ಭಟ್ಕಳ: ರಾಷ್ಟ್ರೀಯ ಈಡಿಗ ಮಹಾಮಂಡಳಿ ಕರ್ನಾಟಕ, ಜಿಲ್ಲಾ ರಾಷ್ಟ್ರೀಯ ಈಡಿಗ- ನಾಮಧಾರಿ- ಬಿಲ್ಲವ- ದಿವರು ಮಹಾಮಂಡಳಿ ಇವರ ಆಶ್ರಯದಲ್ಲಿ ಸಮುದಾಯದ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ, ರಾಜಕೀಯದ ಬಗ್ಗೆ ಸಮಗ್ರ ಚಿಂತನೆ-ಚರ್ಚೆ-ನಿರ್ಣಯ ಕಾರ್ಯಕ್ರಮವು ಸೆಪ್ಟೆಂಬರ್ 3 ಬುಧವಾರದಂದು ಸಿದ್ದಾಪುರದ ಬಾಲ ಭವನದಲ್ಲಿ ನಡೆಯಲಿದೆ ಎಂದು ಬ್ರಹ್ಮಶ್ರೀ ನಾರಾಯಣ ಗುರು ಶಕ್ತಿ ಪೀಠ ಕರದಾಳು ಚಿತ್ತಾಪುರದ ಪೀಠಾಧಿಪತಿ ಡಾ. ಶ್ರೀ ಪ್ರಣಮಾನಂದ ಸ್ವಾಮೀಜಿಗಳು ತಿಳಿಸಿದರು.
ಅವರು ಇಲ್ಲಿನ ಖಾಸಗಿ ಹೋಟೆಲ್ ನಲ್ಲಿ ಕರೆಯಲಾದ ಪತ್ರಿಕಾಗೋಷ್ಠಿಯಲ್ಲಿ ಪತ್ರಕರ್ತರೊಂದಿಗೆ ಮಾತನಾಡುತ್ತಿದ್ದರು.
‘ಜಿಲ್ಲೆಯ 2.5 ಲಕ್ಷ ಮತದಾರಿರುವ 3-4 ಲಕ್ಷ ಜನಸಂಖ್ಯೆ ಇರುವ ಜಾತಿ ನಾಮಧಾರಿ ಸಮಾಜವು ಜಿಲ್ಲೆತ ರಾಜಕೀಯ ಶಕ್ತಿ ಸಮುದಾಯಕ್ಕೆ ಯಾವುದೇ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ, ರಾಜಕೀಯ ಶಕ್ತಿಯ ಬದಲಾವಣೆ ಆಗುತ್ತಿಲ್ಲ.
ಸಮುದಾಯಕ್ಕೆ ಸಿಗಬೇಕಾದ ಹಕ್ಕುಗಳು ಸಿಗುತ್ತಿಲ್ಲ. ಸಮುದಾಯದ ಹಕ್ಕು ಪಡೆಯಲು ನಮ್ಮಲ್ಲಿನ ಜನಪ್ರತಿನಿಧಿಗಳಿಂದಾದ ಕೊರತೆಗಳನ್ನು ಗಮನಿಸಿದ್ದೇವೆ. ಇದರ ಜೊತೆಗೆ ಸಮಾಜದಲ್ಲಿನ ಮೇಲ್ವರ್ಗದ ರಾಜಕಾರಣಿಗಳ ಭಯೊತ್ತಡದ ಸ್ರಷ್ಟಿಯಿಂದ ನಾಮಧಾರಿ ಸಮುದಾಯವು ಸಂಪೂರ್ಣವಾಗಿ ಕತ್ತಲೆಯಲ್ಲಿ ಇಡಲಾಗಿದೆ. ಇದಕ್ಕೆ ನಾಮಧಾರಿ ಸಮಾಜದ ಕೆಲವೊಂದು ತಪ್ಪುಗಳು ಸಹ ಇವೆ. ಈ ಎಲ್ಲಾ ತಪ್ಪುಗಳ ಪರಾಮರ್ಶೆ ಹಾಗೂ ಚಿಂತನೆಗಾಗಿ ಒಂದು ವೇದಿಕೆಯ ಅವಶ್ಯಕತೆ ಇದ್ದು ಆ ಹಿನ್ನೆಲೆ ರಾಷ್ಟ್ರೀಯ ಈಡಿಗ ಮಹಾಮಂಡಳಿ ಕರ್ನಾಟಕ, ಜಿಲ್ಲಾ ರಾಷ್ಟ್ರೀಯ ಈಡಿಗ- ನಾಮಧಾರಿ- ಬಿಲ್ಲವ- ದಿವರು ಮಹಾಮಂಡಳಿ ಇವರ ಆಶ್ರಯದಲ್ಲಿ ಸಮುದಾಯದ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ, ರಾಜಕೀಯದ ಬಗ್ಗೆ ಸಮಗ್ರ ಚಿಂತನೆ-ಚರ್ಚೆ-ನಿರ್ಣಯ ಕಾರ್ಯಕ್ರಮವು ನಡೆಯಲು ತೀರ್ಮಾನಿಸಲಾಗಿದೆ. ಈ ಕಾರ್ಯಕ್ರಮಕ್ಕೆ ಸಮುದಾಯದ ಎಲ್ಲಾ ಸ್ಥರದಲ್ಲಿ ದುಡಿದ ಹಾಗೂ ದುಡಿಯುತ್ತಿರುವ ಸಮಾಜದ ಜನರು ಪಾಲ್ಗೊಳ್ಳಬೇಕು ಎಂದು ಕರೆ ನೀಡಿದರು.
