ಕರ್ನಾಟಕ ಆಡಳಿತ ಸುಧಾರಣಾ ಆಯೋಗವು ಸರಕಾರಕ್ಕೆ ಸಲ್ಲಿಸಿದ ವರದಿಯನ್ನು ಮಾನ್ಯ ಮಾಡದಂತೆ ಜಿಲ್ಲಾ ಜನಪರ ಸಂಘಟನೆಗಳ ಒಕ್ಕೂಟ ಉತ್ತರ ಕನ್ನಡ ಇವರು ಮುಖ್ಯಮಂತ್ರಿಗಳಿಗೆ ಮನವಿ

Share

ಶಿರಸಿ: ಕರ್ನಾಟಕದ ಎರಡನೇ ಆಡಳಿತ ಸುಧಾರಣಾ ಆಯೋಗವು 9ನೇ ವರದಿಯನ್ನ ಸರಕಾರಕ್ಕೆ ಸಲ್ಲಿಸಿದ್ದು ಸಾರ್ವಜನಿಕ ಆಡಳಿತದಲ್ಲಿ ಪಾರದರ್ಶಕತೆ, ದಕ್ಷತೆ ಮತ್ತು ಹೊಣೆಗಾರಿಕೆ ಹೆಚ್ಚಿಸುವ ಉದ್ದೇಶದಿಂದ ಸಾಕಷ್ಟು ಶಿಪಾರಸುಗಳನ್ನು ಮಾಡಿದೆ ಅವುಗಳಲ್ಲಿ ಎಳು ನಿಗಮ- ಮಂಡಳಿಗಳನ್ನು ಸಂಪೂರ್ಣವಾಗಿ ಮುಚ್ಚುವಂತೆ ಶಿಫಾರಸ್ಸು ಮಾಡಿತ್ತು. ಅತ್ಯಂತ ಮಹತ್ವದ್ದಾಗಿರುವ “ಕರ್ನಾಟಕ ರಾಜ್ಯ ಸಮಾಜ ಕಲ್ಯಾಣ ಮಂಡಳಿ” “ಕರ್ನಾಟಕ ಆಗ್ರೋ ಇಂಡಸ್ಟ್ರೀಸ್ ಕಾರ್ಪೊರೇಷನ್”, “ಕರ್ನಾಟಕ ರಾಜ್ಯ ಆಗ್ರೋ ಕಾರ್ನ್ ಪ್ರೊಡಕ್ಟ್ಸ್ ಲಿಮಿಟೆಡ್” ಗಳು ಸೇರುವೆ.


ಆಡಳಿತದಲ್ಲಿನ ಸಾಮರ್ಥ್ಯ ಮತ್ತು ದಕ್ಷತೆಯನ್ನು ಹೆಚ್ಚಿಸುವಲ್ಲಿ ಸಹಕಾರಿಯಾಗಿರುವುದಕ್ಕಾಗಿಯೇ ವಿವಿಧ ಇಲಾಖೆಗಳಲ್ಲಿ ನಿಗಮ ಮಂಡಳಿಗಳು ರೂಪಗೊಂಡು ಅವುಗಳ ಸಂಯೋಜಿತ ಕಾರ್ಯಾಚರಣೆ ಚಾಲ್ತಿಯಲ್ಲಿವೆ. ಅದೇ ರೀತಿಯಲ್ಲಿ ತಳ ಸಮುದಾಯಗಳ ಶ್ರೇಯೋಭಿವೃದ್ಧಿಯಲ್ಲಿ ಇಲಾಖೆಯ ಉದ್ದೇಶಿತ ಸಾಮಾಜಿಕ ಶೈಕ್ಷಣಿಕ ಆರ್ಥಿಕ ಸಬಲೀಕರಣ ಯೋಜನೆಗಳ ಪರಿಣಾಮಕಾರಿ ಅನುಷ್ಠಾನದಲ್ಲಿ ಕರ್ನಾಟಕ ರಾಜ್ಯ ಸಮಾಜ ಕಲ್ಯಾಣ ಮಂಡಳಿಯ ಪಾತ್ರ ಹಾಗೂ ರಾಜ್ಯದ ಕೃಷಿ ತೋಟಗಾರಿಕಾ ಉತ್ಪನ್ನಗಳ ಉತ್ಪಾದನೆ, ಕಟಾವು, ಸಂಸ್ಕರಣೆ, ಸಂಗ್ರಹಣೆ ಮತ್ತು ಮಾರಾಟದಲ್ಲಿ ಕರ್ನಾಟಕ ಆಗ್ರೋ ಇಂಡಸ್ಟ್ರೀಸ್ ಕಾರ್ಪೊರೇಷನ್ ಹಾಗೂ ಕರ್ನಾಟಕ ರಾಜ್ಯ ಆಗ್ರೋ ಕಾರ್ನ್ ಪ್ರಾಡಕ್ಟ್ಸ್ ಲಿಮಿಟೆಡ್ ಗಳ ಹೊಣೆಗಾರಿಕೆ ಅತ್ಯಮೂಲ್ಯವಾದುದಾಗಿದೆ.
ಪ್ರಸ್ತುತ ನಿಗಮ ಮಂಡಳಿಗಳು ಕಾರಣಾಂತರದಿಂದ ಸಾಂದರ್ಭಿಕ ನಿಷ್ಕ್ರಿಯತೆಗೆ ಅಥವಾ ನಷ್ಟಕ್ಕೆ ಅಥವಾ ಇನ್ನಿತರ ವೈಫಲ್ಯಕ್ಕೆ ಸಿಲುಕಿದ್ದರು ಸಹ ಅವುಗಳ ಪುನಶ್ಚೇತನ ದೊಂದಿಗೆ ಪರಿಣಾಮಕಾರಿ ಕಾರ್ಯಾಚರಣೆಗೆ ಅನುವಾಗುವಂತೆ ಇನ್ನೂ ಹೆಚ್ಚಿನ ದೊರಕಬೇಕಿದೆ.


