ಭಟ್ಕಳ: ಹಾರೈಕೆಗೆ ಎಲ್ಲ ಸದಿಚ್ಛೆಗಳನ್ನು ಈಡೇರಿಸುವ ದೊಡ್ಡ ಶಕ್ತಿ ಇದೆ. ಕಾವ್ಯದ್ಮಕವಾದ ಹಾರೈಕೆ ಉಪಸ್ಥಿತರಿದ್ದ ಎಲ್ಲರ ಮನಸ್ಸನ್ನು ಅರಳಿಸಿದೆ, ಎಲ್ಲರ ಮನಸ್ಸಿನಲ್ಲಿ ಕನ್ನಡದ ಕಲರವ ಮೊಳುಗುವಂತೆ ಮಾಡಿದೆ ಎಂದು ಭಟ್ಕಳ ಕಸಾಪ ಅಧ್ಯಕ್ಷ ಗಂಗಾಧರ ನಾಯ್ಕ ಹೇಳಿದರು.
ಅವರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು, ಸಾಹಿತ್ಯ ಪರಿಷತ್ತಿನ ಆಜೀವ ಸದಸ್ಯ ಹಾಗೂ ವರದಿಗಾರ ರಾಮಚಂದ್ರ ಕಿಣಿ ಅವರ ಮಗಳು ಪ್ರಣವಿಯ ಜನ್ಮದಿನದ ಸಂದರ್ಭದಲ್ಲಿ ನಡೆದ ಮನೆಯಂಗಳದಲ್ಲಿ ಕಾವ್ಯೋತ್ಸವ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸಾಹಿತ್ಯ ಪರಿಷತ್ತಿನ ಅಜೀವ ಸದಸ್ಯ ರಾಮಚಂದ್ರ ಕಿಣಿ ತಮ್ಮ ಮಗಳ ಜನ್ಮದಿನದಂದು ಕವಿಗೋಷ್ಠಿಯನ್ನು ಆಯೋಜಿಸಲು ವಿನಂತಿಸಿಕೊAಡಿದ್ದು ಅವರ ಕನ್ನಡ ಭಾಷೆ, ನೆಲ, ಜಲದ ಪ್ರೀತಿಯ ಕಾಳಜಿ ತೋರಿಸಿದೆ. ತಾಲೂಕಿನ ಕವಿಗಳು ಅರ್ಥಪೂರ್ಣವಾದ ಕವಿತೆಯ ಮೂಲಕ ಜನ್ಮದಿನವನ್ನು ಆಚರಿಸಿಕೊಳ್ಳುತ್ತಿರುವ ಕಂದಮ್ಮಳಿಗೆ ಹಾರೈಕೆಯ ಸುರಿಮಳೆಯನ್ನೇ ಸುರಿಸಿದ್ದಾರೆ. ಎಲ್ಲರ ಮನಸ್ಸಿನಲ್ಲಿ ಕನ್ನಡದ ಕಲರವ ಮೊಳುಗುವಂತೆ ಮಾಡಿದೆ. ಇದಕ್ಕೆ ಕಾವ್ಯವನ್ನು ಆಸ್ವಾದಿಸಿ ಬಂದ ಉತ್ತಮ ಪ್ರತಿಕ್ರಿಯೆಯೇ ಸಾಕ್ಷಿಯಾಗಿದೆ. ಸಾಹಿತ್ಯದ ಉದ್ದೇಶವೇ ಎಲ್ಲರ ಮನಸನ್ನ ಅರಳಿಸುವುದು. ರಾಮಚಂದ್ರ ಕಿಣಿ ದಂಪತಿಗಳು ವರ್ಷದಲ್ಲಿ ಒಮ್ಮೆ ಇಂಥ ಕಾರ್ಯಕ್ರಮದ ಆತಿಥ್ಯ ವಹಿಸಿ ಸಾಹಿತ್ಯರಾಧನೆಯನ್ನು ನಿರಂರಾತರವಾಗಿ ನಡೆಸಿಕೊಂಡು ಹೋಗಬೇಕು ಎಂದರು.
ಕವಿಗೋಷ್ಠಿಯಲ್ಲಿ ಶ್ರೀಧರ ಶೇಟ್ ಶಿರಾಲಿ, ಮಂಜುನಾಥ ನಾಯ್ಕ ಯಲ್ವಡಿಕವೂರ್, ಸವಿತಾ ನಾಯ್ಕ, ಸುರೇಶ ಮುರುಡೇಶ್ವರ, ಹೇಮಲತಾ ರಾವ್, ಜಯಶ್ರೀ ಆಚಾರ್ಯ ಮತ್ತು ಎಚ್.ಎನ್.ನಾಯ್ಕ ಹುಟ್ಟು ಹಬ್ಬದ ಕುರಿತು ಕವಿತೆಗಳನ್ನು ವಾಚಿಸಿದರು.ಇದೇ ಸಂದರ್ಭದಲ್ಲಿ ಕನ್ನಡ ಸಾಹಿತ್ಯದ ಕೈಂಕರ್ಯದಲ್ಲಿ ಸಾಹಿತ್ಯ ಪರಿಷತ್ತಿನ ಜೊತೆಗೆ ಕೈಜೋಡಿಸಿದ ಕಿಣಿ ಕುಟುಂಬದವರಿಗೆ ಅಭಿನಂದನಾ ಪತ್ರವನ್ನು ನೀಡಿ ಗೌರವಿಸಲಾಯಿತು.
ಕಸಾಪ ಗೌರವ ಕೋಶಾಧ್ಯಕ್ಷ ಶ್ರೀಧರ್ ಶೇಟ್ ಕಾರ್ಯಕ್ರಮ ನಿರೂಪಿಸಿ ಸ್ವಾಗತಿಸಿದರು. ಕಸಾಪ ಆಜೀವ ಸದಸ್ಯ ರಾಮಚಂದ್ರ ಕಿಣಿ ಎಲ್ಲರನ್ನು ವಂದಿಸಿ ಅತ್ಯಂತ ಕಡಿಮೆ ಸಮಯದಲ್ಲಿ ಅದ್ಭುತವಾದ ಕವಿಗೋಷ್ಠಿ ಆಯೋಜಿಸಿ ನಮ್ಮ ಮನೆ ಮನಗಳನ್ನು ಅರಳಿಸಿರುವ ಕವಿಗೋಷ್ಠಿ ನಮ್ಮ ಮನಸಲ್ಲಿ ಶಾಶ್ವತವಾಗಿ ಉಳಿಯಲಿದೆ. ಇದಕ್ಕಾಗಿ ಭಟ್ಕಳ ತಾಲೂಕ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಗಂಗಾಧರ ನಾಯ್ಕ, ಶ್ರೀಧರ ಶೇಟ್ ಮತ್ತು ಎಲ್ಲ ಬಳಗಕ್ಕೆ ಹೃದಯ ಪೂರ್ವಕ ಕೃತಜ್ಞತೆ ಸಲ್ಲಿಸಿದರು. ನಮ್ಮ ಮಕ್ಕಳಲ್ಲಿ ಸದಾ ಕನ್ನಡತನ ಉಳಿಸಿ ಬೆಳೆಕೊಂಡು ಹೋಗುವಲ್ಲಿ ಇಂದಿನ ಕಾರ್ಯಕ್ರಮ ಪ್ರೇರಣೆ ನೀಡಿದೆ ಎಂದರು.
ವರದಿ: ಉಲ್ಲಾಸ ಶಾನಭಾಗ್