ಭಟ್ಕಳ: ಶ್ರೀ ಮಂಜುನಾಥ್ ಲಿಂಗಾರೆಡ್ಡಿ ಪೊಲೀಸ್ ನಿರೀಕ್ಷಕರು ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆ ರವರು ದಿನಾಂಕ 04-09 -2025 ರಂದು ಠಾಣೆಗೆ ಹಾಜರಾಗಿ ನೀಡಿದ ದೂರಿನ ಅನ್ವಯ ಶಂಕರ್ ಅನಂತ್ ದೇವಾಡಿಗ 35 ವರ್ಷದ ಉಳ್ಮನ್ ಬೆಂಗ್ರೆ ನಿವಾಸಿ ಈತನು ಸ್ವಂತ ಲಾಭಕ್ಕಾಗಿ ಮಾರಾಟ ಮಾಡುವ ಉದ್ದೇಶದಿಂದ ಯಾವುದೇ ಪಾಸ್ ಯಾ ಪರ್ಮಿಟ್ ಇಲ್ಲದೆ ಅಕ್ರಮವಾಗಿ ಮರಳು ತೆಗೆದ್ದು ಪರಿಸರಕ್ಕೆ ಹಾನಿ ಮಾಡಿ ಮತ್ತು ಮರಳನ್ನು ಕಳ್ಳತನ ಮಾಡಿ ಸರಕಾರದ ಬೊಕ್ಕಸಕ್ಕೆ ನಷ್ಟ ಉಂಟು ಮಾಡಿ ತನ್ನ ಟಾಟಾ 207 ಪಿಕಪ್ ವಾಹನ ಸಂಖ್ಯೆ ಕೆ ಏ 31 /A- 1446 ರಲ್ಲಿ ಸಾಗಾಟ ಮಾಡಿಕೊಂಡು ಹೋಗುವಾಗ ದಿನಾಂಕ 04- 09-2025 ರಂದು ಭಟ್ಕಳ ತಾಲೂಕಿನ ರಾಷ್ಟ್ರೀಯ ಹೆದ್ದಾರಿ 66 ಶಿರಾಲಿ ಚೆಕ್ಪೋಸ್ಟ್ ಹತ್ತಿರ ಸಿಕ್ಕಿದ್ದರಿಂದ ಆರೋಪಿತನ ವಿರುದ್ಧ ಸರಕಾರದ ಪರವಾಗಿ ಕಾನೂನಿನಂತೆ ಕ್ರಮ ಜರುಗಿಸಲು ಪಿ ಎಚ್ ಸಿ 1211 ನಾರಾಯಣ್ ನಾಯ್ಕ್ ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆ ಇವರು ದೂರನ್ನು ದಾಖಲಿಸಿಕೊಂಡಿರುತ್ತಾರೆ.
ವರದಿ ಉಲ್ಲಾಸ್ ಶಾನಭಾಗ್