ಬ್ರಹ್ಮಶ್ರೀನಾರಾಯಣ ಗುರುಗಳ ತತ್ವಾದರ್ಶಗಳನ್ನು ನಾವೆಲ್ಲರೂ ಪಾಲಿಸುವಂತಾಗಬೇಕು : ತಹಸಿಲ್ದಾರ್ ನಾಗೇಂದ್ರ ಕೋಳಶೆಟ್ಟಿ

Share

ಭಟ್ಕಳ: ಕೇರಳದಲ್ಲಿ ಅಸ್ಪ್ರಶ್ಯತೆ ತಾಂಡವಾಡುತ್ತಿರುವ ಸಂದರ್ಭದಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ ಅವತಾರವಾಯಿತು. ಇವರ ತತ್ವಾದರ್ಶಗಳಿಂದಾಗಿ ಸಮಾಜದಲ್ಲಿ ಅಮೂಲಾಗ್ರ ಸುಧಾರಣೆಗಳು ಕಂಡುಬಂದವು ಎಂದು ತಹಶೀಲ್ದಾರ ನಾಗೇಂದ್ರ ಕೋಳಶೆಟ್ಟಿ ಅಭಿಪ್ರಾಯಪಟ್ಟರು.

ತಾಲೂಕಿನ ಆಡಳಿತ ಸೌಧದಲ್ಲಿ ತಾಲೂಕಾಡಳಿತ ಹಮ್ಮಿಕೊಂಡಿದ್ದ ಬ್ರಹ್ಮಶ್ರೀ ನಾರಾಯಣಗುರುಗಳ 171 ನೇ ಜನ್ಮಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಆಗೀನ ಕಾಲದಲ್ಲಿ ಕೇಳವರ್ಗದವರು ರಸ್ತೆಯಲ್ಲಿ ಓಡಾಡುವಾಗ ಅವರ ಹೆಜ್ಜೆ ಗುರುತುಗಳು ಮೂಡಬಾರದು ಎಂಬ ಕಾರಣಕ್ಕೆ ತಮ್ಮ ಬೆನ್ನ ಹಿಂಬದಿಯಲ್ಲಿ ಪೊರಕೆಯನ್ನು ಕಟ್ಟಿಕೊಂಡು ಓಡಾಡಬೇಕಿತ್ತು. ಕೆಳವರ್ಗದ ಮಹಿಳೆಯರು ಮೇಲ್ವಸ್ತ್ರ ಧರಿಸಿದರೆ ಅದು ಮೇಲ್ವರ್ಗಕ್ಕೆ ಅಗೌರವ ಸೂಚಿದಂತೆ ಎಂಬ ಕೀಳು ಮಾನಸಿಕತೆ ಮುಡುಗಟ್ಟಿತ್ತು. ಇಂತಹ ಸಂದರ್ಭದಲ್ಲಿ ನಾರಾಯಣ ಗುರುಗಳು ಯಾರ ಜತೆಯೂ ಸಂಘರ್ಷಕ್ಕಿಳಿಯದೆ ತಮ್ಮದೆ ರೀತಿಯಲ್ಲಿ ಸಮಾಜ ಸುಧಾರಣೆಗೆ ಮುಂದಾದರು. ದೇವಸ್ಥಾನಕ್ಕೆ ಕೇಳವರ್ಗದ ಜನರಿಗೆ ನಿಷೇಧವಿದ್ದರಿಂದ ತಮ್ಮದೆ ಆದ ದೇವಸ್ಥಾನವನ್ನು ನಿರ್ಮಿಸಿ ಕೆಳವರ್ಗದ ಜನರಿಗೆ ಪ್ರವೇಶ ಕಲ್ಪಿಸಿದರು. ಹಿಂದೂ ಸಂಪ್ರದಾಯವನ್ನು ದಿಕ್ಕರಿಸದೆ ಇದರಲ್ಲಿದ್ದ ಅನಿಷ್ಠ ಪದ್ಧತಿಯನ್ನು ಹೋಗಲಾಡಿಸುವ ಪ್ರಯತ್ನ ಮಾಡಿದರು. ಗಾಂಧಿಜಿಯವರಂತಹ ಅನೇಕ ಸ್ವಾತಂತ್ರ್ಯ ಹೋರಾಟಗಾರರಿಗೂ ಅವರು ಆದರ್ಶವಾಗಿದ್ದರು. ಅವರನ್ನು ಯಾವುದೇ ಜಾತಿಗೆ ಸೀಮಿತಗೋಳಿಸದೆ ಎ ಎಲ್ಲರೂ ಅವರ ಆದರ್ಶವನ್ನು ಪಾಲಿಸುವಂತಾಗಬೇಕು ಎಂದರು.
ಈ ಸಂದರ್ಭದಲ್ಲಿ ರಾಷ್ಟ್ರೀಯ ಈಡಿಗ ಮಹಾಮಂಡಳಿಯ ತಾಲೂಕಾ ಅಧ್ಯಕ್ಷ ಶ್ರೀಧರ ನಾಯ್ಕ, ಉಪಾಧ್ಯಕ್ಷ ಮಾರುತಿ ನಾಯ್ಕ, ಗ್ರಾಮ ಲೆಕ್ಕಾಧಿಕಾರಿ ತಿಪ್ಪಣ್ಣ ಮತ್ತಿತರರು ಹಾಜರಿದ್ದರು.
ವರದಿ: ಉಲ್ಲಾಸ್ ಶಾನಭಾಗ ಶಿರಾಲಿ.

Leave a Reply

Your email address will not be published. Required fields are marked *

error: Content is protected !!