ಮೃತ ಭಿಕ್ಷುಕನ ಅಂತ್ಯಸಂಸ್ಕಾರ. ಭಟ್ಕಳದಲ್ಲೊಂದು ಮಾನವೀಯತೆ ಮೆರೆದ ಘಟನೆ

Share

ಭಟ್ಕಳ ಪಟ್ಟಣದ ಹಳೆ ಬಸ್ ನಿಲ್ದಾಣದ ಸಮೀಪ ಅನಾರೋಗ್ಯದಿಂದ ಮೃತಪಟ್ಟಿದ್ದ ಭಿಕ್ಷುಕನ ಅಂತ್ಯಸಂಸ್ಕಾರವನ್ನು ರುದ್ರ ಭೂಮಿಯಲ್ಲಿ ಪೊಲೀಸರು ಹಾಗೂ ಸಮಾಜಸೇವಕರ ಸಮ್ಮುಖದಲ್ಲಿ ಮಾನವೀಯತೆ ಮೆರೆದ ಘಟನೆ ನಡೆದಿದೆ.

ಆಗಸ್ಟ್ 30ರಂದು ಅಂಗಡಿ ಮುಂಭಾಗದಲ್ಲಿ ಕುಳಿತ ಸ್ಥಿತಿಯಲ್ಲಿಯೇ ಬಿಕ್ಷುಕನು ಸಾವಿಗೀಡಾಗಿದ್ದ, ನಂತರ ಮೃತದೇಹವನ್ನು ಭಟ್ಕಳ ಸರ್ಕಾರಿ ಆಸ್ಪತ್ರೆಗೆ ಸಾಗಿಸಿ ಶವಗಾರದಲ್ಲಿ ಇರಿಸಲಾಗಿತ್ತು. ಆದರೆ ಎಂಟು ದಿನವಾದರೂ ಯಾವುದೇ ವಾರಸುದಾರರು ಬಂದಿರಲಿಲ್ಲ.
ಮೃತನ ವಾರಸುದಾರರನ್ನು ಪತ್ತೆಹಚ್ಚಲು ಪೊಲೀಸರು ಸಾರ್ವಜನಿಕರಲ್ಲಿ ಮನವಿ ಮಾಡಿದರು ಯಾವುದೇ ರೀತಿಯ ಪ್ರಯೋಜನವಾಗಲಿಲ್ಲ ಹೀಗಾಗಿ ಮರಣೋತ್ತರ ಪರೀಕ್ಷೆಯ ಬಳಿಕ ಅಂತ್ಯಕ್ರಿಯೆ ನೆರವೇರಿಸಲಾಯಿತು.

ಅಂತ್ಯ ಸಂಸ್ಕಾರದಲ್ಲಿ ಸಾಮಾಜಿಕ ಕಾರ್ಯಕರ್ತ ಇಸ್ಮಾಯಿಲ್ ಸವುದ್ ಗವಾಯಿ, ಮಂಜು ಮುಟ್ಟಳ್ಳಿ, ನಗರ ಪೊಲೀಸ್ ಠಾಣೆ ಎ. ಎಸ್. ಐ ಅಂತೋನಿ ಫರ್ನಾಂಡಿಸ್, ಪೋಲಿಸ್ ಸಿಬ್ಬಂದಿ ಯಾದ ಮಹೇಶ್ ಪಟಗಾರ, ಅಂಬುಲೆನ್ಸ್ ಚಾಲಕ ಎವರೇಟ್ಸ್ ಪುರಸಭೆ ಪೌರಕಾರ್ಮಿಕರು ಹಾಜರಿದ್ದರು.
ವರದಿ: ಉಲ್ಲಾಸ್ ಶಾನಭಾಗ ಶಿರಾಲಿ.

Leave a Reply

Your email address will not be published. Required fields are marked *

error: Content is protected !!