ವಿಶ್ವ ಹಿಂದೂ ಪರಿಷತ್ತಿನ ಕಾರವಾರ ಜಿಲ್ಲೆಯ ಮಾಜಿ ಉಪಾಧ್ಯಕ್ಷರು ಹಾಗೂ ಶ್ರೀ ಮಾರಿಕಾಂಬ ದೇವಸ್ಥಾನ ಭಟ್ಕಳ ಇದರ ಧರ್ಮದರ್ಶಿಗಳಾಗಿ ಸೇವೆಯನ್ನು ಸಲ್ಲಿಸಿದ ಹಿಂದೂ ಸಮಾಜ ಚಿಂತಕರಾದ ದಿವಂಗತ: ಶಂಕರ್. ಎಂ. ಶೆಟ್ಟಿ .ಇವರ ಸ್ಮರಣಾರ್ಥವಾಗಿ ಸಾರ್ವಜನಿಕ ಶ್ರದ್ಧಾಂಜಲಿ ಸಭೆಯನ್ನು ದಿನಾಂಕ:5-09-25 ರ ಶುಕ್ರವಾರ ಸಂಜೆ 4:30 ಗಂಟೆಗೆ ಭಟ್ಕಳದ ಶ್ರೀ ಮಾರಿಕಾಂಬ ಸಭಾಭವನ, ಚನ್ನಪಟ್ಟಣ ಶ್ರೀ ಹನುಮಂತ ದೇವಸ್ಥಾನದಲ್ಲಿ ಹಮ್ಮಿಕೊಳ್ಳಲಾಗಿದೆ.
ಶ್ರೀಯುತರ ಹಿತೈಷಿಗಳು ಹಾಗೂ ಸಮಸ್ತ ಹಿಂದೂ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಅಗಲಿದ ಹಿಂದೂ ಮುಖಂಡರಿಗೆ ಸಮಸ್ತ ಹಿಂದೂ ಸಮಾಜದ ವತಿಯಿಂದ ಗೌರವ ಸಲ್ಲಿಸುವ ಸಲುವಾಗಿ ವಿಶ್ವ ಹಿಂದೂ ಪರಿಷತ್ ಭಟ್ಕಳ ನೇತೃತ್ವದಲ್ಲಿ ಹಾಗೂ ಸಂಘ ಪರಿವಾರದ ವಿವಿಧ ಹಿಂದೂಪರ ಸಂಘಟನೆಗಳ ಸಹಯೋಗದೊಂದಿಗೆ ಶ್ರೀಯುತರನ್ನು ಸ್ಮರಿಸಿ ಪುಷ್ಪ ನಮನ ಹಾಗೂ ಸಾರ್ವಜನಿಕ ಶ್ರದ್ಧಾಂಜಲಿ ಸಭೆಯಲ್ಲಿ ಪಾಲ್ಗೊಳ್ಳಲು ವಿನಂತಿಸಿಕೊಳ್ಳಲಾಗಿದೆ.
ವರದಿ: ಉಲ್ಲಾಸ್ ಶಾನಭಾಗ ಶಿರಾಲಿ.