ಭಟ್ಕಳ :ಜನವರಿ 28 2026 ರಂದು ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ನಗರದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ವತಿಯಿಂದ ಪತ್ರಕರ್ತರ ರಾಜ್ಯಮಟ್ಟದ ವಿಚಾರ ಸಂಕಿರಣ ಮತ್ತು ಪತ್ರಕರ್ತರ ಸಮಾಗಮ ಹಾಗೂ ರಾಜ್ಯಮಟ್ಟದ ಪ್ರಶಸ್ತಿ ಪ್ರಧಾನವನ್ನು ಸಮಾರಂಭವನ್ನು ಹಮ್ಮಿಕೊಳ್ಳಲಾಗಿದ್ದು. ಈ ಅರ್ಥಪೂರ್ಣ ಸಮಾರಂಭಕ್ಕೆ ಸುಪ್ರೀಂಕೋರ್ಟಿನ ನಿವೃತ್ತ ನ್ಯಾಯಾಧೀಶರಾದ ಮಾನ್ಯ ಸಂತೋಷ್ ಹೆಗಡೆಯವರು ಉದ್ಘಾಟಿಸಲಿದ್ದಾರೆ.

ಮುಖ್ಯ ಅತಿಥಿಗಳಾಗಿ ಟಿ ಎಸ್ ಆರ್ ಪ್ರಶಸ್ತಿ ವಿಜೇತರು ನಾಡಿನ ಹಿರಿಯ ಪತ್ರಕರ್ತರಾದ ಗಂಗಾಧರ್ ಮೊದಲಿಯಾರ್ ಗ್ಯಾರಂಟಿ ನ್ಯೂಸ್ ಚಾನೆಲ್ ನ ಮುಖ್ಯಸ್ಥರು ಸಂಪಾದಕರಾದ ಶ್ರೀಮತಿ ರಾಧಾ ಹಿರೇಗೌಡರ್ ಕನ್ನಡಪ್ರಭ ದಿನಪತ್ರಿಕೆಯ ಹಿರಿಯ ಪತ್ರಕರ್ತರಾದ ಜಗಳೂರು ಕೃಷ್ಣರಾವ್ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ರಾಜ್ಯಾಧ್ಯಕ್ಷರಾದ ಬಂಗ್ಲೆ ಮಲ್ಲಿಕಾರ್ಜುನ ಉತ್ತರ ಕನ್ನಡ ಜಿಲ್ಲೆಯ ಉಸ್ತುವಾರಿ ಸಚಿವರು ಹಿರಿಯ ಅಧಿಕಾರಿಗಳು ಸಾಹಿತಿಗಳು ಹಾಗೂ ಹಲವಾರು ಸಂಘಟನೆಯ ಮುಖಂಡರು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿರುವರು. ಈ ಕಾರ್ಯಕ್ರಮವು ಉತ್ತರ ಕನ್ನಡ ಜಿಲ್ಲೆಯ ಉಸ್ತುವಾರಿ ಸಚಿವರಾದ ಶ್ರೀ ಮಂಕಾಳ್ ವೈದ್ಯ ರವರ ಅಧ್ಯಕ್ಷತೆಯಲ್ಲಿ ನೆರವೇರುವುದು ಎಂದು ಕರ್ನಾಟಕ ಕಾರ್ಯನಿರತ ಪತ್ರಕರ್ತರಧ್ವನಿ ಭಟ್ಕಳ ಘಟಕದ ಅಧ್ಯಕ್ಷರಾದ ಶಂಕರ್ ನಾಯಕ್ ಮತ್ತು ಕರಾವಳಿ ವಿಭಾಗದ ಅಧ್ಯಕ್ಷರಾದ ಕುಮಾರ್ ನಾಯಕ್ ಮತ್ತು ತಾಲೂಕು ಘಟಕದ ಉಪಾಧ್ಯಕ್ಷರಾದ ಉಲ್ಲಾಸ್ ಶಾನ್ಭಾಗ್ ಕಾರ್ಯದರ್ಶಿಯಾದ ಅರ್ಜುನ್ ಮಲ್ಯ ಖಜಾಂಚಿ ನಸಿಮುಲ್ಲ ಘನಿ ಜಾವೀದ್ ಸಿಂಗೇರಿ ಇವರುಗಳು ಪತ್ರಿಕಾ ಹೇಳಿಕೆಯನ್ನು ಬಿಡುಗಡೆ ಮಾಡಿರುತ್ತಾರೆ.
ವರದಿ ಉಲ್ಲಾಸ್ ಶಾನ್ಭಾಗ್