶಕ್ತಿ ಇದ್ದರೆ ಅಸಾಧ್ಯವೆಂಬುದಿಲ್ಲ!”
ಎಂಬ ನಂಬಿಕೆಯನ್ನು ಸಾಬೀತುಪಡಿಸಿದೆ.
Torque Endo Rotary files ಈ ಕಾರ್ಯಕ್ರಮಕ್ಕೆ ಪ್ರಾಯೋಜಕತ್ವ ನೀಡಿತು.
ವರದಿ: ಉಲ್ಲಾಸ ಶಾನಭಾಗ ಶಿರಾಲಿ.

Leave a Reply

Your email address will not be published. Required fields are marked *

error: Content is protected !!