ನಾಲ್ಕು ಜಿಲ್ಲೆಯ 12 ವಿಧಾನಸಭಾ ಕ್ಷೇತ್ರದಲ್ಲಿ 85 ಸಾವಿರ ಮತಗಳು ಈ ಕ್ಷೇತ್ರದಲ್ಲಿದ್ದರು ಸಹ ನಮ್ಮ ಸಮುದಾಯದ ಪ್ರಮುಖವಾಗಿದ್ದರು ಸಹ ಅಭಿವೃದ್ಧಿ ಆಗಿಲ್ಲ ಎಂದರೆ ನಮ್ಮ ಜನರು ಎಚ್ಚೆತ್ತುಕೊಳ್ಳಬೇಕಾಗಿದೆ. ಎಂದಿಗೂ ಸಹ ನಮ್ಮ ನಾಮಧಾರಿ ಸಮಾಜದ
ಬೇರೆ ಜಾತಿಗಳ ಬಗ್ಗೆ ಕೆಟ್ಟದಾಗಿ ಮಾತನಾಡಲ್ಲವಾಗಿದೆ.
2024 ಜುಲೈ 16 ರಂದು ಅಂಕೋಲಾದ ಶಿರೂರು ಗುಡ್ಡ ಕುಸಿದು ಬಿದ್ದು ನಾಮಧಾರಿ ಸಮಾಜದ
7 ಜನ ಮರಣ ಹೊಂದಿದ್ದರು ಸಹ ಆ ಕುಟುಂಬಗಳಿಗೆ ಬೆನ್ನೆಲುಬಾಗಿ ನಿಲ್ಲಲು ನಮ್ಮ ಸಮುದಾಯಕ್ಕೆ ಸಾಧ್ಯವಾಗಲಿಲ್ಲ ಎಂಬುದು ಇಡೀ ರಾಜ್ಯವೇ ಗಮನಿಸಿದೆ.
ಕೇವಲ 2 ಲಕ್ಷ ಕೇಂದ್ರ ಸರಕಾರದಿಂದ ಹಾಗೂ 5 ಲಕ್ಷ ರಾಜ್ಯ ಸರಕಾರದಿಂದ ನೀಡಿದ್ದಾರೆ ಹೊರತು ದೊಡ್ಡ ಮೊತ್ತದ ಪರಿಹಾರ ಅವರಿಗೆ ಸಿಕ್ಕಿಲ್ಲ. ಜೊತೆಗೆ ನಾಮಧಾರಿ ಸಮಾಜದ ಇಬ್ಬರ ಮ್ರತ ದೇಹ ಸಹ ಪತ್ತೆಯಾಗಿಲ್ಲ.
ನಮ್ಮ ಹೋರಾಟಕ್ಕೆ ಯಾವುದೇ ಸ್ಪಂದನೆಯು ಸಹ ರಾಜಕಾರಣಿಗಳು ನೀಡದೇ ಅನ್ಯಾಯ ಮಾಡಿದ್ದಾರೆ.
