

ದಿನಾಂಕ 29 08 .2025 ರ ಮಧ್ಯರಾತ್ರಿ ಭಟ್ಕಳದ ಶಿರಾಲಿ ಗುಡಿಹಿತ್ಲ ಗ್ರಾಮದ ಶ್ರೀ ಕಂಚಿನ ದುರ್ಗಾ ಪರಮೇಶ್ವರಿ ದೇವಸ್ಥಾನದ ಹುಂಡಿಯನ್ನು ಒಡೆದು ಕುಂಡಿಯಲ್ಲಿದ್ದ ಹಣವನ್ನು ಕಳ್ಳತನ ಮಾಡಿದ್ದರು. ಆ ಕುರಿತು ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಮೊ. ಸಂ 115/2025 ಕಲಂ 331(4),305(ಎ) BNS ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು.
ಈ ದಿನ ಸದರಿ ಪ್ರಕರಣಕ್ಕೆ ಸಂಬಂಧಪಟ್ಟಂತೆ A-1 ಆರೋಪಿಯಾದ ದರ್ಶನ್ ತಂದೆ ಮಂಜುನಾಥ್ ನಾಯಕ್ ಕಾರಗದ್ದೆ ನಿವಾಸಿ ಮತ್ತು A-2 ಆರೋಪಿಯಾದ ನಾರಾಯಣ ತಂದೆ ನಾಗಪ್ಪ ಗುಡಿಹಿತ್ಲ ಶಿರಾಲಿ ನಿವಾಸಿ ಇವರನ್ನ ದಸ್ತಗಿರಿ ಮಾಡಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಆರೋಪಿಗಳಿಂದ ಕೃತ್ಯಕ್ಕೆ ಬಳಸಲಾದ ಒಂದು ಬೈಕ್ ಅನ್ನ ವಸಪಡಿಸಿಕೊಳ್ಳಲಾಗಿದೆ. ಪ್ರಕರಣ ದಾಖಲಾದ 12 ಗಂಟೆಯೊಳಗೆ ಆರೋಪಿಗಳನ್ನು ಬಂಧಿಸಿದ ಭಟ್ಕಳ ಗ್ರಾಮೀಣ ಪೊಲೀಸ್ ಠಾಣಾ ಇನ್ಸ್ಪೆಕ್ಟರ್ ಮಂಜುನಾಥ್ ಲಿಂಗಾರೆಡ್ಡಿ ,ಸಬ್ ಇನ್ಸ್ಪೆಕ್ಟರ್ ಆದ ರನ್ನಗೌಡ ಮತ್ತು ಠಾಣೆಯ ಸಿಬ್ಬಂದಿಯವರನ್ನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯದ ಶ್ರೀ ದೀಪನ್ ಎಂ ಏನ್ IPS ರವರು ಅಭಿನಂದಿಸಿರುತ್ತಾರೆ.
ವರದಿ:ಉಲ್ಲಾಸ ಶಾನಭಾಗ್