ಭಟ್ಕಳ ತಾಲೂಕಿನಲ್ಲಿ ಅನಂತ ಚತುರ್ದಶಿ ವ್ರತಾಚರಣೆ.

ಅಳ್ವೆಕೋಡಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ
Share

ವೆಂಕಟಾಪುರದ ಶ್ರೀ ಲಕ್ಷ್ಮಿ ವೆಂಕಟೇಶ ದೇವಸ್ಥಾನ

ತಾಲೂಕಿನಲ್ಲೆಡೆ ಅನಂತ ಚತುರ್ದಶಿ ವ್ರತಾಚರಣೆಯನ್ನು ಅತಿ ಸಂಭ್ರಮದಿಂದ ಆಚರಿಸಲಾಯಿತು.
ಅನಂತ ಚತುರ್ದಶಿ ವ್ರತದ ಪ್ರಯುಕ್ತ ತಾಲೂಕಿನ ವಿವಿಧ ದೇವಸ್ಥಾನಗಳಲ್ಲಿ ಶ್ರೀ ದೇವರಿಗೆ ವಿಶೇಷ ಸರ್ವಾಭರಣ ದೊಂದಿಗೆ ಅಲಂಕರಿಸಿ ಪೂಜೆ ನೆರವೇರಿತು.
ಪ್ರಾರಂಭದಲ್ಲಿ ಶ್ರೀ ಅನಂತ ಕಲಶ ಪ್ರತಿಷ್ಠಾಪಿಸಿ, ವೈದಿಕರಿಂದ ವಿವಿಧ ರೀತಿಯ ಪೂಜಾ ವಿಧಿ ವಿಧಾನಗಳು ನೆರವೇರಿದವು. ದೇವಸ್ಥಾನವನ್ನು ವಿವಿಧ ಬಗೆಯ ಹೂಗಳಿಂದ ಅಲಂಕರಿಸಿ ನಂತರ ಪ್ರತಿಷ್ಠಾಪಿಸಿದ ಶ್ರೀ ಅನಂತದೇವರ ಕಲಸದ ಮೇಲೆ ವಿಶೇಷವಾಗಿ ಸಿಂಗರಿಸಲಾಯಿತು.

ಭಟ್ಕಳದ ತಿರುಮಲ ದೇವಸ್ಥಾನ

ಅನಂತ ಚತುರ್ದಶಿ ವ್ರತವನ್ನು ಯತಿ ಚಾತುರ್ಮಾಸದ ಕೊನೆಯ ವ್ರತವೆಂದು ಹೇಳಲಾಗುತ್ತದೆ.
ವ್ಯಾಸ ಪೂರ್ಣಿಮೆಯೆಂದು ವ್ಯಾಸ ಪೂಜೆ ಮಾಡಿ ಚಾತುರ್ಮಾಸ್ಯ ವ್ರತಕ್ಕೆ ಚಾಲನೆ ನೀಡಿ, ಕೊನೆಯದಾಗಿ ಅನಂತನ ವ್ರತಾಚರಣೆ ಮಾಡಿ ನಂತರ ಯತಿಗಳು ಮೃತಿಕಾ ವಿಸರ್ಜನೆ ನಡೆಸುತ್ತಾರೆ.

ಶಿರಾಲಿಯ ಶ್ರೀ ಮಹಾಗಣಪತಿ ಮಹಮ್ಮಾಯ ದೇವಸ್ಥಾನ

ಮುರುಡೇಶ್ವರದ ವೆಂಕಟರಮಣ ದೇವಸ್ಥಾನ

ಈ ಹಿನ್ನೆಲೆಯಲ್ಲಿ ವಿಶಿಷ್ಟತೆ ಪಡೆದ ಅನಂತ ಚತುರ್ದಶಿ ಕಲಸದ ದರ್ಶನ ಪಡೆದರೆ ಸರ್ವ ಸಂಕಷ್ಟಗಳು ದೂರವಾಗಿ ಶ್ರೀದೇವರ ಅನುಗ್ರಹ ಪ್ರಾಪ್ತವಾಗುತ್ತದೆ ಎನ್ನುವುದು ವಾಡಿಕೆ. ಭಟ್ಕಳ, ವೆಂಕಟಾಪುರ, ಶಿರಾಲಿ, ಅಳ್ವೆ ಕೋಡಿ, ಮುರುಡೇಶ್ವರ ಸೇರಿದಂತೆ ತಾಲೂಕಿನ ವಿವಿಧ ದೇವಸ್ಥಾನಗಳಲ್ಲಿಯೂ ಸಹ ಅನಂತ ಚತುರ್ದಶಿ ಕಲಸ ಪ್ರತಿಷ್ಠಾಪಿಸಲಾಗಿತ್ತು.
ವರದಿ: ಉಲ್ಲಾಸ್ ಶಾನಭಾಗ ಶಿರಾಲಿ.

Leave a Reply

Your email address will not be published. Required fields are marked *

error: Content is protected !!