ತನ್ಮೂಲಕ ರೈತ ಸಮುದಾಯದ ಹಿತಾಸಕ್ತಿ ಕೃಷಿ ಕ್ಷೇತ್ರದ ಬೆಳವಣಿಗೆ ಕಾಪಾಡುವುದು ಮತ್ತು ಹಿಂದುಳಿದ ವರ್ಗ, ಮಹಿಳೆಯರು, ಮಕ್ಕಳು, ದುರ್ಬಲರು, ಅಲ್ಪಸಂಖ್ಯಾತರು, ಅಂಗವಿಕಲರು ಮತ್ತು ಹಿರಿಯ ನಾಗರಿಕ ಸಬಲೀಕರಣದಲ್ಲಿ ಇಲಾಖೆಗಳೊಂದಿಗೆ ಸಂಯೋಜಿತ ಪಾತ್ರವಹಿಸುತ್ತಿರುವುದು ಪ್ರಸ್ತುತ ನಿಗಮ ಮಂಡಳಿಗಳ ಮುಂದುವರಿಕೆ ಅತಿ ಮಹತ್ವದ್ದಾಗಿದೆ. ಜೊತೆಗೆ ನಿಗಮ- ಮಂಡಳಿಗಳ ಉದ್ದೇಶ ಸಾಪಲ್ಯಗೊಳಿಸುವಲ್ಲಿ ಆಯ ಪಕ್ಷದ ಮುಖಂಡರಿಗೆ ಕಾರ್ಯಕರ್ತರಿಗೆ ಪಾಲ್ಗೊಳ್ಳಲು ದೊರೆಯುವ ಅವಕಾಶವೂ ಆಗಿದೆ. ಹೀಗಿರುವಾಗ ಆಡಳಿತದಲ್ಲಿ ಪಾರದರ್ಶಕತೆ ದಕ್ಷತೆ ಮತ್ತು ಹೊಣೆಗಾರಿಕೆ ಹೆಚ್ಚಾಗುವುದಕ್ಕಾಗಿ ಎಂಬ ಅಸಂಬದ್ಧ ಕಾರಣದೊಂದಿಗೆ ಸಂಪೂರ್ಣವಾಗಿ ಮುಚ್ಚುವುದಕ್ಕೆ ಸಲಹೆ ನೀಡಿರುವುದು ನಿಜಕ್ಕೂ ಹಾಸ್ಯಸ್ಪದ ಮತ್ತು ಕಡೆಗಣನೆಗೊಳಪಟ್ಟ ಸಮುದಾಯ ಹಾಗೂ ವಿಶಾಲ ರೈತ ಸಮುದಾಯದಡೆ ತೋರಿದ ನಿಷ್ಕಾಳಜಿಯಾಗಿದೆ.
ಆದುದರಿಂದ ಕರ್ನಾಟಕ ಆಡಳಿತ ಸುಧಾರಣಾ ಆಯೋಗ ಸರಕಾರಕ್ಕೆ ಸಲ್ಲಿಸಿದ ವರದಿಯಲ್ಲಿ ನಿಗಮ- ಮಂಡಳಿಗಳನ್ನು ಮುಚ್ಚುವಂತೆ ನೀಡಿರುವ ಶಿಫಾರಸ್ಸನ್ನು ಮಾನ್ಯ ಮಾಡದೆ ಸಂಪೂರ್ಣವಾಗಿ ತಿರಸ್ಕರಿಸಬೇಕೆಂದು ಜಿಲ್ಲಾ ಜನಪರಸಂಘಟನೆಗಳ ಒಕ್ಕೂಟ ಉತ್ತರ ಕನ್ನಡ ಇದರ ಜಿಲ್ಲಾಧ್ಯಕ್ಷರಾದ ಡಾ. ನಾಗೇಶ್ ನಾಯ್ಕ್ ಕಾಗಲ್ ಇವರು ಸದಸ್ಯರೊಂದಿಗೆ ಸಿರಸಿ ಉಪ ವಿಭಾಗಾಧಿಕಾರಿಗಳ ಮೂಲಕ ಸನ್ಮಾನ್ಯ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು. ಈ ಸಂದರ್ಭದಲ್ಲಿ ರಾಜೇಶ್ ದೇಶಭಾಗ ಸಿರ್ಸಿ, ಕೋಲಾ ಸಿರಸಿ ಸಮಾಜಮುಖಿ ಕನ್ನೇಶ್, ವಕೀಲರಾದ ಎಂ ಎನ್ ನಾಯ್ಕ್ ಸಿದ್ದಾಪುರ ಮತ್ತು ಜುಬೇರ್ ಜುಕಾಕೋ ಶಿರಸಿ ಹಾಗೂ ಗಿರೀಶ್ ನಾಯಕ್ ಅಹಿಂದ ಮುಖಂಡರು ಜೊತೆಯಲ್ಲಿದ್ದರು.

Leave a Reply

Your email address will not be published. Required fields are marked *

error: Content is protected !!