ಭಟ್ಕಳ: ಜಮಾಅತೆ ಇಸ್ಲಾಮಿ ಹಿಂದ್ ಕರ್ನಾಟಕದ ವತಿಯಿಂದ ಸೆಪ್ಟೆಂಬರ್ ೩ ರಿಂದ ೧೩ರ ವರೆಗೆ “ಪ್ರವಾದಿ
ಮುಹಮ್ಮದ್(ಸ) ನ್ಯಾಯದ ಹರಿಕಾರ” ಎಂಬ ಶೀರ್ಷಿಕೆಯಡಿ ರಾಜ್ಯವ್ಯಾಪಿ ಅಭಿಯಾನ ನಡೆಯಲಿದೆ.
ಈ ಹಿನ್ನೆಲೆಯಲ್ಲಿ ಭಟ್ಕಳ ಶಾಖೆಯು ಉತ್ತರ ಕನ್ನಡ ಜಿಲ್ಲಾ ಮಟ್ಟದ ಕನ್ನಡ ಪ್ರಬಂಧ ಸ್ಪರ್ಧೆಯನ್ನು “ನ್ಯಾಯದ
ಹರಿಕಾರ ಪ್ರವಾದಿ ಮುಹಮ್ಮದ್(ಸ)” ವಿಷಯದಡಿ ಆಯೋಜಿಸಿದೆ. ಪ್ರಬಂಧವು ಕನ್ನಡ ಭಾಷೆಯಲ್ಲಿ, ಕೈಬರಹದಲ್ಲಿ,
ಫುಲ್‌ಸ್ಕೇಪ್ ಕಾಗದದಲ್ಲಿ ಒಂದೇ ಬದಿಯಲ್ಲಿ ಬರೆದು ಐದು ಪುಟಗಳನ್ನು ಮೀರದಂತಿರಬೇಕು. ವಿದ್ಯಾರ್ಥಿಗಳು, ಶಿಕ್ಷಕರು,
ಕಾಲೇಜು ಉಪನ್ಯಾಸಕರು, ಸಾಹಿತಿಗಳು, ಲೇಖಕರು ಹಾಗೂ ಪತ್ರಕರ್ತರು ಸ್ಪರ್ಧೆಯಲ್ಲಿ ಭಾಗವಹಿಸಬಹುದು.
ಬಹುಮಾನ ವಿವರ: ಪ್ರಥಮ ಬಹುಮಾನ: ರೂ. 8,000, ದ್ವಿತೀಯ ರೂ. 6,000, ತೃತೀಯ ರೂ. 4,000 ಮತ್ತು
ಪ್ರಶಸ್ತಿ ಪತ್ರ, ನಾಲ್ಕು ಸಮಾಧಾನಕರ ಬಹುಮಾನಗಳು: ತಲಾ ರೂ. 1,000 ಹಾಗೂ ಭಾಗವಹಿಸಿದ ಎಲ್ಲರಿಗೂ ಪ್ರಶಸ್ತಿ
ಪತ್ರ ನೀಡಲಾಗುವುದು.
ಪ್ರಬಂಧವು ವಿಷಯಕ್ಕೆ ಸೀಮಿತವಾಗಿರಬೇಕು, ಸ್ವಂತ ರಚನೆಯಾಗಿರಬೇಕು ಮತ್ತು ಕೈಬರಹದಲ್ಲೇ ಇರಬೇಕು. ಯಾವುದೇ
ಕೃತಿಯಿಂದ ಕಾಪಿಮಾಡಿದ ಬರಹಗಳನ್ನು ಸ್ವೀಕರಿಸಲಾಗುವುದಿಲ್ಲ. ಬರಹ ತಲುಪಿಸಲು ಸೆ.೧೦ ಕೊನೆಯ ದಿನಾಂಕ
ಆಗಿರುತ್ತದೆ. ಪ್ರಬಂಧ ಕಳುಹಿಸಬೇಕಾದ ವಿಳಾಸ, ಸಂಚಾಲಕರು, ಜಿಲ್ಲಾ ಮಟ್ಟದ ಸೀರತ್ ಪ್ರಬಂಧ ಸ್ಪರ್ಧೆ, ದಾವತ್
ಸೆಂಟರ್, ಸುಲ್ತಾನ್ ಸ್ಟ್ರೀಟ್, ಭಟ್ಕಳ-581320. ಹೆಚ್ಚಿನ ಮಾಹಿತಿಗೆ ಎಂ.ಆರ್. ಮಾನ್ವಿ, 9886455416ಗೆ
ಸಂಪರ್ಕಿಸಬಹುದಾಗಿದೆ. ಸ್ಪರ್ಧೆಯು ಎಲ್ಲರಿಗೂ ಮುಕ್ತವಾಗಿದ್ದು, ಭಾಗವಹಿಸುವವರು ತಮ್ಮ ಸೃಜನಶೀಲತೆಯನ್ನು
ಪ್ರದರ್ಶಿಸಲು ಇದೊಂದು ಅವಕಾಶವಾಗಿದೆ ಎಂದು ಆಯೋಜಕರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
“ನ್ಯಾಯದ ಹರಿಕಾರ ಪ್ರವಾದಿ ಮುಹಮ್ಮದ್(ಸ)” ಉ.ಕ ಜಿಲ್ಲಾ ಮಟ್ಟದ ಪ್ರಬಂಧ ಸ್ಪರ್ಧೆ
