
ಭಟ್ಕಳ ಜೂಲೈ: ಕರ್ನಾಟಕ ವಿಶ್ವವಿದ್ಯಾಲಯವು ಕಳೆದ ಜುಲೈ ತಿಂಗಳಲ್ಲಿ ಜರುಗಿಸಿದ ೨೦೨೪-೨೫ ನೇ ಸಾಲಿನ ೬ನೇ ಸೆಮಿಸ್ಟರ್ ಪದವಿ ಪರೀಕ್ಷೆಯಲ್ಲಿ ತಾಲೂಕಿನ ಶ್ರೀ ಗುರು ಸುಧೀಂದ್ರ ಕಾಲೇಜಿಗೆ ೯೬.೨೪% ಫಲಿತಾಂಶ ಬಂದಿರುತ್ತದೆ.
ಬಿಸಿಏ ವಿಭಾಗದಲ್ಲಿ ಭೂಮಿಕಾ ಕುಂದಾಪುರ ೯.೬೩, ಬಿಕಾಂ ವಿಭಾಗದಲ್ಲಿ ಮಹಾಲಕ್ಷ್ಮೀ ಕಾಮತ ೯.೮೮, ಬಿಬಿಏ ವಿಭಾಗದಲ್ಲಿ ಶ್ರೀನಿಧಿ ಪೈ ೯.೬೫ ಹಾಗು ಬಿಏ ವಿಭಾಗದಲ್ಲಿ ಚಂದನಾ ನಾಯ್ಕ್ ೯.೨೩ ಎಸ್.ಜಿ.ಪಿ.ಏ ಅಂಕಗಳಿಸಿರುತ್ತಾರೆ. ಸದರಿ ಪರೀಕ್ಷೆಯಲ್ಲಿ ಬಿಸಿಏ ವಿಭಾಗದಲ್ಲಿ ೧೦೮ ವಿದ್ಯಾರ್ಥಿಗಳು ಉತ್ತಮ ಶ್ರೇಣಿಯಲ್ಲಿ, ೬ ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ, ಬಿ.ಕಾಂ ವಿಭಾಗದಲ್ಲಿ ೯ ವಿದ್ಯಾರ್ಥಿಗಳು ಅತ್ಯುತ್ತಮ ಶ್ರೇಣಿಯಲ್ಲಿ, ೮೧ ಉತ್ತಮ ಶ್ರೇಣಿಯಲ್ಲಿ ಹಾಗೂ ೧೩ ಪ್ರಥಮ ಶ್ರೇಣಿಯಲ್ಲಿ, ಬಿಬಿಏ ವಿಭಾಗದಲ್ಲಿ ೧ ವಿದ್ಯಾರ್ಥಿ ಅತ್ಯುತ್ತಮ ಶ್ರೇಣಿಯಲ್ಲಿ, ೨೭ ಉತ್ತಮ ಶ್ರೇಣಿಯಲ್ಲಿ ಹಾಗೂ ೭ ಪ್ರಥಮ ಶ್ರೇಣಿಯಲ್ಲಿ ಮತ್ತು ಬಿಏ ವಿಭಾಗದಲ್ಲಿ ೧೭ ವಿದ್ಯಾರ್ಥಿಗಳು ಉತ್ತಮ ಶ್ರೇಣಿಯಲ್ಲಿ ತೇರ್ಗಡೆಗೊಂಡಿರುತ್ತಾರೆ. ಇದರೊಂದಿಗೆ ಹತ್ತಕ್ಕಿಂತ ಹೆಚ್ಚು ವಿದ್ಯಾರ್ಥಿಗಳು ವಿವಿಧ ವಿಷಯಗಳಲ್ಲಿ ನೂರಕ್ಕೆ ನೂರು ಅಂಕಗಳಿಸಿರುತ್ತಾರೆ. ವಿದ್ಯಾರ್ಥಿಗಳ ಈ ಸಾಧನೆಗೆ ಭಟ್ಕಳ ಎಜುಕೇಶನ್ ಟ್ರಸ್ಟ್ ಅಧ್ಯಕ್ಷ ಡಾ. ಸುರೇಶ ವಿ ನಾಯಕ್, ಆಡಳಿತ ಮಂಡಳಿಯ ಸದಸ್ಯರು, ಪ್ರಾಂಶುಪಾಲರು, ವಿವಿಧ ವಿಭಾಗಗಳ ಉಪ ಪ್ರಾಂಶುಪಾಲರು, ಬೋಧಕ-ಬೋಧಕೇತರ ಸಿಬ್ಬಂದಿಗಳು ಹರ್ಷ ವ್ಯಕ್ತಪಡಿಸಿರುತ್ತಾರೆ.