
ಭಟ್ಕಳದ ಮೀನು ಮಾರಾಟಗಾರರು ಪುರಸಭೆ ವ್ಯಾಪ್ತಿಯ ಹಳೆಯ ಮೀನು ಮಾರುಕಟ್ಟೆಯನ್ನು ಸ್ಥಳಾಂತರ ಮಾಡುವುದು ನಿಲ್ಲಿಸಬೇಕೆಂದು ತಹಸಿಲ್ದಾರ್ ಮೂಲಕ ಸರ್ಕಾರಕ್ಕೆ ಮನವಿಯನ್ನ ನೀಡಿದ್ದರು. ಇದರ ತೀವ್ರತೆಯನ್ನು ಅರಿತ್ತ ಸಚಿವ ಮುಂಕಾಳ್ ವೈದ್ಯ ಅವರು ಶನಿವಾರ ಮಧ್ಯಾಹ್ನ 12:00 ಗಂಟೆಗೆ ಭಟ್ಕಳದ ಹಳೆಯ ಮೀನು ಮಾರುಕಟ್ಟೆಗೆ ದಿಢೀರ್ ಅಂತ ಭೇಟಿ ನೀಡಿದರು.
ಮೀನು ಮಾರಾಟಗಾರರನ್ನು ಉದ್ದೇಶಿಸಿ ಮಾತನಾಡಿದ ಅವರು ಭಟ್ಕಳದ ಪುರಸಭೆ ವ್ಯಾಪ್ತಿಯ ಮೀನು ಮಾರುಕಟ್ಟೆ ಭಟ್ಕಳದ ಮೊದಲ ಮೀನು ಮಾರುಕಟ್ಟೆ. ಇದರ ನಂತರ ಭಟ್ಕಳದ ವ್ಯಾಪ್ತಿಯಲ್ಲಿ 25 ಮೀನು ಮಾರುಕಟ್ಟೆ ಇದೆ. ಯಾರಯಾರಿಗೆ ಎಲ್ಲೆಲ್ಲಿ ಮೀನು ಮಾರುವ ಅವಕಾಶ ಇದೆಯೋ ಅಲ್ಲಲ್ಲಿ ಮೀನುಗಳನ್ನ ಮಾರಾಟ ಮಾಡುತ್ತಿದ್ದಾರೆ. ರಸ್ತೆಯ ಬದಿಯಲ್ಲೂ ಕುಳಿತು ಮೀನು ಮಾರುತ್ತಿದ್ದಾರೆ. ಆದರೆ ನಾನು ತುಂಬಾ ವಿನಂತಿಯನ್ನ ಮಾಡಿಕೊಂಡಿದ್ದೇನೆ ರಸ್ತೆ ಬದಿಯಲ್ಲಿ ಮೀನು ಮಾರಾಟ ಮಾಡಬೇಡಿ ಎಂದು. ಆದರೂ ಅನಿವಾರ್ಯ ಅವರು ರಸ್ತೆಯ ಬದಿಯಲ್ಲಿ ಮೀನನ್ನ ಮಾರುತಿದ್ದಾರೆ. ಅನಿವಾರ್ಯ ಎಂಬಂತೆ ನಮ್ಮ ಹತ್ತಿರ ಮತ್ತು ಸಾರ್ವಜನಿಕ ಹತ್ತಿರ ಮತ್ತು ಸರ್ಕಾರದ ಹತ್ತಿರನು ಅಷ್ಟೆಲ್ಲ ಮೀನು ಮಾರುಕಟ್ಟೆ ಮಾಡಲು ಸಾಧ್ಯವಿಲ್ಲ ಹೀಗಾಗಿ ಅವರು ರಸ್ತೆಯ ಬದಿಯಲ್ಲಿ ಮಾರುತ್ತಿದ್ದಾರೆ. ಪುರಸಭೆ ವ್ಯಾಪ್ತಿಯ ಹಳೆಯ ಮೀನು ಮಾರುಕಟ್ಟೆಯನ್ನು ತೆಗೆಯುತ್ತಿದ್ದೇವೆ ಎಂದು ಯಾರೂ ಹೇಳಿದ್ದು ಇಲ್ಲ ತೆಗೆಯುವುದು ಇಲ್ಲ. ಹೊಸ ಮಾರುಕಟ್ಟೆ ಕಟ್ಟಿ ಎಂಟು ವರ್ಷವಾಗಿದೆ ಅಲ್ಲಿ ಹೋಗುವವರು ಹೋಗಬಹುದು ಸೆಪ್ಟೆಂಬರ್ ಒಂದರಿಂದ ಹೊಸ ಮೀನು ಮಾರುಕಟ್ಟೆ , ಸಾರ್ವಜನಿಕರಿಗೆ ವ್ಯಾಪಾರಕ್ಕೆ ತೆರೆದಿರುತ್ತದೆ. ಅಲ್ಲಿ ವ್ಯಾಪಾರ ಮಾಡುವವರು ಮಾಡಬಹುದು ಹಳೆಯ ಮೀನು ಮಾರುಕಟ್ಟೆಯಲ್ಲಿ ವ್ಯಾಪಾರ ಮಾಡುವವರು ಮಾಡಬಹುದು. ಆದರೆ ಯಾವುದೇ ದೊಡ್ಡ ಗಾಡಿಗಳು,ದೊಡ್ಡ ಕಂಟೇನರ್ ಗಾಡಿಗಳನ್ನು ಹಳೆಯ ಮೀನು ಮಾರುಕಟ್ಟೆ ಒಳಗಡೆ ಬಿಡದಂತೆ ಪೊಲೀಸರಿಗೆ ಸೂಚನೆ ನೀಡಲಾಗಿದೆ. ಗಾಡಿಗಳು ಹಳೆಯ ಮೀನು ಮಾರುಕಟ್ಟೆಯ ಒಳಗೆ ಬರುವುದನ್ನ ನಿಲ್ಲಿಸಲಾಗುವುದು. ರಿಕ್ಷಾದ ಮೂಲಕ ಮೀನುಗಳನ್ನು ಹಳೆಯ ಮೀನು ಮಾರುಕಟ್ಟೆಗೆ ತರುವಂತೆ ಮಾಡಲಾಗುತ್ತದೆ ಎಂದು ಸಚಿವರು ಹೇಳಿದರು. ಈ ಹಳೆಯ ಮೀನು ಮಾರುಕಟ್ಟೆ ಬಿದ್ದೋಗುವ ಸ್ಥಿತಿಯಲ್ಲಿದ್ದು ಪುರಸಭೆಯವರ ಜೊತೆ ಮಾತನಾಡಿ ಅದರ ಬಗ್ಗೆ ಸರಕಾರದ ಗಮನಕ್ಕೆ ತಂದು ಹೊಸ ಕಟ್ಟಡ ನಿರ್ಮಿಸುವುದರ ಬಗ್ಗೆ ಯೋಚಿಸುತ್ತೇವೆ. ನೆಲಮಡಿಯಲ್ಲಿ ಮೀನು ಮಾರಾಟ ಮಾಡುವವರಿಗೆ ಅವಕಾಶ ಮಾಡಿಕೊಡಲಾಗುವುದು ನಂತರ ಮೇಲಿನ ಮಹಡಿ ವ್ಯಾಪಾರಗಳಿಗೆ ಅವಕಾಶ ಮಾಡಿಕೊಡಲಾಗುವುದು ಎಂದು ಹೇಳಿದರು ಮೀನು ಮಾರಾಟಗಾರರು ಅನಾವಶ್ಯಕವಾಗಿ ಟೆನ್ಶನ್ ತೆಗೆದುಕೊಳ್ಳುವುದು ಬೇಡ , ಮೀನು ಮಾರಾಟ ಮಾಡುವ ಮಹಿಳೆಯರ ಕುಂದು ಕೊರತೆಗಳನ್ನು ಆಲಿಸಿದ ಸಚಿವರು ಮುಂದಿನ ದಿನಗಳಲ್ಲಿ ನಿಮ್ಮ ಸಮಸ್ಯೆಗಳನ್ನ ಸಂಪೂರ್ಣವಾಗಿ ಪರಿಹಾರ ಮಾಡುತ್ತೇನ, ಸ್ವಚ್ಛತೆಯನ್ನು ಕಾಪಾಡಿ ಎಂದು ಹೇಳಿದರು
.ವರದಿ: ಉಲ್ಲಾಸ್ ಶಾನಭಾಗ್