
ಭಟ್ಕಳದಲ್ಲಿ ನಿಷೇಧಿತ ಇ-ಸಿಗರೇಟ್ ವಶಕ್ಕೆ ಆರೋಪಿ ಬಂಧನ.
ಉತ್ತರ ಕನ್ನಡ ಜಿಲ್ಲೆಯಲ್ಲಿ ಇ-ಸಿಗರೇಟ್ ನಿಷೇಧದ ಬಳಿಕ ಇದೇ ಮೊದಲಬಾರಿಗೆ ದೊಡ್ಡ ಮೊಟ್ಟದ ಇ-ಸಿಗರೇಟ್ ವಶಕ್ಕೆ ಪಡೆಯಲಾಗಿದೆ.
ಭಟ್ಕಳದಲ್ಲಿನಿಷೇಧಿತ ಇ-ಸಿಗರೇಟ್ ಮಾಫಿಯಾ ಜಾಲ ಪತ್ತೆಯಾಗಿದ್ದು ಪೊಲೀಸರಿಂದ 2.39ಲಕ್ಷ ರೂ. ಮೌಲ್ಯದ ಸೊತ್ತು ವಶಕ್ಕೆ ಪಡೆಯಲಾಗಿದೆ.ಭಟ್ಕಳ ನಗರದ ಹೂವಿನ ಚೌಕ್ ಬಳಿ ಟೌನ್ ಸೆಂಟರ್ ನಲ್ಲಿರುವ ರಿಮ್ಸ್ ಅಂಗಡಿಗೆ ಪೊಲೀಸರ ದಾಳಿ ನಡೆಸಿದ್ದು 2.39 ಲಕ್ಷ ರೂ. ಮೌಲ್ಯದ 51 ಇ-ಸಿಗರೇಟ್ ಹಾಗೂ 154 ನಿಕೋಟಿನ್ ಲಿಕ್ವಿಡ್ ರಿಫಿಲ್‌ಗಳು ವಶಕ್ಕೆ ಪಡೆದಿದ್ದಾರೆ.
ಭಟ್ಕಳ ಮುಕ್ದಮ್ ಕಾಲೋನಿಯ ನಿವಾಸಿಯಾದ ಅಂಗಡಿ ಮಾಲಿಕನಾದ ಮಕ್ಬುಲ್ ನನ್ನು ಬಂಧಿಸಿದ್ದಾರೆ. ಈ ಕಾರ್ಯಾಚರಣೆಯಲ್ಲಿ ಭಟ್ಕಳನಗರ ಠಾಣೆ ಇನ್ಸ್ಪೆಕ್ಟರ್ ದಿವಾಕರ್ ಪಿ.ಎಂ. ನೇತೃತ್ವದ ಪಿಎಸ್ಐಗಳಾದ ನವೀನ್ .ಎಸ್. ನಾಯ್ಕ್ ,ತಿಮ್ಮಪ್ಪ. ಎಸ್ ಹಾಗೂ ಸಿಬ್ಬಂದಿಗಳು ಭಾಗಿಯಾಗಿದ್ದರು.
ವರದಿ: ಉಲ್ಲಾಸ್ ಶಾನಭಾಗ ಶಿರಾಲಿ.