ಪಾಲಕರ ಸಮ್ಮಿಲನ ಕಾರ್ಯಕ್ರಮ ಸಂಪನ್ನ

Share

ಭಟ್ಕಳ: ತಾಲೂಕಿನ ಶ್ರೀ ಗುರು ಸುಧೀಂದ್ರ ಪದವಿ ಮಹಾವಿದ್ಯಾಲಯದಲ್ಲಿ ಪಾಲಕರ ಸಮ್ಮಿಲನ ಕಾರ್ಯಕ್ರಮ ಜರುಗಿತು. ಕಾರ್ಯಕ್ರಮದ ಉದ್ಘಾಟಕರಾಗಿ ಆಗಮಿಸಿದ ಕುಮಟಾದ ಹನುಮಂತ ಬೆಣ್ಣೆ ಪಿ.ಯು.ಕಾಲೇಜಿನ ರಸಾಯನ ಶಾಸ್ತ್ರ ಉಪನ್ಯಾಸಕರಾದ ಶ್ರೀ ಆನಂದ ನಾಯಕ್ ರು ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ದ್ವಿತೀಯ ಪಿ.ಯು.ಸಿ ಯಲ್ಲಿ ಉತ್ತಮ ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಪೂರ್ವ ವಿದ್ಯಾರ್ಥಿಗಳು ನೀಡುವ ವಿದ್ಯಾರ್ಥಿವೇತನ, ಪ್ರಶಸ್ತಿ ಪತ್ರ ಪ್ರದಾನ ಮಾಡಿ, ಮಾತನಾಡಿದ ಅವರು ವಿದ್ಯಾರ್ಥಿ ಮತ್ತು ಪಾಲಕರ ನಡುವಿನ ಸಂಬAಧ ಜೀವನ ಪಾಠಗಳಿಂದ ಕೂಡಿರಬೇಕು ಮತ್ತು ವಿದ್ಯಾರ್ಥಿಗಳು ಸತ್ಯ, ನ್ಯಾಯ, ಸಹಕಾರ ಮುಂತಾದ ಜೀವನ ಮೌಲ್ಯಗಳನ್ನು ಬೆಳೆಸಿಕೊಳ್ಳುವುದರೊಂದಿಗೆ, ನಿತ್ಯ ಆಧ್ಯಾತ್ಮಿಕ ಧ್ಯಾನವನ್ನು ರೂಢಿಸಿಕೊಳ್ಳಬೇಕು ಎಂದರು.
ಭಟ್ಕಳ ಎಜುಕೇಷನ್ ಟ್ರಸ್ಟ್ ನ ಟ್ರಸ್ಟಿ ಮ್ಯಾನೇಜರ ರಾದ ಶ್ರೀ ರಾಜೇಶ್ ನಾಯಕ್ ರವರು ಮಾತನಾಡಿ ಕಾಲೇಜಿನ ಶಿಸ್ತಿನ ಬಗ್ಗೆ ಅರಿವು ಮೂಡಿಸಿದರು. ಬಿ.ಕಾಂ ನ ಉಪ ಪ್ರಾಂಶುಪಾಲರಾದ ಶ್ರೀ ಫಣಿಯಪ್ಪಯ್ಯ ಹೆಬ್ಬಾರ್ ಅವರು ಕಾಲೇಜಿನಲ್ಲಿ ನಡೆಯುವ ಪಠ್ಯೇತರ ಚಟುವಟಿಕೆಗಳ ಬಗ್ಗೆ ಮಾಹಿತಿ ನೀಡಿದರು. ಕಾಲೇಜಿನ ಪ್ಲೇಸ್ಮೆಂಟ್ ಆಫಿಸರ್ ವಿಘ್ನೇಶ್ ಪ್ರಭು ಅವರು ಕಾಲೇಜಿನಲ್ಲಿ ನಡೆಯುವ ಉದ್ಯೋಗ ತರಬೇತಿಯ ಬಗ್ಗೆ ಸವಿಸ್ತಾರ ಮಾಹಿತಿ ನೀಡಿದರು. ಬಿ.ಬಿ.ಎ ಮತ್ತು ಬಿ.ಎ ವಿಭಾಗದ ಉಪ ಪ್ರಾಂಶುಪಾಲರಾದ ಶ್ರೀ ವಿಶ್ವನಾಥ್ ಭಟ್ ರವರು ವಿದ್ಯಾರ್ಥಿ ವೇತನದ ಕುರಿತು ತಿಳಿಸಿದರು.

ಪ್ರಾಂಶುಪಾಲರಾದ ಶ್ರೀ ಶ್ರೀನಾಥ ಪೈ ಅವರು ಸ್ವಾಗತಿಸಿ ಪ್ರಾಸ್ತಾವಿಕ ನುಡಿಗಳನ್ನು ಆಡಿದರು. ಉಪನ್ಯಾಸಕರಾದ ಶ್ರೀ ಸುಬ್ರಹ್ಮಣ್ಯ ನಾಯ್ಕ ಅವರು ವಂದಿಸಿದರು. ಉಪನ್ಯಾಸಕ ಶ್ರೀ ದೇವೇಂದ್ರ ಕಿಣಿಯವರು ಕಾರ್ಯಕ್ರಮವನ್ನು ನಿರೂಪಿಸಿದರು.

Leave a Reply

Your email address will not be published. Required fields are marked *

error: Content is protected !!