
ಮುರುಡೇಶ್ವರದ ಸಮುದ್ರದಲ್ಲಿ ವಿಸರ್ಜನೆಯಾದ ಜಮಖಂಡಿಯ ಆಂಜನೇಯ.
ಭಟ್ಕಳ: ಜಮಖಂಡಿಯಲ್ಲಿರುವ ಪುರಾತನ ಆಂಜನೇಯ ದೇವಸ್ಥಾನದ ಪುನರ್ ಪ್ರತಿಷ್ಠಾಪನೆಯ ಸಲುವಾಗಿ ಈ ಹಿಂದೆ ಪ್ರತಿಷ್ಠಾಪನೆಯಾಗಿದ್ದ 102 ವರ್ಷಗಳಿಂದ ಪೂಜಿಸಿ ಆರಾಧನೆ ಗಯಲ್ಪಟ್ಟಂತಹ ಆಂಜನೇಯ ಮೂರ್ತಿಯನ್ನು ವಿಧಿ ವಿಧಾನಗಳೊಂದಿಗೆ ಮುರುಡೇಶ್ವರಕ್ಕೆ ತಂದು ನಡುಸಮುದ್ರದಲ್ಲಿ ವಿಸರ್ಜಿಸಲ್ಪಟ್ಟಿದೆ.

ಜಮಖಂಡಿಯಿಂದ ಮೊದಲು ವಿಶೇಷ ಪೂಜೆಗಳೊಂದಿಗೆ ವಿಸರ್ಜನಾ ಮೂರ್ತಿಯನ್ನು ಮುರುಡೇಶ್ವರಕ್ಕೆ ತಂದು ಬಳಿಕ ಓಶಿಯನ್ ಅಡ್ವೆಂಚರ್ ಬೋಟಿನಲ್ಲಿ ನಡು ಸಮುದ್ರಕ್ಕೆ ತೆರಳಿ ಮೂರ್ತಿಗೆ ಅಂತಿಮ ಪೂಜೆ ಸಲ್ಲಿಸಿ ನಂತರ ಪವಿತ್ರವಾದ ಜಲದಲ್ಲಿ ಮೂರ್ತಿಯನ್ನು ವಿಸರ್ಜಿಸಲಾಯಿತು.

ಈ ಸಂದರ್ಭದಲ್ಲಿ ಸ್ಥಳೀಯರ ಸಹಕಾರ ಸಹಯೋಗದೊಂದಿಗೆ ಹಾಗೂ ದೇವಾಲಯದ ಧರ್ಮದರ್ಶಿಗಳ ಉಪಸ್ಥಿತಿಯಲ್ಲಿ ಪೂಜಾ ಕಾರ್ಯಕ್ರಮದೊಂದಿಗೆ ಜಮಖಂಡಿಯ ಆಂಜನೇಯ ಮೂರ್ತಿಗೆ ವಿಸರ್ಜನೆಯ ಗೌರವಪೂರ್ಣ ವಿದಾಯ ನೀಡಲಾಯಿತು.
ವರದಿ: ಉಲ್ಲಾಸ್ ಶಾನಭಾಗ ಶಿರಾಲಿ.
