ಭಟ್ಕಳ: ಭಟ್ಕಳದ ಯುವತಿಯಾದ ರಮ್ಯಕೃಷ್ಣ ರಿಷಬ್ ಶೆಟ್ಟಿ ನಿರ್ದೇಶನದ ಕಾಂತಾರ -1 ಚಲನಚಿತ್ರ ದಲ್ಲಿ ಮಹಾರಾಣಿಯಾಗಿ ನಟಿಸುವ ಮೂಲಕ ಜಗತ್ತಿನಾದ್ಯಂತ ಸೈ ಎನಿಸಿಕೊಂಡಿದ್ದರು . ರಮ್ಯಾ ಇವರು ಮೂಡ ಭಟ್ಕಳದ ಕಾಟಿಮನೆ ಕೃಷ್ಣ ಲಕ್ಷ್ಮಯ್ಯ ನಾಯಕ್ ಮತ್ತು ಪ್ರಭಾವತಿ ದಂಪತಿಯ ಸುಪುತ್ರಿ.

ರಮ್ಯಾ ಇವರ ತನ್ನ ತಂದೆ ತಾಯಿಯ ಜೊತೆ ಇಂದು ನಿಶ್ಚಲಮಕ್ಕಿ ಶ್ರೀ ತಿರುಮಲ ವೆಂಕಟರಮಣ ದೇವಸ್ಥಾನಕ್ಕೆ ಭೇಟಿ ನೀಡಿದ್ದರು .ಈ ಸಂದರ್ಭದಲ್ಲಿ ದೇವಸ್ಥಾನದ ಆಡಳಿತ ಮಂಡಳಿಯು ಆಡಳಿತ ಮಂಡಳಿಯ ಪರವಾಗಿ ಸನ್ಮಾನಿಸಿ ಗೌರವಿಸಲಾಯಿತು. ರಮ್ಯಾ ತನ್ನ ಶಿಕ್ಷಣವನ್ನು ಭಟ್ಕಳದ ಆನಂದಆಶ್ರಮ ವಿದ್ಯಾಸಂಸ್ಥೆಯಲ್ಲಿ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ನಂತರ ಉಡುಪಿಯ ಎಂ.ಜಿ.ಎಂ. ಕಾಲೇಜಿನಲ್ಲಿ ಪಿ.ಯು. ಹಾಗೂ ಬೆಂಗಳೂರಿನ ಅಂಬೇಡ್ಕರ್ ವಿ.ವಿ.ಯಲ್ಲಿ ಬಿ .ಇ. ಪದವಿಯನ್ನು ಪಡೆದಿದ್ದರು. ಈಕೆ ಬೆಂಗಳೂರಿನಲ್ಲಿ 2016ರಲ್ಲಿ ಟಾಪ್ ಮಾಡೆಲ್ ಹಂಟ್ ಸ್ಪರ್ಧೆಯಲ್ಲಿ ಖ್ಯಾತ ಚಿತ್ರನಟಿ ರಶ್ಮಿಕ ಮದ್ದಣ್ಣ ಜೊತೆ ಸ್ಪರ್ಧಿಸಿ ದ್ವಿತೀಯ ಸ್ಥಾನ ಪಡೆದಿದ್ದರು ಹಾಗೂ ಮಿಸ್ ಇಂಡಿಯಾ ಸ್ಪರ್ಧೆಗೂ ಅರ್ಹತೆ ಪಡೆದಿದ್ದರು. ಇವರು ಕಿರುತೆರೆ ಕನ್ನಡ ತಮಿಳು ಸಿನಿಮಾ ಜೊತೆಗೆ ವಿವಿಧ ಜಾಹೀರಾತುಗಳಲ್ಲೂ ಸಾಕಷ್ಟು ಅವಕಾಶ ಗಿಟ್ಟಿಸಿ ಭರವಸೆ ಮೂಡಿಸಿದ್ದಾರೆ.