ಭಟ್ಕಳ :ಗಂಡನ ಸಂಶಯ ಹಾಗೂ ಕಿರುಕುಳ ಸಹಿಸಲಾಗದೆ ಭಟ್ಕಳ ತಾಲೂಕಿನ ಮುಂಡಳ್ಳಿ ಗ್ರಾಮದ ನೀರಗದ್ದೆ ಯ ನಿವಾಸಿ ಸವಿತಾ ಸೋಮಯ್ಯ ನಾಯ್ಕ್ ಆತ್ಮಹತ್ಯೆಗೆ ಶರಣಾಗಿದ್ದಾರೆ. 32 ವಯಸ್ಸಿನ ಸವಿತಾ ನಾಯಕ್ ನೀರ್ಗದ್ದೆಯ ಸೊಮಯ್ಯ ನಾಯ್ಕ್ ಅವರನ್ನ ವಿವಾಹವಾಗಿದ್ದರು. ಸೋಮಯ್ಯ ನಾಯ್ಕ್ ಸೆಂಟ್ರಿಂಗ್ ಕೆಲಸವನ್ನು ಮಾಡಿಕೊಂಡು ಹಾಗೂ ಇವನ ಪತ್ನಿ ಸವಿತಾ ನಾಯ್ಕ್ ಬೇಕರಿ ಒಂದರಲ್ಲಿ ಕೆಲಸ ಮಾಡುತ್ತಿದ್ದಳು. ಆದರೆ ಸೋಮಯ್ಯ ನಾಯ್ಕ್ ಪತ್ನಿ ಸವಿತಾಳ ಮೇಲೆ ಅನುಮಾನ ಸಂಶಯ ಪಡಲು ಆರಂಭಿಸಿದ ಇದೇ ಅನುಮಾನ ಸಂಶಯದಿಂದ ಹೆಂಡತಿಯನ್ನು ಪೀಡಿಸಲು,ದೈಹಿಕವಾಗಿ ಕಿರುಕುಳ ನೀಡಲು ಆರಂಭಿಸಿದ. ಮದುವೆ ಆದ ದಿನದಿಂದ ಕಾಡುತ್ತಿದ್ದ ಸಂಶಯ ಕ್ರಮೇಣ ಹೆಚ್ಚಾಗಿದ್ದು ನಿತ್ಯವೂ ಪತ್ನಿಗೆ ಕಿರುಕುಳ ನೀಡುವುದನ್ನು ರೂಢಿ ಮಾಡಿಕೊಂಡಿದ್ದ ಸವಿತಾ ನಾಯ್ಕ್ ಮಾನಸಿಕ ಹಿಂಸೆಯ ಜೊತೆಗೆ ದೈಹಿಕವಾಗಿಯೂ ನೋವು ಅನುಭವಿಸುತ್ತಿದ್ದಳು. ಇಷ್ಟು ದಿನಗಳ ಕಾಲ ಪತಿಯ ಕ್ರೌರ್ಯ ಸಹಿಸಿಕೊಂಡಿದ್ದ ಸವಿತಾ ನಾಯ್ಕ್ ಅಗಸ್ಟ್ 28ರ ರಾತ್ರಿ 9:00ಗೆ ಅವರು ತನ್ನ ದುಪ್ಪಟ್ಟವನ್ನು ಉರುಳು ಮಾಡಿಕೊಂಡು ನೇಣಿಗೆ ಶರಣಾದರು. ತನ್ನ ತಂಗಿ ಸಾವಿಗೆ ಅವಳ ಗಂಡ ಸೋಮಯ್ಯ ನಾಯ್ಕ್ ನೀಡುತ್ತಿದ್ದ ಕಿರುಕುಳ ಕಾರಣ ಎಂದು ಮೋಹನ್ ನಾಯ್ಕ್ ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ದೂರು ಸ್ವೀಕರಿಸಿದ ಭಟ್ಕಳ ಗ್ರಾಮೀಣ ಪೊಲೀಸ್ ತನಿಖೆ ಕೈಗೊಂಡಿದ್ದಾರೆ.
ಭಟ್ಕಳ ತಾಲೂಕಿನ ಮುಂಡಳ್ಳಿ ನೀರ್ಗದ್ದೆ ನಿವಾಸಿ ಸವಿತಾ ನಾಯ್ಕ್ ಆತ್ಮಹತ್ಯೆಗೆ ಶರಣು
