ಭಟ್ಕಳ: ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯವು ಆಯೋಜಿಸಿದ ವಿಶ್ವವಿದ್ಯಾಲಯ ಮಟ್ಟದ ಮಹಿಳಾ ಕಬಡ್ಡಿ ಸ್ಪರ್ಧೆಯಲ್ಲಿ ಭಟ್ಕಳದ ಶ್ರೀ ಗುರು ಸುಧೀಂದ್ರ ಕಾಲೇಜಿನ ವಿದ್ಯಾರ್ಥಿಗಳಾದ ಕುಮಾರಿ.ಸರಸ್ವತಿ ಭಂಡಾರಿ ಹಾಗೂ ಕುಮಾರಿ. ಪವಿತ್ರಾ ಮಡಿವಾಳ ಯುನಿವರ್ಸಿಟಿ ಬ್ಲೂ ಆಗಿ ಆಯ್ಕೆಯಾಗಿದ್ದು

ಚೆನ್ನೆನ ವಿನಾಯಕ ಮಿಶನ್ಸ್ ರಿಸರ್ಚ ಫೌಂಡೇಶನ ನಲ್ಲಿ ಜರುಗುವ ಅಂತರ ವಿಶ್ವವಿದ್ಯಾಲಯ-ರಾಷ್ಟ್ರಮಟ್ಟದ ಸ್ಪರ್ಧೆಯಲ್ಲಿ ದಕ್ಷಿಣವಲಯವನ್ನು ಪ್ರತಿನಿಧಿಸಲಿದ್ದು, ಈ ಮೂಲಕ ಜಿಲ್ಲೆಗೆ ಹಾಗೂ ಕಾಲೇಜಿಗೆ ಕೀರ್ತಿ ತಂದಿರುತ್ತಾರೆ.
ಇವರ ಸಾಧನೆಗೆ ಭಟ್ಕಳ ಎಜ್ಯುಕೇಶನ್ ಟ್ರಸ್ಟ್ನ ಆಡಳಿತ ಮಂಡಳಿ, ಪ್ರಾಂಶುಪಾಲರು, ಉಪನ್ಯಾಸಕರು, ದೈಹಿಕ ಶಿಕ್ಷಕರು, ಸಿಬ್ಬಂದಿವರ್ಗ, ಪಾಲಕರು, ಹಾಗೂ ವಿದ್ಯಾರ್ಥಿಗಳು ಮೆಚ್ಚುಗೆ ವ್ಯಕ್ತಪಡಿಸಿ ಅಂತರಾಷ್ಟ್ರೀಯ ಮಟ್ಟದಲ್ಲಿ ಕೀರ್ತಿಗಳಿಸಲೆಂದು ಶುಭ ಹಾರೈಸಿರುತ್ತಾರೆ.