ಅನಧಿಕೃತ ಲಾಟರಿ ಮಾರಾಟ ಮಾಡುವುದನ್ನು ತಡೆಹಿಡಿಯಲು ಜಿಲ್ಲೆಯಲ್ಲಿ ಫ್ಲೈಯಿಂಗ್ಸ್ ಸ್ಕ್ವಾಡ್ ರಚನೆ

Share

ಕರ್ನಾಟಕ ರಾಜ್ಯ ಲಾಟರಿ ರೆಗ್ಯುಲೇಷನ್ ಆಕ್ಟ್ 1998 ಮತ್ತು ಸರ್ಕಾರದ ಅಧಿಸೂಚನೆ ಸಂಖ್ಯೆ ಎಫ್ ಡಿ 22 ಸಉಲಾ 2006 ದಿನಾಂಕ 27. 03. 2007 ರಂತೆ ಕರ್ನಾಟಕ ರಾಜ್ಯವನ್ನು ದಿನಾಂಕ 01.04.2007 ರಿಂದ ಲಾಟರಿ ಮುಕ್ತ ವಲಯವನ್ನಾಗಿ ಘೋಷಿಸಿದ್ದು ಸರ್ಕಾರದ ಆದೇಶ ದಿನಾಂಕ 12.02.2016 ರಂತೆ ಜಿಲ್ಲಾಧಿಕಾರಿಗಳು ಉತ್ತರ ಕನ್ನಡ ಕಾರವಾರ ರವರ ಅಧ್ಯಕ್ಷತೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಉತ್ತರ ಕನ್ನಡ ಕಾರವಾರ,ವಾಣಿಜ್ಯ ತೆರಿಗೆ ಸಹಾಯಕ ಆಯುಕ್ತರು (ಜಾರಿ ) ಶಿರಸಿ ಮತ್ತು ಸಹಾಯಕ ನಿರ್ದೇಶಕರು ಪಿಂಚಣಿ ಸಣ್ಣ ಉಳಿತಾಯ ಮತ್ತು ಆಸ್ತಿ- ಋಣ ನಿರ್ವಹಣೆ ಉತ್ತರಕನ್ನಡ ಕಾರವಾರ ರವರು ಸೇರಿದಂತೆ ಸದಸ್ಯರ ಒಳಗೊಂಡ ಫ್ಲೈಯಿಂಗ್ ಸ್ಕ್ವಾಡ್ ರಚಿಸಲಾಗಿದೆ. ಜಿಲ್ಲೆಯ ಎಲ್ಲಾ ಸಾರ್ವಜನಿಕರ ಗಮನಕ್ಕೆ ಜಿಲ್ಲೆಯಲ್ಲಿ ಅಭಿವೃದ್ಧಿ ಹೆಸರಿನಲ್ಲಿ ಬಹುಮಾನ ಯೋಜನೆ ಹೆಸರಿನಲ್ಲಿ ಹಬ್ಬ- ಉತ್ಸವ ಕಾರ್ಯಕ್ರಮದ ಹೆಸರಿನಲ್ಲಿ ಲಾಟರಿ ಟಿಕೆಟ್ ಗಳನ್ನು ಮುದ್ರಿಸುವುದು ಮಾರಾಟ ಮಾಡುವುದು ಹಾಗೂ ಖರೀದಿಸುವುದು ಅಪರಾಧವಾಗಿರುತ್ತದೆ ಅಲ್ಲದೆ ಮಟಕವನ್ನು ಆಡುವುದು ಮತ್ತು ಅಂತರ್ ರಾಜ್ಯ ಲಾಟರಿ ಟಿಕೆಟ್ ಗಳನ್ನು ಮಾರುವುದು ಖರೀದಿಸುವುದು ಮುದ್ರಿಸುವುದು ಸಹ ನಿಷೇಧವಿದ್ದು ಇಂತಹ ಯಾವುದೇ ಅನಧಿಕೃತ ಲಾಟರಿ ಮಾಡಿ ಮಾರಾಟ ಮಾಡುವುದು ಕಂಡು ಬಂದಲ್ಲಿ ಸಾರ್ವಜನಿಕರು ಕೂಡಲೇ ಹತ್ತಿರದ ಪೊಲೀಸ್ ಠಾಣೆಗಳಿಗೆ ಮಾಹಿತಿ ನೀಡಲು ಕೋರಲಾಗಿದೆ. ಈ ಹಿನ್ನಲೆಯಲ್ಲಿ ಅಂತವರ ಮೇಲೆ ಕ್ರಮ ಕೈಗೊಳ್ಳಲು ಪೊಲೀಸ್ ಇಲಾಖೆಗೆ ಈಗಾಗಲೇ ಸೂಚನೆ ನೀಡಲಾಗಿದೆ ಸಾರ್ವಜನಿಕರು ಯಾವುದೇ ಆಸೆ ಆಮಿಷಗಳಿಗೆ ಒಳಗಾಗದಿರಲು ಎಚ್ಚರಿಕೆ ನೀಡಿದೆ. ಖರೀದಿದಾರರು ಈ ಬಗ್ಗೆ ಎಚ್ಚರ ವಹಿಸುವುದು ಸೂಕ್ತವಾಗಿದೆ. ಯಾವುದೇ ದಿನಪತ್ರಿಕೆ ಅಥವಾ ದೃಶ್ಯಮಾಧ್ಯಮ ಅವರು ಇಂತಹ ಅನಧಿಕೃತ ಲಾಟರಿ ಡ್ರಾ ಫಲಿತಾಂಶಗಳನ್ನು ಪ್ರಕಟಿಸಬಾರದು ಕೋರಿದ್ದಾರೆ ಒಂದು ವೇಳೆ ಈ ರೀತಿ ಮಾಡಿದ್ದಲ್ಲಿ ಅನಧಿಕೃತ ಲಾಟರಿಗಳಿಗೆ ತಾವು ಕೂಡ ಸಹಕಾರ ನೀಡಿದಂತಾಗುತ್ತದೆ. ಈ ಹಿನ್ನಲೆಯಲ್ಲಿ ಎಚ್ಚರಿಕೆವಹಿಸಲು ಹಾಗೂ ಇಂತಹ ಅಕ್ರಮ ಚಟುವಟಿಕೆಗಳು ಕಂಡು ಬಂದಲ್ಲಿ ಪೊಲೀಸ್ ಇಲಾಖೆಗೆ ಅಥವಾ ಸಂಬಂಧಿಸಿ ದವರಿಗೆ ತಕ್ಷಣ ದೂರು ನೀಡಲು ಜಿಲ್ಲಾಧಿಕಾರಿಗಳು ಮನವಿ ಮಾಡಿದ್ದಾರೆ.

ವರದಿ: ಉಲ್ಲಾಸ್ ಶಾನ್ಭಾಗ್

Leave a Reply

Your email address will not be published. Required fields are marked *

error: Content is protected !!