ವಕೀಲರ ಸಂಘದ ೨೦೨೫-೨೬ನೇ ಸಾಲಿನ ನೂತನ ಅಧ್ಯಕ್ಷರಾಗಿ ಈಶ್ವರ ಎಂ. ನಾಯ್ಕ, ಕಾರ್ಯದರ್ಶಿಯಾಗಿ ನಾಗೇಶ ಗದ್ದೆಮನೆ ಆಯ್ಕೆ

Share

ಭಟ್ಕಳ: ವಕೀಲರ ಸಂಘದ ೨೦೨೫-೨೬ನೇ ಸಾಲಿನ ನೂತನ ಅಧ್ಯಕ್ಷರಾಗಿ ಈಶ್ವರ ಎಂ. ನಾಯ್ಕ, ಕಾರ್ಯದರ್ಶಿಯಾಗಿ ನಾಗೇಶ ಗದ್ದೆಮನೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ವಕೀಲರ ಸಂಘದ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಚುನಾವಣಾಧಿಕಾರಿಯಾಗಿ ಹಿರಿಯ ವಕೀಲ ಎಂ.ಎಲ್. ನಾಯ್ಕ ಕರ್ತವ್ಯ ನಿರ್ವಹಿಸಿದರು. ಚುನಾವಣೆಯ ಸಭೆಯ ಅಧ್ಯಕ್ಷತೆಯನ್ನು ವಕೀಲರ ಸಂಘದ ಅಧ್ಯಕ್ಷ ಎಂ.ಜೆ. ನಾಯ್ಕ ವಹಿಸಿದ್ದರು.
ಸಂಘದ ಉಪಾಧ್ಯಕ್ಷರಾಗಿ ಆರ್.ಜಿ.ನಾಯ್ಕ, ಜಂಟಿ ಕಾರ್ಯದರ್ಶಿಯಾಗಿ ಶ್ರಾವ್ಯ ನಾಯ್ಕ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಅಧ್ಯಕ್ಷರ ಆಯ್ಕೆಗೆ ರಾಜೇಶ ನಾಯ್ಕ ಸೂಚಿಸಿದರು. ನಾಗರಾಜ ಈ.ಎಚ್. ಅನುಮೋದಿಸಿದರು. ಉಪಾಧ್ಯಕ್ಷರ ಆಯ್ಕೆಗೆ ವಿ.ಎ. ಅಕ್ಕಿವಳ್ಳಿ ಸೂಚಿಸಿದರು. ಎಸ್.ಕೆ. ನಾಯ್ಕ ಅನುಮೋದಿಸಿದರು. ಕಾರ್ಯದರ್ಶಿ ಆಯ್ಕೆಗೆ ಎಸ್.ಬಿ. ಬೊಮ್ಮಾಯಿ ಸೂಚಿಸಿದರು. ವಿ.ಎ. ಅಕ್ಕಿವಳ್ಳಿ ಅನುಮೋದಿಸಿದರು. ಜಂಟಿ ಕಾರ್ಯದರ್ಶಿ ಆಯ್ಕೆಗೆ ಎಂ.ಎಚ್. ನಾಯ್ಕ ಸೂಚಿಸಿದರು. ವಿ.ಜೆ. ನಾಯ್ಕ ಅನುಮೋದಿಸಿದರು. ಆಯ್ಕೆ ಸಭೆಯಲ್ಲಿ ಆಯ್ಕೆ ಸಭೆಯಲ್ಲಿ ವಕೀಲರುಗಳಾದ ನಾಗರಾಜ ಈ.ಎಚ್., ಎಸ್.ಎಂ.ನಾಯ್ಕ, ವಿ.ಎಫ್.ಗೋಮ್ಸ, ಕೆ.ಎಚ್. ನಾಯ್ಕ, ಸಿ.ಎಂ. ಭಟ್ಟ, ಮಹೇಶ ನಾಯ್ಕ, ರಕ್ಷಿತ್ ಆರ್. ಶ್ರೇಷ್ಠಿ ಮುಂತಾದವರು ಸೇರಿದಂತೆ ಹಿರಿಯ, ಕಿರಿಯ ವಕೀಲರುಗಳು ಉಪಸ್ಥಿತರಿದ್ದರು.
ವರದಿ: ಉಲ್ಲಾಸ್ ಶಾನಭಾಗ ಶಿರಾಲಿ.

Leave a Reply

Your email address will not be published. Required fields are marked *

error: Content is protected !!