ಸಂಪೂರ್ಣವಾಗಿ ಗುಡ್ಡ ಕುಸಿತ ಅವೈಜ್ಞಾನಿಕ ಕಾಮಗಾರಿಯಿಂದ ನಡೆದಿದೆ. ಈ ಬಗ್ಗೆ 9 ತಿಂಗಳ ಸತತ ನ್ಯಾಯಾಲಯದ ಹೋರಾಟದ ಮೇಲೆ ಐ.ಆರ್.ಬಿ ಕಂಪನಿಯ 8 ಜನರ ಮೇಲೆ ಮರ್ಡರ ಕೇಸ್ ದಾಖಲಾಯಿತು. ಗಡ್ಕರಿ ಅವರು ದೆಹಲಿ ನಮ್ಮನ್ನು ಕರೆಯಿಸಿ ಪ್ರಕರಣ ವಾಪಸ್ಸು ತೆಗೆದುಕೊಳ್ಳುವಂತೆ ತಿಳಿಸಿ ಮ್ರತದ ಕುಟುಂಬಕ್ಕೆ ಹೆಚ್ಚಿನ ಪರಿಹಾರ ನೀಡುವ ಚರ್ಚೆಗಳು ನಡೆದಿವೆ ಎಂದ ಅವರು
ಉಸ್ತುವಾರಿ ಮಂಕಾಳ ವೈದ್ಯ ಅವರಿಗೆ ಹೆಚ್ಚಿನ ಜವಾಬ್ದಾರಿ ಇತ್ತು. ಸದ್ಯ ಮೀನುಗಾರಿಕೆಗೆ ತೆರಳಿದ ಮೋಗೇರ ಸಮಾಜದ ಮೀನುಗಾರರು ಮ್ರತ ಪಟ್ಟ ಕುಟುಂಬಕ್ಕೆ ಕುದ್ದು ಸಚಿವರು ತೆರಳಿ 10 ಲಕ್ಷ ರೂ. ನೀಡಿದ್ದಾರೆ. ಇದು ನಾವು ಸ್ವಾಗತಿಸುತ್ತೇವೆ ಆದರೆ ಒಂದು ಕಣ್ಣಿಗೆ ಬೆಣ್ಣೆ ಇನ್ನೊಂದು ಕಣ್ಣಿಗೆ ಸುಣ್ಣದಂತೆ ಮಾಡಿದ್ದಾರೆ. ಇನ್ನು
ಕಾರವಾರ ಶಾಸಕ ಸತೀಶ ಸೈಲ್ ಅವರು ಅವರ ಮನೆಗೆ ಭೇಟಿ ನೀಡಿ ಸಾಂತ್ವನ ಸಹ ಹೇಳಿಲ್ಲ.
ಆರ್. ಸಿ.ಬಿ. ಸಂಭ್ರಮಾಚರಣೆಯ ವೇಳೆ ನಡೆದ ಕಾಲ್ತುಳಿತ ಘಟನೆಯಲ್ಲಿ ಮರಣ ಹೊಂದಿದವರಿಗೆ ಸರಕಾರ 25 ಲಕ್ಷವನ್ನು ಎರಡು ದಿನದೊಳಗೆ ನೀಡಿರುವ ಸರಕಾರವು ಗುಡ್ಡ ಕುಸಿತದ ಕುಟುಂಬಕ್ಕೆ ತಾತ್ಕಾಲಿಕ ಕೆಲಸವನ್ನು ನೀಡಿ ಕೈ ತೊಳೆದು ಕೊಂಡಿದ್ದಾರೆ. ಇದನ್ನು ಪ್ರಶ್ನಿಸಿ ಹೋರಾಟ ಮಾಡಿದರೆ ನನ್ನ ಸಹಿತ 7 ಜನರ ಮೇಲೆ ಕೇಸ್ ಹಾಕಿದ್ದಾರೆ. ಇವೆಲ್ಲದಕ್ಕು ಉಸ್ತುವಾರಿ ಸಚಿವ ಮಂಕಾಳ ವೈದ್ಯರೇ ಹೊಣೆಗಾರರು ಎಂದು ಕಿಡಿ ಕಾರಿದರು.
