ಭಟ್ಕಳ: ಭಟ್ಕಳದ ಯುವತಿಯಾದ ರಮ್ಯ, ರಿಷಬ್ ಶೆಟ್ಟಿ ಅವರ “ಕಾಂತಾರ-1” ಚಲನಚಿತ್ರದಲ್ಲಿ ಸಹ ನಟಿಯಾಗಿ ತಮ್ಮ ಪ್ರತಿಭೆ ತೋರಿಸಿದ್ದಾರೆ.
ಇವರ ಶಿಕ್ಷಣವು ಭಟ್ಕಳದ ಆನಂದಶ್ರಮ ವಿದ್ಯಾಸಂಸ್ಥೆಯಲ್ಲಿ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ನಂತರ ಉಡುಪಿಯ ಎಂ.ಜಿ.ಎಂ ಕಾಲೇಜಿನಲ್ಲಿ ಪಿ.ಯು ಹಾಗೂ ಬೆಂಗಳೂರಿನ ಅಂಬೇಡ್ಕರ್ ವಿ.ವಿಯಲ್ಲಿ ಬಿ.ಇ ಪದವಿ ಪಡೆದ ಈಕೆ ಬೆಂಗಳೂರಿನಲ್ಲಿ 2016 ರಲ್ಲಿ ಟಾಪ್ ಮಾಡಲ್ ಹಂಟ್ ಸ್ಪರ್ಧೆಯಲ್ಲಿ ಖ್ಯಾತ ಚಲನಚಿತ್ರ ನಟಿ ರಶ್ಮಿಕಾ ಮದ್ದಣ್ಣ ಜೊತೆ ಸ್ಪರ್ಧಿಸಿ ದ್ವಿತೀಯ ಸ್ಥಾನ ಪಡೆದಿದ್ದು, ಮಿಸ್ ಇಂಡಿಯಾ ಸ್ಪರ್ಧೆಗೂ ಅರ್ಹತೆ ಪಡೆದಿದ್ದರು ಎನ್ನಲಾಗಿದೆ.
ಇವರು ಮೂಡ ಭಟ್ಕಳದ ಕಾಟಿಮನೆ ಕೃಷ್ಣಾ ಲಚ್ಚಮಯ್ಯ ನಾಯ್ಕ್ ಹಾಗೂ ಪ್ರಭಾವತಿ ದಂಪತಿಯ ಪುತ್ರಿಯಾದ ರಮ್ಯಾ ಕೃಷ್ಣ ನಾಯ್ಕ್ ಕಾಂತಾರ-1 ಈ ಸಿನಿಮಾದಲ್ಲಿ ರಾಣಿ ಪಾತ್ರ ನಿರ್ವಹಿಸಿದ್ದಾರೆ.
ಇವರು ಕಿರುತೆರೆ, ಕನ್ನಡ- ತಮಿಳು ಸಿನಿಮಾ ಜೊತೆಗೆ ವಿವಿಧ ಜಾಹೀರಾತು ಕ್ಷೇತ್ರದಲ್ಲೂ ಸಾಕಷ್ಟು ಅವಕಾಶ ಗಿಟ್ಟಿಸಿ ಭರವಸೆ ಮೂಡಿಸಿದ್ದಾರೆ.
ವರದಿ: ಉಲ್ಲಾಸ್ ಶಾನಭಾಗ ಶಿರಾಲಿ.
ಕಾಂತಾರದ ರಾಣಿಯಾಗಿ ಮಿಂಚಿದ ಭಟ್ಕಳದ ರಮ್ಯಾ
