ಭಟ್ಕಳ: ದಿನನಿತ್ಯ ನಿರಂತರವಾಗಿ ಒತ್ತಡದಲ್ಲಿ ಕರ್ತವ್ಯ ನಿರ್ವಹಿಸುವ ಪೊಲೀಸ್ ಸಿಬ್ಬಂದಿಗಳಿಗೆ ಆರೋಗ್ಯ ಸಂರಕ್ಷಣೆ ಅರಿವು ಕಾರ್ಯಕ್ರಮ ಭಟ್ಕಳದ ಅರ್ಬನ್ ಬ್ಯಾಂಕ್ ಹಾಲ್ ನಲ್ಲಿ ನಡೆಯಿತು.
ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಆಕ್ಯೂಪ್ರೆಸ್ಸರ್ ಚಿಕಿತ್ಸಾ ಪ್ರವೀಣರಾದ, ಲೇಖಕ ಪಿ.ಜಿ. ಪ್ರವೀಣ್ ರಿಂದ, ನಿತ್ಯ ಆಹಾರ ಸೇವನೆ, ನಿಯಮಿತ ವ್ಯಾಯಾಮ, ಮಧುಮೇಹ, ರಕ್ತದೊತ್ತಡ ನಿಯಂತ್ರಣ ಹಾಗೂ ಇನ್ನಿತರೇ ಆರೋಗ್ಯದ ಸಂರಕ್ಷಣೆಯ ಬಗ್ಗೆ ಮಾಹಿತಿ ನೀಡಿ ಸರಳ ವ್ಯಾಯಾಮ ನೀಡುವ ಆಕ್ಯೂಪ್ರೆಸ್ಸರ್ ಸಾಧನೆಗಳನ್ನು ಪರಿಚಯಿಸಿದರು.

ಈ ಸಂದರ್ಭದಲ್ಲಿ ಸಿಪಿಐ ದಿವಾಕರ್, ಸಿಪಿಐ ಮಂಜುನಾಥ ಲಿಂಗಾರೆಡ್ಡಿ, ಎಸ್ ಐ ನವೀನ್ ನಾಯ್ಕ್, ಎಸ್ ಐ ರನ್ನು ಗೌಡ, ಎಸ್ ಐ ತಿಮ್ಮಪ್ಪ, ಎಸ್ ಐ ರಾಥೋಡ್ ಹಾಗೂ ಪೊಲೀಸ್ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.
ವರದಿ: ಉಲ್ಲಾಸ್ ಶಾನಭಾಗ ಶಿರಾಲಿ.