ಈ ಘಟನೆಗೆ ಸಂಭಂಧಿಸಿದಂತೆ ಈ ಹಿಂದಿನ ಎಸ್‌ಪಿ. ನಾರಾಯಣ ಹಾಗೂ ಡಿಸಿ ಲಕ್ಷ್ಮೀ ಪ್ರೀಯಾ ಅವರ ಮೇಲೆ ನಾನು 3 ಪ್ರಕರಣ ದಾಖಲಿಸಿದ್ದೇವೆ. ಅವರನ್ನು ಅಮಾನತ್ತು ಮಾಡಬೇಕೆಂಬ ಆಗ್ರಹ ಮಾಡಿದ್ದೇವೆ. ಸಚಿವರಿಗೆ ಎರಡು ನೀತಿ ಪಾಲಿಸಬಾರದು ಎಂದರು.
ಈ ಹಿಂದಿನ ಬಿಜೆಪಿ ಸರಕಾರ ನಾರಾಯಣ ಗುರು ನಿಗಮ ಸ್ಥಾಪಿಸಿದರು. ಆದರೆ ಇಂದಿನ ತನಕ ನಿಗಮಕ್ಕೆ ಹಣವನ್ನು ಸರಕಾರವು ನೀಡಿಲ್ಲ. ಸಮಾನತೆಯ ಹರಿಕಾರರು ನಾರಾಯಣ ಗುರು ಅವರ ಹೆಸರು ಹೇಳಿ ಅವರಿಗೆ ಸಂಪೂರ್ಣ ಅನ್ಯಾಯ ಮಾಡುವುದು. ಕಳೆದ ಬಜೆಟ್ ನಲ್ಲಿ ನಿಗಮದ ಅಭಿವ್ರದ್ಧಿಗೆ ಮನ್ನಣೆ ನೀಡಿಲ್ಲ.
ಹಾಲಿ ಮತ್ತು ಮಾಜಿ ಶಾಸಕರು ಸರ್ವ ಪಕ್ಷದಲ್ಲಿ ಗುರುತಿಸಿಕೊಂಡ ನಾಮಧಾರಿ ಈಡಿಗ ಸಮಾಜದ ನಾಯಕರುಗಳು ಸಮುದಾಯದ ಚಿಂತನೆ ಮಾಡಬೇಕಾದ ಅವಶ್ಯಕತೆ ಇದೆ. ಮಾಡದೇ ಇದ್ದಲ್ಲಿ ನಮ್ಮ ಸಮುದಾಯದ ಮುಂದಿನ ಭವಿಷ್ಯ ಹಾಳಾಗಲಿದೆ. ಸೆಪ್ಟೆಂಬರ್ 03 ರಂದು ಸಿದ್ದಾಪುರದಲ್ಲಿ ಸಮಗ್ರ ಚಿಂತನೆ- ಚರ್ಚೆ- ನಿರ್ಣಯ ಕಾರ್ಯಕ್ರಮ ಜರುಗಲಿದೆ ಎಂದ ಅವರು ನಮ್ಮ
ಸಮುದಾಯಕ್ಕೆ ಅನ್ಯಾಯ ಆದ ಹಿನ್ನೆಲೆ ಹೋರಾಟ ಅನಿವಾರ್ಯವಾಗಿದೆ. ಬಿಜೆಪಿ ಸರಕಾರ ಇದ್ದಾಗ ಎರಡು ಸಚಿವರಿದ್ದು ಮೂರು ನಿಗಮಕ್ಕೆ ಅಧ್ಯಕ್ಷ ಸ್ಥಾನ ನೀಡಿದ್ದರು.
ಈ ಸರಕಾರದಲ್ಲಿ ಒಬ್ಬರಿಗೆ ಮಾತ್ರ ಸಚಿವ ಸ್ಥಾನ ನೀಡಿದ್ದಾರೆ. ಆರು ಜನ ಕಾಂಗ್ರೆಸ್ ನಲ್ಲಿ ನಮ್ಮ ಸಮುದಾಯದ ಜನರಿದ್ದಾರೆ. ಇಬ್ಬರು ಎಮ್.ಎಲ್.ಸಿ., ಓರ್ವರು ಸಚಿವ, ಉಳಿದವರು ಶಾಸಕರುಗಳಿದ್ದಾರೆ ಎಂದರು.
