ಭಟ್ಕಳ: ಸರ್ಕಾರದ ಅನ್ನಭಾಗ್ಯದ ಅಕ್ಕಿಯನ್ನು ಕಂಟೈನರ್ ನಲ್ಲಿ ತುಂಬಿ ಕಳ್ಳ ಸಾಗಾಟ ಮಾಡುತಿದ್ದವರನ್ನು ಭಟ್ಕಳ ಪೊಲೀಸರು ವಶಕ್ಕೆ ಪಡೆದ ಘಟನೆ ನಡೆದಿದೆ.
3,23,000ರೂ. ಮೌಲ್ಯದ ಒಟ್ಟು 9,500ಕೆ.ಜಿ.ಯಷ್ಟು ಅನ್ನಭಾಗ್ಯದ ಅಕ್ಕಿ ವಶಕ್ಕೆ ಪಡೆಯಲಾಗಿದೆ. ಸಾರ್ವಜನಿಕರು ನೀಡಿದ ಮಾಹಿತಿ ಆಧರಿಸಿ ಆಹಾರ ನಿರೀಕ್ಷಕ ಉದಯ ದ್ಯಾಮಪ್ಪ ತಳವಾರ ಹಾಗೂ ಭಟ್ಕಳ ಡಿವೈಎಸ್‌ಪಿ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿದ್ದು ,ಭಟ್ಕಳದ ನೂರ್ ಮಸೀದಿ ಬಳಿ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಅಕ್ಕಿಯ ಜೊತೆ ಸಾಗಾಟಕ್ಕೆ ಬಳಸಲಾದ ಕಂಟೈನರ್ ಲಾರಿ ವಶಕ್ಕೆ ಪಡೆಯಲಾಗಿದೆ.

ಪ್ರಮುಖ ಆರೋಪಿ ಮೊಹಮ್ಮದ್ ಸಮೀರ್ ಭಟ್ಕಳ ಹಾಗೂ ಕಂಟೈನರ್ ಚಾಲಕ ಹಾಸನದ ಪ್ರವೀಣ್ ಎನ್.ಆರ್. ಎನ್ನುವವರು ವಿರುದ್ಧ ಭಟ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಘಟನೆ ಸಂಬಂಧ ಆಹಾರ ಇಲಾಖೆ ಹಾಗೂ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ವರದಿ: ಉಲ್ಲಾಸ್ ಶಾನಭಾಗ ಶಿರಾಲಿ.