ಇದೇ ರೀತಿ ಸಮುದಾಯವನ್ನು ಕಡೆಗಣಿಸಿದರೆ ಮುಂದೊಂದು ದಿನ ಹಳ್ಳಿ ಹಳ್ಳಿಗೆ ತೆರಳಿ ರಾಜಕೀಯ ಜಾಗ್ರತಿ ನೀಡಲಿದ್ದೇವೆ. ದೇಶದ ಪರವಾಗಿ ಇರುವದರ ಜೊತೆಗೆ ಜಾತಿಯ ಪರವಾಗಿ ಇರುವ ಸಮುದಾಯ ನಮ್ಮದಾಗಿದೆ. ಜಾತಿ ಜನಗಣತಿ ರಾಜ್ಯ ಸರಕಾರದಿಂದ
ಜನರು ನಾಮಧಾರಿ ಹೆಸರನ್ನು ಸೇರಿಸುವ ಕೆಲಸ ಎಲ್ಲರು ಮಾಡಬೇಕು. ಜಿಲ್ಲಾಡಳಿತ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರೇ ಶಿರೂರು ಗುಡ್ಡ ಕುಸಿತದ ಹೊಣೆಗಾರಿಕೆ ಹೊರಬೇಕಾಗಿದೆ ಎಂದರು.
ಸಚಿವರ ಕೈವಾಡ .?
ಇನ್ನು ನಾಮಧಾರಿ ಸಮಾಜದಲ್ಲಿ ಕಾರಣ ಇಲ್ಲದೇ ಸರಕಾರಿ ನೌಕರರು ವರ್ಗಾವಣೆ ಮಾಡುವುದು ಗೂಬೆ ಕೂರಿಸುವುದು. ಜಿಲ್ಲಾ ಉಸ್ತುವಾರಿ ಸಚಿವ ಕೈವಾಡ.
ನಿಮ್ಮ ಅವಧಿಯಲ್ಲಿಯೇ ಇದು ನಡೆದಿರುವುದು. ಇದು ನಮಗೆ ಮಾಹಿತಿ ಇದೆ. ಸಮಾಜದ ನೌಕರರಿಗೆ ಕಾರಣ ಇಲ್ಲದೇ ವರ್ಗಾವಣೆ ಮಾಡಿದರೆ ರಸ್ತೆಗಿಳಿದು ನಿಮ್ಮ ವಿರುದ್ದ ಹೋರಾಟ ಮಾಡಲಿದ್ದೇವೆ. ನಮ್ಮನ್ನು ಟಾರ್ಗೆಟ್ ಮಾಡಿದರೆ ನಿಮ್ಮನ್ನೆ ಮುಂದೆ ಟಾರ್ಗೆಟ್ ಮಾಡಲಿದ್ದೇವೆ.
ಸಾಕ್ಷಿ ಸಮೇತ ಮುಂದಿನ ದಿನದಲ್ಲಿ ನೀಡಲಿದ್ದೇವೆ ಎಂದರು.
ಇದೇ ವೇಳೆ ಬಿ.ಕೆ. ಹರಿಪ್ರಸಾದ ಅವರ ಹಿಂದು ವಿರೋಧಿ ಹೇಳಿಕೆ ನೀಡಿದ್ದು ನಿಮ್ಮ ಸಮುದಾಯಕ್ಕೆ ಹಿನ್ನಡೆ ಆಗುದಿಲ್ಲವೇ ಎಂಬ ಪತ್ರಕರ್ತರ ಪ್ರಶ್ನೆಗೆ ಪ್ರಣವಾನಂದ ಸ್ವಾಮಿಗಳು ಇದು ಅವರು ರಾಜಕೀಯ ಪ್ರೇರಿತ ಹೇಳಿಕೆಗೆ ನಮ್ಮ ಸಹಮತ ಇಲ್ಲ. ನಮ್ಮದು ಧರ್ಮ ಆಧಾರಿತ ಚಿಂತನೆ ಮಾತು ಹೋರಾಟವಾಗಿದೆ ಎಂದರು.
ಈ ಸಂದರ್ಭದಲ್ಲಿ ಶ್ರೀಧರ ನಾಯ್ಕ, ರಾಜು ನಾಯ್ಕ, ಅಚ್ಯುತ ನಾಯ್ಕ, ಮಂಜುನಾಥ ನಾಯ್ಕ, ಸತೀಶಕುಮಾರ ನಾಯ್ಕ, ಅರುಣ ನಾಯ್ಕ ಮುಂತಾದವರು ಇದ್ದರು.
ವರದಿ: ಉಲ್ಲಾಸ್ ಶಾನಭಾಗ ಶಿರಾಲಿ.